* ಐದನೇ ಸುತ್ತಿನ ಮತ ಎಣಿಕೆಯಲ್ಲೇ ಗೆಲುವಿನ ಕೋಟಾ ತಲುಪಿದ ಹನುಮಂತ ನಿರಾಣಿ
* ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ ನಿರಾಣಿ
* ಅರುಣ್ ಶಹಾಪುರ ಸೋಲು ನೋವು ತಂದಿದೆ
ಬೆಳಗಾವಿ(ಜೂ.15): ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಐದನೇ ಸುತ್ತಿನ ಮತ ಎಣಿಕೆಯಲ್ಲೇ ಹನುಮಂತ ನಿರಾಣಿ ಗೆಲುವಿನ ಕೋಟಾ ತಲುಪಿದ್ದಾರೆ ಅಂತ ತಿಳಿದು ಬಂದಿದೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಅಂತ ತಿಳಿದು ಬಂದಿದೆ.
ಇನ್ನೂ 16 ಸಾವಿರ ಮತಗಳ ಎಣಿಕೆ ಕಾರ್ಯ ಬಾಕಿಯಿದೆ. ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿಗೆ 35 ಸಾವಿರ ಮತಗಳು, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್‌ಗೆ 7500 ಮತಗಳು ಬಿದ್ದಿವೆ. ಐದನೇ ಸುತ್ತಿನಲ್ಲಿ 25 ಸಾವಿರ ಮತಗಳ ಅಂತರದಿಂದ ಹನುಮಂತ ನಿರಾಣಿ ಮುನ್ನಡೆ ಸಾಧಿಸಿದ್ದಾರೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 8 ಸಾವಿರದಷ್ಟು ಮತಗಳು ತಿರಸ್ಕೃತಗೊಂಡಿವೆ.
ರಾಹುಲ್ ಮೇಲಿನ ಭಯದಿಂದ ಟಾರ್ಗೆಟ್ ಪಾಲಿಟಿಕ್ಸ್: ಖಾದರ್
ಈ ಬಗ್ಗೆ ಮಾತನಾಡಿದ ಹನುಮಂತ ನಿರಾಣಿ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷದ ಎಲ್ಲಾ ನಾಯಕರು, ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಸಲಕ್ಕಿಂತ ಹೆಚ್ಚಿನ ಅಂತರದಲ್ಲಿ ಈ ಬಾರಿ ಗೆಲುವು ದಾಖಲಾಗಿದೆ. 8 ಸಾವಿರದಷ್ಟು ಮತಗಳು ತಿರಸ್ಕೃತಗೊಂಡಿವೆ. ಮತದ ಮುಂದೆ ಒಂದರ ಬದಲಾಗಿ ರೈಟ್ ಮಾರ್ಕ್ ಹಾಕಲಾಗಿದೆ. ಹೀಗಾಗಿ ರೈಟ್ ಮಾರ್ಕ್ ಹಾಕಿದ ಮತಗಳು ತಿರಸ್ಕೃತಗೊಂಡಿವೆ. ಮುಂದಿನ ದಿನದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅರುಣ್ ಶಹಾಪುರ ಸೋಲು ನೋವು ತಂದಿದೆ. ಶಹಾಪುರ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ ಅಂತ ನಿರಾಣಿ ತಿಳಿಸಿದ್ದಾರೆ.