Gujarat Election Result 2022: ತನ್ನ ಅತ್ಯಂತ ಕಳಪೆ ನಿರ್ವಹಣೆಯತ್ತ ಕಾಂಗ್ರೆಸ್‌?

By Santosh Naik  |  First Published Dec 8, 2022, 10:41 AM IST

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಈವರೆಗಿನ ಅತ್ಯಂತ ಕೆಟ್ಟ ನಿರ್ವಹಣೆಯತ್ತ ಮುಖ ಮಾಡಿದೆ ಎನ್ನುವುದು ಆರಂಭಿಕ ಟ್ರೆಂಡ್‌ಗಳನ್ನು ನೋಡಿದರೆ ಗೊತ್ತಾಗಿದೆ. ಇನ್ನೊಂದೆಡೆ ಬಿಜೆಪಿ 182 ಸದಸ್ಯ ಬಲದ ವಿಧಾನಸಭೆಯಲ್ಲಿ ತನ್ನ ಈವರೆಗಿನ ಅತೀದೊಡ್ಡ ಗೆಲುವಿನತ್ತ ಮುಖ ಮಾಡಿದೆ.
 


ಅಹಮದಾಬಾದ್‌ (ಡಿ.8): ಪ್ರಸ್ತುತ ಟ್ರೆಂಡ್‌ನ ಲೆಕ್ಕಾಚರದಲ್ಲಿ ಹೇಳುವುದಾದರೆ, ಕಾಂಗ್ರೆಸ್‌ ಪಕ್ಷ ಗುಜರಾತ್‌ನಲ್ಲಿ ತನ್ನ ಈವರೆಗಿನ ಅತ್ಯಂತ ನಿಕೃಷ್ಟ ಫಲಿತಾಂಶ ದಾಖಲು ಮಾಡುವತ್ತ ಮುಖ ಮಾಡಿದೆ. 182 ವಿಧಾನಸಭಾ ಕ್ಷೇತ್ರಗಳ ಗುಜರಾತ್‌ನಲ್ಲಿ ಬಿಜೆಪಿ ಬರೋಬ್ಬರಿ 156 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದರೆ, ಕಾಂಗ್ರೆಸ್‌ 17 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಒಂದೆಡೆ ಇದು ಗುಜರಾತ್‌ನಲ್ಲಿ ಬಿಜೆಪಿಯ ಈವರೆಗಿನ ಅತೀದೊಡ್ಡ ಗೆಲುವು ಎಂದು ಹೇಳಲಾಗುತ್ತದೆ. 2017ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ, ಕಾಂಗ್ರೆಸ್‌ ಕೂಡ , ಹೆಚ್ಚಿನ ಸೀಟ್‌ಗಳನ್ನು ಗೆದ್ದುಕೊಂಡಿತ್ತು. ಆದರೆ, ಗುಜರಾತ್‌ ವಿಧಾನಸಭೆ ಕಣದಲ್ಲಿ ಹೊಸ ಆಟಗಾರ ಆಮ್‌ ಆದ್ಮಿ ಪಾರ್ಟಿ ಉತ್ತಮ ನಿರ್ವಹಣೆ ತೋರಿದ್ದು, ಪ್ರಧಾನಿ ನರೇಂದ್ರ ಮೋದಿಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ನ ವೋಟ್‌ ಶೇರ್‌ ಹಾಗೂ ಸೀಟ್‌ ಕುಸಿತಕ್ಕೆ ಕಾರಣವಾಗಿದೆ.  ವಿರಾಮಗಾಂ ಕ್ಷೇತ್ರದಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಅಭ್ಯರ್ಥಿ ಹಾರ್ದಿಕ್‌ ಪಟೇಲ್‌, ಗುಜರಾತ್‌ನಲ್ಲಿ ಬಿಜೆಪಿ ಕನಿಷ್ಠ 130 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಗುರುವಾರ ಹೇಳಿದ್ದಾರೆ. 

ಗುಜರಾತ್‌ ಚುನಾವಣೆಯಲ್ಲಿ ಈವರೆಗೂ ಯಾವ ಪಕ್ಷ ಕೂಡ 130 ಹಾಗೂ ಅದಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆದ್ದಿಲ್ಲ. ಆದರೆ, ಆಡಳಿತಾರೂಢ ಬಿಜೆಪಿ ಈ ಬಾರಿ ಈ ಸಾಧನೆ ಮಾಡುವ ಮೂಲಕ ದಾಖಲೆಯ ಏಳನೇ ಬಾರಿಗೆ ಅಧಿಕಾರಕ್ಕೆ ಏರಲಿದೆ. ಬಿಜೆಪಿ ತನ್ನ ಆಡಳಿತದಲ್ಲಿ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಿದ್ದರಿಂದ ಜನರು ಬಿಜೆಪಿಯನ್ನು ನಂಬಿದ್ದಾರೆ ಎಂದು ಹೇಳಿರುವ ಹಾರ್ದಿಕ್‌ ಪಟೇಲ್‌, ಪಕ್ಷ ಜನರ ನಿರೀಕ್ಷೆಗಳನ್ನು ಸಹ ಪೂರೈಸಿದೆ ಎಂದರು.



Gujarat, HP Election Results 2022 Live: ಗುಜರಾತ್‌ನಲ್ಲಿ ನಿರೀಕ್ಷೆಗಿಂತ ಹೆಚ್ಚು ಕೈಗೆ ಮುನ್ನಡೆ 

Tap to resize

Latest Videos

1990ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 33 ಸ್ಥಾನಗಳಲ್ಲಿ ಗೆದ್ದಿದ್ದೇ ಈವರೆಗಿನ ಕಾಂಗ್ರೆಸ್‌ನ ಅತ್ಯಂತ ಕನಿಷ್ಠ ಸಾಧನೆ ಆಗಿತ್ತು. 1962ರಲ್ಲಿ ಚುನಾವಣೆಯಲ್ಲಿ 154 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 113 ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.  1967ರಲ್ಲಿ 168ರ ಪೈಕಿ 93 ಕ್ಷೇತ್ರದಲ್ಲಿ ಜಯ ಸಾಧಿಸಿದ್ದರೆ, 1972ರಲ್ಲಿ 168ರಲ್ಲಿ 140 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. 1975ರಲ್ಲಿ 182 ಕ್ಷೇತ್ರಗಳ ಪೈಕಿ 75ರಲ್ಲಿ ಗೆಲುವು ಕಂಡಿದ್ದರೆ, 1980ರಲ್ಲಿ 141 ಕ್ಷೇತ್ರ, 1985ರಲ್ಲಿ 149 ಕ್ಷೇತ್ರ, 1990ರಲ್ಲಿ 33 ಕ್ಷೇತ್ರ, 1995ರಲ್ಲಿ 45 ಕ್ಷೇತ್ರ, 1998ರಲ್ಲಿ 53 ಕ್ಷೇತ್ರ, 2022ರಲ್ಲಿ 51 ಕ್ಷೇತ್ರ, 2007ರಲ್ಲಿ 59 ಕ್ಷೇತ್ರ, 2012ರರಲ್ಲಿ 61 ಕ್ಷೇತ್ರ ಹಾಗೂ 2017ರಲ್ಲಿ 78 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಕಂಡಿತ್ತು.

Gujarat Election Result 2022: ಗುಜರಾತ್‌ನ 8 ಹಾಟ್‌ ಸೀಟ್‌ಗಳಲ್ಲಿ ಹೇಗಿದೆ ಪರಿಸ್ಥಿತಿ?

ಇನ್ನು ಬಿಜೆಪಿ ಲೆಕ್ಕಾಚಾರಕ್ಕೆ ಬರುವುದಾದರೆ, 1980ರಲ್ಲಿ ಬರೀ 9 ಕ್ಷೇತ್ರಗಳನ್ನು ಗೆದ್ದಿದ್ದ ಪಕ್ಷ, 1985ರಲ್ಲಿ11 ಕ್ಷೇತ್ರ, 1990ರಲ್ಲಿ67 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. 1995ರಲ್ಲಿ 121 ಕ್ಷೇತ್ರಗಳಲ್ಲಿ ಗೆಲುವು ಕಾಣುವ ಮೂಲಕ ಅಧಿಕಾರ ಹಿಡಿದಿದ್ದ ಬಿಜೆಪಿ1998ರಲ್ಲಿ 117 ಕ್ಷೇತ್ರ, 2002ರಲ್ಲಿ 127 ಕ್ಷೇತ್ರ, 2007ರಲ್ಲಿ 117 ಕ್ಷೇತ್ರ, 2012ರಲ್ಲಿ 115 ಕ್ಷೇತ್ರ ಹಾಗೂ 2017ರಲ್ಲಿ 99 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

ಆಪ್‌ ಈಗ ರಾಷ್ಟ್ರೀಯ ಪಕ್ಷ: ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ರಾಜ್ಯದಲ್ಲಿ ಸುಮಾರು 13% ಮತಗಳನ್ನು ಪಡೆಯುತ್ತಿದೆ. ರಾಷ್ಟ್ರೀಯ ಪಕ್ಷದ ಟ್ಯಾಗ್ ಪಡೆಯಲು, ಗುಜರಾತ್‌ನಲ್ಲಿ ಕನಿಷ್ಠ 2 ಸ್ಥಾನಗಳನ್ನು ಮತ್ತು 6% ಮತ ಹಂಚಿಕೆಯನ್ನು ಗೆಲ್ಲಬೇಕು. ಎಎಪಿ ಈಗಾಗಲೇ ದೆಹಲಿ, ಪಂಜಾಬ್ ಮತ್ತು ಗೋವಾದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಲ್ಪಟ್ಟಿದೆ. ಈಗ, ಗುಜರಾತ್ ಎಎಪಿಯನ್ನು ರಾಷ್ಟ್ರೀಯ ಪಕ್ಷ ಮಾಡಲು ಸಹಾಯ ಮಾಡಲಿದೆ.

click me!