ಚುನಾವಣೆ ಬಂದಾಗ ಟೀಕೆ, ಟಿಪ್ಪಣಿಗಳು ಮಾಡುವುದು ಸಹಜ. ಆದರೆ ಪ್ರತಿಯೊಂದು ಟೀಕೆ, ಟಿಪ್ಪಣಿಗಳಿಗೆ ಉತ್ತರ ನೀಡುವುದು ಅವಶ್ಯಕತೆ ಇಲ್ಲ ಎಂದ ಸತೀಶ ಜಾರಕಿಹೊಳಿ
ಗೋಕಾಕ(ಫೆ.07): ಫೆಬ್ರವರಿ ಕೊನೆ ವಾರದಲ್ಲಿ ಕಾಂಗ್ರೆಸ್‌ನಿಂದ ಅರ್ಧದಷ್ಟು ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವುದು ಖಚಿತ. ಹೀಗಾಗಿ ಕಾಂಗ್ರೆಸ್ ಪಕ್ಷ ಕಳೆದ ಒಂದು ವರ್ಷದಿಂದಲೇ ಚುನಾವಣೆ ತಯಾರಿ ನಡೆಸಿದೆ ಎಂದುಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಕಳೆದ ಒಂದು ವರ್ಷದಲ್ಲಿ ಭಾರತ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆ ಸೇರಿದಂತೆ 3ರಿಂದ 5 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗ ಮತ್ತೆ ವಿಧಾನಸಭಾ ಮತಕ್ಷೇತ್ರ ವಾರು ಬಸ್ ಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.
undefined
ಕಾಂಗ್ರೆಸ್ ಮತ ಸೆಳೆಯಲು ಜನಾರ್ದನ ರೆಡ್ಡಿ ನೂತನ ಪಕ್ಷ: ಸತೀಶ ಜಾರಕಿಹೊಳಿ
ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ರಾಜಕೀಯವಾಗಿ ಟೀಕೆ ಮಾಡುವ ಕುರಿತು ಮಾತನಾಡಿದ ಅವರು, ಚುನಾವಣೆ ಬಂದಾಗ ಟೀಕೆ, ಟಿಪ್ಪಣಿಗಳು ಮಾಡುವುದು ಸಹಜ. ಆದರೆ ಪ್ರತಿಯೊಂದು ಟೀಕೆ, ಟಿಪ್ಪಣಿಗಳಿಗೆ ಉತ್ತರ ನೀಡುವುದು ಅವಶ್ಯಕತೆ ಇಲ್ಲ ಎಂದರು.
ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಜಯಗಳಿಸಿದ್ದು, ಈ ಬಾರಿ ಗೆಲುವಿನ ಅಂತರ ಜಾಸ್ತಿ ಆಗುತ್ತದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ನಾವು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಕಾರ್ಯಕರ್ತರು ಅಲರ್ಟ್ ಆಗಿದ್ದಾರೆ ಎಂದರು.