ಹಾನಗಲ್‌ ಬೈ ಎಲೆಕ್ಷನ್: ಬಿಜೆಪಿಯಲ್ಲಿನ ಬಂಡಾಯ ಶಮನ, ಕಾಂಗ್ರೆಸ್‌ಗೆ ನಿರಾಸೆ

By Suvarna News  |  First Published Oct 13, 2021, 10:34 PM IST

* ರಂಗೇರಿದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ
* ಬಿಜೆಪಿಯಲ್ಲಿನ ಬಂಡಾಯ ಶಮನ
* ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ವಾಪಸ್


ಹಾವೇರಿ, (ಅ.13): ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Hangal By Election) ಬಿಜೆಪಿಯಲ್ಲಿನ ಬಂಡಾಯ ಶಮನವಾಗಿದೆ. ಇದರಿಂದ ಬಿಜೆಪಿ (BJP) ನಿಟ್ಟುಸಿರು ಬಿಟ್ಟಿದೆ.

ಹೌದು...ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಚನ್ನಪ್ಪ ಬಳ್ಳಾರಿ ಅವರು ತಮ್ಮ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಸಚಿವ ಮುರುಗೇಶ ನಿರಾಣಿ (Murugesh Nirani) ಕಾರಿನಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಚನ್ನಪ್ಪ ಬಳ್ಳಾರಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು. ಇದರಿಂದ ಬಿಜೆಪಿಗೆ ಇದ್ದ ಆತಂಕ ದೂರವಾದಂತಾಯ್ತು.

Latest Videos

undefined

ಹಾನಗಲ್ ಬೈ ಎಲೆಕ್ಷನ್: ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಬಿಗ್ ಶಾಕ್

ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದಾವಣಗೆರೆಯ (Davanagere)  ಜಿಎಂಐಟಿಯಲ್ಲಿ ಚನ್ನಪ್ಪ ಬಳ್ಳಾರಿ ಜೊತೆ ಸಭೆ ನಡೆಸಿದ್ದರು. ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದರು. ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ( ಅ.13) ಚನ್ನಪ್ಪ ಬಳ್ಳಾರಿ ಅವರು ತಮ್ಮ ನಾಮಪತ್ರ ವಾಪಸ್ ಪಡೆದರು. 

ಹಾನಗಲ್ (Hangal) ಕ್ಷೇತ್ರದ ಉಪ ಚುನಾವಣೆಗೆ (BY Election) ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ. ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಚನ್ನಪ್ಪ ಬಳ್ಳಾರಿ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಿಂದಾಗಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿತ್ತು. 

ಅಲ್ಲದೇ ಪಂಚಮಸಾಲಿ ವೋಟ್‌ ಬ್ಯಾಂಕ್‌ ಅನ್ನು ಚನ್ನಪ್ಪ ಬಳ್ಳಾರಿ ಹೊಡೆಯುತ್ತಾರೆ ಎನ್ನುವ ಆತಂಕ ಬಿಜೆಪಿಗೆ ಇತ್ತು. ಮತ್ತೊಂದೆಡೆ ಕಾಂಗ್ರೆಸ್‌ಗೆ ಇದು ಒಳಗಿಂದೊಳಗೆ ಸಂತೋಷಗೊಂಡಿತ್ತು.

ಹಾನಗಲ್ ಉಪ ಚುನಾವಣೆಯ ನಾಮಪತ್ರಗಳನ್ನು ವಾಪಸ್ ಪಡೆಯಲು ಬುಧವಾರ ಕೊನೆ ದಿನವಾಗಿತ್ತು. ನಾಲ್ವರು ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದು, ಜೆಡಿಎಸ್ ಸೇರಿದಂತೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ನಿಯಾಜ್ ಶೇಖ್, ಬಿಜೆಪಿಯ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್‌ನ ಮಾನೆ ಶ್ರೀನಿವಾಸ, ಕರ್ನಾಟಕ ರಾಷ್ಟ್ರ ಸಮಿತಿಯ ಉಡಚಪ್ಪ ಬಸವಣ್ಣೇಪ್ಪ ಉದ್ದನಕಾಲ, ರೈತ ಭಾರತ ಪಕ್ಷದ ಫಕ್ಕೀರಗೌಡ ಶಂಕರಗೌಡ ಗಾಜೀಗೌಡ್ರ, ಲೋಕಶಕ್ತಿ ಪಕ್ಷದ ತಳವಾರ ಶಿವಕುಮಾರ ಅಂತಿಮ ಕಣದಲ್ಲಿದ್ದಾರೆ.

click me!