ಬಿಜೆಪಿ ನಾಯಕನಿಗೆ ಸಂಕಷ್ಟ ತಂದ ಸೆಲ್ಫಿ, 6 ನಿಮಿಷದಲ್ಲಿನ ಪೋಸ್ಟ್‌‌ಗೆ 6 ವರ್ಷ ಪಕ್ಷದಿಂದ ಅಮಾನತು!

By Suvarna News  |  First Published Oct 3, 2022, 6:24 PM IST

ಬಿಜೆಪಿ ನಾಯಕ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇಷ್ಟೇ ನೋಡಿ, ಮರುಕ್ಷಣದಲ್ಲೇ ಬಿಜೆಪಿ ಖಡಕ್ ನಿರ್ಧಾರ ಪ್ರಕಟಿಸಿದೆ. ನಾಯಕನ ಉಚ್ಚಾಟಿಸಿರುವುದಾಗಿ ಹೇಳಿದೆ.  6 ವರ್ಷ ಪಕ್ಷದಿಂದ ಅಮಾನತು ಮಾಡಲಾಗಿದೆ.


ಅಹಮ್ಮದಾಬಾದ್(ಅ.03):  ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಬಿಜೆಪಿ ನಾಯಕ ತೆಗೆದುಕೊಂಡ ಸಮಯ ಕೇವಲ 6 ನಿಮಿಷ ಮಾತ್ರ. ಇಷ್ಟೇ ನೋಡಿ, 6 ನಿಮಿಷದ ಪೋಸ್ಟ್‌ನಿಂದ  6 ವರ್ಷ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಹೌದು ಗುಜರಾತ್‌ನ ಅಹಮ್ಮದಾಬಾದ್‌ನ ಬಿಜೆಪಿ ನಾಯಕ ಕೃಷ್ಣಸಿನ್ಹ ಸೋಲಂಕಿ ಪಕ್ಷದಿಂದ ಉಚ್ಚಾಟನೆಗೊಂಡ ನಾಯಕ. ಅಷ್ಟಕ್ಕೂ ಈ ನಾಯಕ ಪೋಸ್ಟ್ ಮಾಡಿದ ಸೆಲ್ಫಿ ಯಾವುದು ಅಂತೀರಾ? ಪಂಜಾಬ್ ಸಿಎಂ, ಆಮ್ ಆದ್ಮಿ ನಾಯಕ ಭಗವಂತ್ ಮಾನ್ ಜೊತೆಗೆ ತೆಗೆದಿರುವ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೃಷ್ಣಸಿನ್ಹ ಸೋಲಂಕಿ ಪಕ್ಷದಿಂದ ಅಮಾನತ್ತುಗೊಂಡಿದ್ದಾರೆ. ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಾರ್ಟಿ ಇದೀಗ ಬಿಜೆಪಿ ಭದ್ರಕೋಟೆಯಲ್ಲಿ ಠಿಕಾಣಿ ಹೂಡಿದೆ. ಚುನಾವಣಾ ಪ್ರಚಾರಕ್ಕಾಗಿ ಅಹಮ್ಮದಾಬಾದ್‌ಗೆ ಆಗಮಿಸಿದ ಭಗವಂತ್ ಮಾನ್ ಜೊತೆ ಕೃಷ್ಣಸಿನ್ಹ ಸೋಲಂಕಿ ಸೆಲ್ಫಿ ತೆಗೆದಿದ್ದಾರೆ. ಬಳಿಕ ತಮ್ಮ ಖಾಸಗಿ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ಭಗವಂತ್ ಮಾನ್ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಾಯಕ ಸೋಲಂಕಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಇದರಿಂದ ತಕ್ಷಣವೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗುಜರಾತ್ ಬಿಜೆಪಿ ಹೇಳಿದೆ.  ಬಿಜೆಪಿ ವಕ್ತಾರನಾಗಿ ಕಳೆದ 6 ತಿಂಗಳು ಗುಜರಾತ್‌ನಲ್ಲಿ ಭಾರಿ ಸದ್ದು ಮಾಡಿದ್ದ ಕೃಷ್ಣಸೋಲಂಕಿ ಇತ್ತೀಚೆಗೆ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರು ಅನ್ನೋ ಮಾತುಗಳಿವೆ. ಆಮ್ ಆದ್ಮಿ ಪಾರ್ಟಿ ಸೇರಿಕೊಳ್ಳುವ ಕುರಿತು ಗುಮಾನಿಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಭಗವಂತ್ ಮಾನ್ ಜೊತೆಗಿನ ಸೆಲ್ಫಿ ಇದೀಗ ವಿವಾದಕ್ಕೆ ಕಾರಣವಾಗಿದೆ.

Tap to resize

Latest Videos

BJP ಸೇರ್ತಾರಾ ಕಂಗನಾ ರಣಾವತ್; 'ಕ್ವೀನ್' ನಟಿಯ ಉತ್ತರ ಹೀಗಿದೆ?

ಕೃಷ್ಣಸಿನ್ಹ ಸೋಲಂಕಿ 6 ತಿಂಗಳಿನಿಂದ ಬಿಜೆಪಿಯಲ್ಲಿ ಯಾವುದೇ ಹುದ್ದೆ ನಿರ್ವಹಿಸುತ್ತಿಲ್ಲ. ಅದಕ್ಕೂ ಮೊದಲು ಬಿಜೆಪಿ ಪಕ್ಷದ ವಕ್ತಾರರಾಗಿ ಟಿವಿ ಸೇರಿದಂತೆ ಮಾಧ್ಯಮಗಳ ಚರ್ಚೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಆದರೆ ಕಳೆದ 6 ತಿಂಗಳಿನಿಂದ ಬಿಜೆಪಿ ವಿರುದ್ಧವೇ ಮಾತನಾಡಿದ್ದಾರೆ. ಹಲವ ವಿವಾದ ಸೃಷ್ಟಿಸಿದ್ದಾರೆ. ಹೀಗಾಗಿ ವಕ್ತಾರ ಜವಾಬ್ದಾರಿಯನ್ನೂ ಹಿಂತೆಗೆದುಕೊಳ್ಳಲಾಗಿದೆ. ಇದೀಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕಾರಣ ಉಚ್ಚಾಟನೆ ಮಾಡಲಾಗಿದೆ ಎಂದು ಗುಜರಾತ್ ಬಿಜೆಪಿ ಹೇಳಿದೆ.

ಗುಜರಾತಲ್ಲಿ ಮತ್ತೆ ಬಿಜೆಪಿಗೇ ಭರ್ಜರಿ ಗೆಲುವು: ಸಮೀಕ್ಷೆ
ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌-ಸಿ ವೋಟರ್‌ ಸಮೀಕ್ಷೆ ಭವಿಷ್ಯ ನುಡಿದಿದೆ. ಗುಜರಾತ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ರ ಆಪ್‌ ಈ ಸಲ ಕಣ ಪ್ರವೇಶಿಸಿರುವ ಕಾರಣ ತ್ರಿಕೋನ ಸಮರ ಏರ್ಪಟ್ಟಿದೆ. ‘ಗುಪ್ತಚರ ವರದಿ ಪ್ರಕಾರ ಗುಜರಾತಲ್ಲಿ ಗೆಲುವು ನಮ್ಮದೇ’ ಎಂದು ಕೇಜ್ರಿವಾಲ್‌ ಕೂಡ ಹೇಳಿಕೊಂಡಿದ್ದಾರೆ. ಇಂಥದ್ದರ ನಡುವೆಯೇ ಈ ಸಮೀಕ್ಷೆ ಬಂದಿರುವುದು ಗಮನಾರ್ಹವಾಗಿದೆ.

ಮಂಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿ ಹುಲಿವೇಷ ಸ್ಪರ್ಧೆ: ಪಿಲಿ ಪರ್ಬ-ನಲಿಕೆಯ ಹಬ್ಬ!

ಗುಜರಾತಲ್ಲಿ ಸತತ 7ನೇ ಸಲ ಕಮಲ:
ಗುಜರಾತ್‌ನಲ್ಲಿ ಕಳೆದ ಸಲ 99 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಲ ಭಾರಿ ಬಹುಮತ ಗಳಿಸಲಿದ್ದು 135ರಿಂದ 143 ಸ್ಥಾನ ಸಂಪಾದಿಸಲಿದೆ. ಕಾಂಗ್ರೆಸ್‌ 36ರಿಂದ 44, ಆಪ್‌ ಕೇವಲ 0-2 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ. ಗುಜರಾತ್‌ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿವೆ. ಬಹುಮತಕ್ಕೆ 92 ಸ್ಥಾನಗಳು ಬೇಕು. ರಾಜ್ಯದಲ್ಲಿ 1998ರಿಂದ ಬಿಜೆಪಿ ಅಧಿಕಾರದಲ್ಲಿದೆ. ಈಗ ಗೆದ್ದರೆ ಸತತ 7ನೇ ಸಲ ಗೆದ್ದಂತಾಗುತ್ತದೆ.

click me!