ಜೆಡಿಎಸ್ ಶಾಸಕರೊಬ್ಬರ ಕುಟುಂಬಕ್ಕೆ ವಕ್ಕರಿಸಿದ ಕೊರೋನಾ..!

By Suvarna News  |  First Published Aug 13, 2020, 10:33 PM IST

ಜೆಡಿಎಸ್ ಶಾಸಕರೊಬ್ಬರ ಪತ್ನಿ ಮತ್ತು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಆದ್ರೆ, ಶಾಸಕರು ವರದಿ ನೆಗೆಟಿವ್ ಬಂದಿದೆ.


ತುಮಕೂರು, (ಆ.13): ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಕುಟುಂಬಕ್ಕೆ ಕೊರೋನಾ ವಕ್ಕರಿಸಿದೆ. ಆದ್ರೆ, ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಬಚಾವ್ ಆಗಿದ್ದಾರೆ.

ಹೌದು.. ಶ್ರೀನಿವಾಸ್ ಪತ್ನಿ, ಪುತ್ರ ಮತ್ತು ಪುತ್ರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಆದ್ರೆ,  ಶ್ರೀನಿವಾಸ್ ಅವರ ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಬಗ್ಗೆ ಸ್ವತಃ ಶಾಸಕ ಶ್ರೀನಿವಾಸ್ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ.

Tap to resize

Latest Videos

ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕರೊಬ್ಬರಿಗೆ ಕೊರೋನಾ ಕನ್ಫರ್ಮ್

ನಮ್ಮ ಕುಟುಂಬದ ರಾಪಿಡ್ ಟೆಸ್ಟ್ ಮತ್ತು ಅರ್.ಟಿ.ಪಿ.ಸಿ.ಆರ್ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು ನನಗೆ ನೆಗೆಟಿವ್ ಮತ್ತು ನನ್ನ ಪತ್ನಿ,ಮಗ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ರೋಗ ಲಕ್ಷಣಗಳಿದ್ದು ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ದೇಶನದಂತೆ ಮನೆಯಲ್ಲೇ ಚಿಕಿತ್ಸೆ ‌ಪಡೆಯುತ್ತಿದ್ದಾರೆ ಎಂದು ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.

ನಮ್ಮ ಕುಟುಂಬದ ರಾಪಿಡ್ ಟೆಸ್ಟ್ ಮತ್ತು ಅರ್.ಟಿ.ಪಿ.ಸಿ.ಆರ್ ಕೊರೊನಾ ಪರೀಕ್ಷೆಯ ವರದಿ ಬಂದಿದ್ದು ನನಗೆ ನೆಗೆಟಿವ್ ಮತ್ತು ನನ್ನ ಪತ್ನಿ,ಮಗ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ರೋಗ ಲಕ್ಷಣಗಳಿದ್ದು ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ದೇಶನದಂತೆ ಮನೆಯಲ್ಲೇ ಚಿಕಿತ್ಸೆ ‌ಪಡೆಯುತ್ತಿದ್ದಾರೆ. pic.twitter.com/5dFVXWMc8M

— S R Srinivas (@srinivas_gubbi)
click me!