ಉತ್ತರ ಕರ್ನಾಟಕ ನೀರಿನಲ್ಲಿ ಮುಳುಗಿದೆ, ಶಿಕಾರಿಪುರದಲ್ಲಿ ಸಿಎಂ ಏನ್‌ ಮಾಡ್ತಿದ್ದಾರೆ: ಹೆಚ್‌ಡಿಕೆ

By Suvarna NewsFirst Published Oct 19, 2020, 2:25 PM IST
Highlights

ಈ ಹಿಂದೆ ನಾನು ಬಜೆಟ್ ಮಾಡಿದ್ದಾಗ ರಾಮನಗರ, ಮಂಡ್ಯ ಬಜೆಟ್ ಅಂದ್ರು, ಕುಣಿದು ಕುಪ್ಪಳಿಸಿದ್ದರು. ಇವಾಗ ಯಡಿಯೂರಪ್ಪ ಏನು ಶಿಕಾರಿಪುರದ ಸಿಎಂ ಆಗಿದ್ದಾರಾ...? ಎಂದು ಪ್ರಶ್ನಿಸಿದ ಹೆಚ್‌ಡಿಕೆ

ಬೆಂಗಳೂರು(ಅ.19): ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಡಿದ್ದು ವೈಮಾನಿ ಸಮೀಕ್ಷೆ ಮಾಡುತ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯತೆ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹತ್ತಿಕೊಂಡು ಉರಿಯುತ್ತಿದೆ, ಉತ್ತರ ಕರ್ನಾಟಕ ಭಾಗ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಿದ್ರು ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ. ಶಿಕಾರಿಪುರವ‌ನ್ನು ಮಾಡಲ್ ಮಾಡಲು ಹೊರಟಿದ್ದಾರಾ ಎಂದು ಸಿಎಂ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಬಜೆಟ್ ಮಾಡಿದ್ದಾಗ ರಾಮನಗರ, ಮಂಡ್ಯ ಬಜೆಟ್ ಅಂದ್ರು, ಕುಣಿದು ಕುಪ್ಪಳಿಸಿದ್ದರು. ಇವಾಗ ಯಡಿಯೂರಪ್ಪ ಏನು ಶಿಕಾರಿಪುರದ ಸಿಎಂ ಆಗಿದ್ದಾರಾ...? ಎಂದು ಪ್ರಶ್ನಿಸಿದ್ದಾರೆ. 

ನಳಿನ್‌ ಕುಮಾರ್ ಕಟೀಲ್‌ಗೆ ಏನೂ ಮಾತನಾಡಬೇಕೆಂಬ ಅರಿವೇ ಇಲ್ಲ: ಸಿದ್ದರಾಮಯ್ಯ

ಜನರಿಗೆ ಈ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ. ಪ್ರವಾಹದಿಂದ ಸಂತ್ರಸ್ತರು ನರಳಾಡುತ್ತಿದ್ದಾರೆ. ಸಹಾಯ ಮಾಡುವ ಕನಿಷ್ಠ ಸೌಜನ್ಯವೂ ಈ ಸರ್ಕಾರಕ್ಕೆ ಇಲ್ಲ. ಪರಿಹಾರ ಸರಿಯಾಗಿ ಆಗಬೇಕು. ಬೆಳೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಎಲ್ಲಾ ಬೆಳೆ ನಾಶವಾಗಿದೆ. ಯಾವ ಮಂತ್ರಿಗೂ ಜವಾಬ್ದಾರಿ ಇಲ್ಲ. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ.  ಬಿಜೆಪಿ ಅವರಿಗೆ ಚುನಾವಣೆ ನಡೆಸಬೇಕು ಅಷ್ಟೆ. ಚುನಾವಣೆಗೆ ಕೋಟಿ‌ ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾ ಚುನಾವಣೆ ಮಾಡುತ್ತಿದ್ದೀರಾ. ಆ ಹಣವನ್ನ ಸಿಎಂ ಮಾಡಲು ಸ್ಥಾನ ಕೊಟ್ಟ ಜನರಿಗೆ ಕೊಡಿ. ಸರ್ಕಾರದ ಪರಿಹಾರಕ್ಕೆ ನಾನು ಕಾಯೋದಿಲ್ಲ. ಬುಧವಾರ‌ ಪ್ರವಾಹ ಪ್ರದೇಶಕ್ಕೆ ನಾನೇ ಅಕ್ಕಿ, ಬೆಳೆ,ಬಟ್ಟೆ ಕಳುಹಿಸುತ್ತಿದ್ದೇನೆ. ನನ್ನ ಡ್ಯೂಟಿ ನಾನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ಉತ್ತರ ಕರ್ನಾಟಕ ಭಾಗದ ಜನ ಮತ ಕೊಡದೇ ಹೋದ್ರು ನನ್ನ ಪ್ರಾಮಾಣಿಕ ಹಣದಲ್ಲಿ ಸಹಾಯ ಮಾಡ್ತಿದ್ದೇನೆ. ನಮ್ಮ ‌ಪಕ್ಷದ ನಾಯಕರಿಗೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಬುಧವಾರ ಎಲ್ಲಾ ಸಾಮಗ್ರಿಗಳನ್ನ ನಮ್ಮ ‌ಪಕ್ಷದಿಂದ ಕೊಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ‌ಹೇಳಿದ್ದಾರೆ. 
 

click me!