ಅಂದು ಸಿದ್ದು ವಾಚ್‌.. ಇಂದು ಡಿಕೆಶಿ ಕಿಕ್ ಬ್ಯಾಕ್.. ಕಾಂಗ್ರೆಸ್‌ ಅಂದ್ರೆ ಭ್ರಷ್ಟಾಚಾರದ DNA!

By Suvarna News  |  First Published Oct 13, 2021, 6:58 PM IST

* ಡಿಕೆಶಿ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಗುಸು ಗುಸು
* ಭ್ರಷ್ಟಾಚಾರ ಕಾಂಗ್ರೆಸ್‌ಗೆ ರಕ್ತಗತವಾಗಿದೆ
* ಕೇಂದ್ರ ಸಚಿವ, ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಠಕ್ಕರ್
* ಸಿದ್ದರಾಮಯ್ಯ  ಐಷಾರಾಮಿ ವಾಚ್ ಪ್ರಕರಣದ ಮತ್ತೆ ಜನರ ಮುಂದೆ


ಬೆಂಗಳೂರು(ಅ. 13)  ಡಿಕೆ ಶಿವಕುಮಾರ್(DK Shivakumar) ವಿರುದ್ಧ ಕಾಂಗ್ರೆಸ್  (Congress) ಕಚೇರಿಯಲ್ಲಿ ಕಾಂಗ್ರೆಸ್ ನಾಯಕರೇ ಗುಸು ಗುಸು ಎಂದು ಮಾತನಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿ ಹಬ್ಬಿದೆ.  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ವಿಎಸ್ ಉಗ್ರಪ್ಪ ಮತ್ತು ಸಲೀಂ ನಡುವೆ ನಡೆದ ಗುಟ್ಟಿನ ಮಾತುಕತೆ ರಟ್ಟಾಗಿತ್ತು.  ಸಹಜವಾಗಿಯೇ ಕರ್ನಾಟಕ ರಾಜಕಾರಣದಲ್ಲಿ(Karnataka Politics) ಇದು ಸಂಚಲನ ತಂದಿತು. 

ಕೇಂದ್ರ ಕೌಶಲ್ಯಾವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ( Minister of State for Skill Development and Entrepreneurship and Electronics and Information Technology), ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ (Rajeev Chandrasekhar) ಸರಿಯಾದ ಠಕ್ಕರ್ ಕೊಟ್ಟಿದ್ದಾರೆ . ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 12  ಪರ್ಸೆಂಟ್ ಕಿಕ್ ಬ್ಯಾಕ್ (kickback)ಪಡೆದುಕೊಳ್ಳುತ್ತಾರೆ ಎಂದು ಅವರ ನಾಯಕರೇ ಆರೋಪ ಮಾಡಿದ ನಂತರ ಹಳೆಯ ಟ್ವೀಟ್ ಒಂದನ್ನು ಜನರ ಮುಂದೆ  ಇಟ್ಟಿದ್ದಾರೆ.

Tap to resize

Latest Videos

undefined

ಕರ್ನಾಟಕಕ್ಕೆ ನೀಡಿದ್ದ ಭರವಸೆ ಒಂದೇ ತಿಂಗಳಲ್ಲಿ ಪೂರೈಕೆ

ಕರ್ನಾಟಕ ಕಾಂಗ್ರೆಸ್ ನೊಂದಿಗೆ ಭ್ರಷ್ಟಾಚಾರ (Corruption)ಎನ್ನುವುದು ಬೆರೆತು ಹೋಗಿದೆ. ಅದನ್ನು ಬೇಪರ್ಡಿಸಲು ಸಾಧ್ಯವೇ ಇಲ್ಲ. ಅವರ ಡಿಎನ್ ಎ (DNA) ದಲ್ಲಿಯೇ  ಹಗರಣಗಳು ಸೇರಿಕೊಂಡಿದೆ.  ಇದೇ ಕಾರಣದಿಂದಲೇ ಅಧಿಕಾರ ಹಿಡಿದು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎಂದು ಕರ್ನಾಟಕವನ್ನು(Karnataka) ರಾಜ್ಯಸಭೆಯಲ್ಲಿ (Rajya Sabha) ಪ್ರತಿನಿಧಿಸುವ ರಾಜೀವ್ ಚಂದ್ರಶೇಖರ್ ಟ್ವೀಟ್ ಏಟು ಕೊಟ್ಟಿದ್ದಾರೆ.

ವಾಚ್ ಪ್ರಕರಣ: ಸಿದ್ದರಾಮಯ್ಯ (Siddaramaiah) ಅವರ ಹುಬ್ಲೋಟ್ ವಾಚ್ ಪ್ರಕರಣವನ್ನು ರಾಜೀವ್ ಚಂದ್ರಶೇಖರ್ ಮತ್ತೆ ಕೆದಕಿ ತೆಗೆದಿದ್ದಾರೆ.  ಮಾರ್ಚ್ 17, 2019  ರಲ್ಲಿ ಮಾಡಿದ್ದ ಟ್ವಿಟ್ ಒಂದನ್ನು ಜನರ ಮುಂದೆ ಇಟ್ಟಿದ್ದು.. ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿದ್ದ ಟ್ವೀಟ್  ಉಲ್ಲೇಖಿಸಿದ್ದಾರೆ.

ನುಡಿದಂತೆ ನಡೆದ ಕೇಂದ್ರ ಸಚಿವ.. ನೆಟ್ ವರ್ಕ್ ನೀಡಲು ಕಾರ್ಯಪಡೆ

ಪೊಲೀಸ್ (Police) ಅಧಿಕಾರಿಗಳಂತೆ ನಟಿಸುವ ಕಳ್ಳರು ನಮ್ಮ ಮುಂದೆ  ಇರುವುದು ದೊಡ್ಡ ದುರಂತ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು.  ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಗುರಿಯಾಗಿರಿಸಿಕೊಂಡು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ್ದ ರಾಜೀವ್ ಚಂದ್ರಶೇಖರ್..  ಮೈ ಬಿ ಚೌಕಿದಾರ್ ಎಂದು ಹೇಳುತ್ತ .. ಕರ್ನಾಟಕವನ್ನು ಯಾರೂ ಲೂಟಿ ಮಾಡಿದ್ದಾರೆ ಎನ್ನುವುದು ನಿಮ್ಮ ಹೂಬ್ಲೋಟ್ ವಾಚ್ ನಿಂದಲೇ ಗೊತ್ತಾಗಿದೆ..  ಮಂಗೋಲರಂತೆ ಲೂಟಿ ಹೊಡೆದಿದ್ದು ಜನ ತಮ್ಮ ಧ್ವನಿ ಎತ್ತಲಿದ್ದಾರೆ.. ಸರಿಯಾದ ಪಾಠ ಕಲಿಸಲಿದ್ದಾರೆ ಎಂದಿದ್ದರು.

ಕಾಂಗ್ರೆಸ್ ನಾಯಕರೇ ತಮ್ಮವರೇ ವಿರುದ್ಧ ಬೃಹತ್  ಹಗರಣಗಳ ಮಾತನಾಡಿದ್ದಾರೆ. ಕಾಂಗ್ರೆಸ್ ನ ಕರ್ಮ ಕಾಂಡ ಬಯಲಿಗೆ ಬಂದಿದೆ. ಕಲೆಕ್ಷನ್ ಗಿರಾಕಿಗಳು ಅಂಥ ನಾವು  ಹೇಳಿಲ್ಲ.. ಅವರ ಪಕ್ಷದವರೇ ಹೇಳಿದ್ದಾರೆ ಎಂದು ಇನ್ನೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. 

 

im putting this old tweet out there - tdy aftr Karnataka Cong men outed their DKS for taking upto 12% kickbacks.

Corruption n Karnataka Cong are inseparable. Its in their DNA. Thts how they bcm presidents in their party n bcm "favourites" of their dynasty 😅 https://t.co/vv17hFB9sF

— Rajeev Chandrasekhar 🇮🇳 (@Rajeev_GoI)
click me!