Karnataka Politics: ಬಿಜೆಪಿ ಸರ್ಕಾರದ 40% ಕಮೀಷನ್‌ ವಿರುದ್ಧ ಕಾಂಗ್ರೆಸ್‌ ಹೋರಾಟ

Published : Mar 29, 2022, 06:56 AM IST
Karnataka Politics: ಬಿಜೆಪಿ ಸರ್ಕಾರದ 40% ಕಮೀಷನ್‌ ವಿರುದ್ಧ ಕಾಂಗ್ರೆಸ್‌ ಹೋರಾಟ

ಸಾರಾಂಶ

*  ಎಂ.ಬಿ.ಪಾಟೀಲ್‌ ಪದಗ್ರಹಣ ಸಮಾರಂಭದಲ್ಲಿ ಸಂಕಲ್ಪ *  ರಾಜ್ಯದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ *  ನಾಗಪುರ ಅಥವಾ ಕೇಶವಕೃಪಾಗೆ ಹೋಗುತ್ತಿದೆಯೋ?

ಬೆಂಗಳೂರು(ಮಾ.29):  ಕಾಂಗ್ರೆಸ್‌ ಪಕ್ಷವು ರಾಜ್ಯದ ಬಿಜೆಪಿ ಸರ್ಕಾರದ(BJP) 40 ಪರ್ಸೆಂಟ್‌ ಭ್ರಷ್ಟಾಚಾರವನ್ನು ವ್ಯಾಪಕವಾಗಿ ಬಿಂಬಿಸಲು ಹಾಗೂ ರಾಜ್ಯಾದ್ಯಂತ ಹೋರಾಟ ರೂಪಿಸಲು ಸಂಕಲ್ಪ ಮಾಡಿದೆ. ಸೋಮವಾರ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌(MB Patil) ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ(Randeep Surjewala) ಅವರು, 40 ಪರ್ಸೆಂಟ್‌ ಕಮಿಷನ್‌(40 Percent Commission) ಹಾಗೂ ಸಚಿವರ ಲಂಚದ ಬೇಡಿಕೆಗೆ ಬಗ್ಗೆ ಇತ್ತೀಚೆಗೆ ಗುತ್ತಿಗೆದಾರರು ಪ್ರಧಾನಮಂತ್ರಿಗಳಿಗೆ ಬರೆದಿರುವ ಪತ್ರದ ದಾಖಲೆಗಳನ್ನು ಪ್ರದರ್ಶಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar), ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪ್ರತಿಯೊಬ್ಬರೂ 40 ಪರ್ಸೆಂಟ್‌ ಭ್ರಷ್ಟಾಚಾರದ ವಿಷಯವಾಗಿಯೇ ಮಾತನಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Congress Padayatre: ಮೇಕೆದಾಟು ಜಾರಿ ಇಚ್ಛಾಶಕ್ತಿ ಬಿಜೆಪಿಗಿಲ್ಲ: ಸುರ್ಜೇವಾಲಾ

ಸಂಕಲ್ಪಕ್ಕೆ ಸುರ್ಜೇವಾಲಾ ಕರೆ:

ಮೊದಲಿಗೆ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, ರಾಜ್ಯದಲ್ಲಿಂದು ಅಧಿಕಾರದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ(Corrupt Government). ಇದು ಶೇ.40ರಷ್ಟು ಕಮಿಷನ್‌ ಸರ್ಕಾರ. ಈ ಸರ್ಕಾರ ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಹರಾಜು ಕೂಗಿ ಪದಾರ್ಥ ಕೊಳ್ಳುವಂತೆ ಶಾಸಕರನ್ನು ಖರೀದಿಸಿ ರೂಪುಗೊಂಡಿದೆ. ಹೀಗಾಗಿಯೇ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ. ಇಂದು ಇಲ್ಲಿರುವ ಎಲ್ಲರೂ ಒಂದು ಸಂಕಲ್ಪ ಮಾಡಬೇಕು. ಬಿಜೆಪಿ ಭ್ರಷ್ಟಾಚಾರವನ್ನು ರಾಜ್ಯದ ಮೂಲೆ-ಮೂಲೆಗೂ ತಲುಪಿಸಬೇಕು. ರಾಜ್ಯದ ಜನರ ಹಣ ತಿಂದವರನ್ನು ಅಧಿಕಾರದಲ್ಲಿ ಕೂರಲು ಬಿಡಬಾರದು ಎಂದು ಕರೆ ನೀಡಿದರು.

ಬೊಮ್ಮಾಯಿ(Basavaraj Bommai) ಅವರ ಸರ್ಕಾರ ಹಾಗೂ ಅದರ ಮಂತ್ರಿಗಳು, ನಾಯಕರು ಶೇ.40 ರಷ್ಟುಕಮಿಷನ್‌ ಪಡೆದು ಆಡಳಿತ ಮಾಡುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಶೇ.40 ರಷ್ಟುಹಣ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ರಾಜ್ಯದ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಹೀಗಿದ್ದರೂ ಯಾವುದೇ ತನಿಖೆಗೂ ಆದೇಶಿಸಿಲ್ಲ. ಸಿಬಿಐ, ಐಟಿ ಎಲ್ಲವೂ ಮೌನಕ್ಕೆ ಶರಣಾಗಿವೆ. ಸದ್ಯದಲ್ಲೇ ಅಮಿತ್‌ ಶಾ ಹಾಗೂ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂಬ ವಿಚಾರ ಕೇಳಿದ್ದೇನೆ. ಅವರು ಇಲ್ಲಿರುವ ಎಲ್ಲ ಭ್ರಷ್ಟಮಂತ್ರಿಗಳನ್ನು ಕಿತ್ತೊಗೆಯಬೇಕು, ಇಲ್ಲದಿದ್ದರೆ ಇಲ್ಲಿ ದೋಚಲಾಗುತ್ತಿರುವ ಹಣ ದೆಹಲಿ ಸರ್ಕಾರಕ್ಕೆ ಹಾಗೂ ನಾಗ್ಪುರಕ್ಕೆ ರವಾನೆಯಾಗಲಿದೆ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಏಪ್ರಿಲ… ತಿಂಗಳಿಂದ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಕೆಂಪಣ್ಣನವರೇ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಿಮಗೆ ನಾವು ಬಲ ತುಂಬುತ್ತೇವೆ ಎಂದರು.

100ರಲ್ಲಿ 25 ರು. ಕೆಲಸ: ಸಿದ್ದರಾಮಯ್ಯ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ಬಿಜೆಪಿಯ ಎಚ್‌.ವಿಶ್ವನಾಥ್‌, ಬಸನಗೌಡ ಪಾಟಿಲ್‌ ಯತ್ನಾಳ್‌ ಅವರೇ ಹೇಳುತ್ತಿದ್ದಾರೆ. ವಿಶ್ವನಾಥ್‌ ಅವರು ಭದ್ರ ಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ರು.ಗೆ ಟೆಂಡರ್‌ ಕರೆದಿದ್ದು ಯಡಿಯೂರಪ್ಪನವರ ಮಗ ವಿಜಯೇಂದ್ರ 10 ಪರ್ಸೆಂಟ್‌ ಕಮಿಷನ್‌ ಪಡೆದಿದ್ದಾರೆ ಎಂದು ಆರೋಪ ಮಾಡುತ್ತಾರೆ.

ಅಲ್ಲದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಚ್‌ ಕಮಿಷನ್‌ ಕೊಡಬೇಕು ಎಂದಿದ್ದಾರೆ. ಪ್ರತಿ 100 ರು.ಗಳಲ್ಲಿ ಶೇ.40 ರಷ್ಟುಕಮಿಷನ್‌, ಶೇ.20 ರಷ್ಟುಗುತ್ತಿಗೆದಾರರಿಗೆ, ಶೇ.15 ರಷ್ಟುಜಿಎಸ್‌ಟಿ ಹೋದರೆ ಇನ್ನು ಕೆಲಸ ಆಗುವುದು 25 ರು.ಗೆ ಮಾತ್ರ. ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಇಲ್ಲದಿದ್ದರೆ ಜನರೇ ಕಿತ್ತೊಗೆಯುತ್ತಾರೆ ಎಂದರು.

ಚುನಾವಣೆ ಸೋಲಿನಿಂದ ನಿರಾಶರಾಗಬೇಡಿ, ಬಲಿಷ್ಠ ಕಾಂಗ್ರೆಸ್ ಪಕ್ಷ ದೇಶಕ್ಕೆ ಬೇಕು ಎನ್ನುವುದು ನನ್ನ ಹಾರೈಕೆ ಎಂದು ನಿತಿನ್ ಗಡ್ಕರಿ!

ಗುತ್ತಿಗೆದಾರರ ಹೋರಾಟಕ್ಕೆ ಬೆಂಬಲ: ಡಿಕೆಶಿ

ಇದು 2 ಲಕ್ಷ ಗುತ್ತಿಗೆದಾರರು ಇರುವ ಸಂಘ. ಕೇವಲ ಗುತ್ತಿಗೆಗಳಲ್ಲಿ ಮಾತ್ರವಲ್ಲದೆ ಪೊಲೀಸರ ಹುದ್ದೆಯ ಪೋಸ್ಟಿಂಗ್‌ಗೂ ಸಹ ಲಂಚ ನಡೆಯುತ್ತಿದೆ. ಇವೆಲ್ಲವನ್ನೂ ಜನರ ಮುಂದಿಟ್ಟು ಹೋರಾಟ ಮಾಡಬೇಕು ಎಂದು ಹೇಳಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarju Kharge) ಮಾತನಾಡಿ, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದು, 40 ಪರ್ಸೆಂಟ್‌ ಸರ್ಕಾರವನ್ನು ಕಿತ್ತೊಗೆಯಬೇಕು. ನಾಗ್ಪುರದವರು ಎಲ್ಲ ಕಡೆ ಕೈಯಾಡಿಸುತ್ತಾರೆ. ಅವರ ಚೇಷ್ಟೆಯಿಂದಲೇ ಇಷ್ಟೆಲ್ಲಾ ಆಗುತ್ತಿದೆ. ಅವರ ವಿರುದ್ಧ ಜನರನ್ನು ಎಚ್ಚರಿಸಬೇಕು ಎಂದರು.

ನಾಗಪುರ ಅಥವಾ ಕೇಶವಕೃಪಾಗೆ ಹೋಗುತ್ತಿದೆಯೋ?

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ನಾಗ್ಪುರದ ಖಾಕಿ ಚಡ್ಡಿ, ಕರಿ ಟೋಪಿಯ ಪ್ರಚಾರಕರ ಸುಳ್ಳಿನ ಕಂತೆಗಳ ವಿರುದ್ದ ಪ್ರಚಾರ ಮಾಡಬೇಕು. ರಾಜ್ಯ ಸರ್ಕಾರ ಪಡೆಯುತ್ತಿರುವ ಈ 40 ಪರ್ಸೆಂಟ್‌ ಹಣ ನಾಗ್ಪುರಕ್ಕೆ ಹೋಗುತ್ತಿದೆಯೋ? ಕೇಶವಕೃಪಕ್ಕೆ ಹೋಗುತ್ತಿದೆಯೋ? ಮಂತ್ರಿಗಳಿಗೆ ಹೋಗುತ್ತಿದೆಯೋ? ಎಂಬುದು ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!