ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕರೊಬ್ಬರಿಗೆ ಕೊರೋನಾ ಕನ್ಫರ್ಮ್

By Suvarna News  |  First Published Aug 13, 2020, 8:15 PM IST

ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕರೊಬ್ಬರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿದೆ. ಯಾವುದೇ ಸೋಂಕಿನ ಲಕ್ಷಣಗಳು ಇಲ್ಲದಿರುವುದರಿಂದ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದಾರೆ.


ಉಡುಪಿ, (ಆ.13): ಕಾಪು ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್ ಮೆಂಡನ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಂದು (ಗುರುವಾರ) ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ  ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tap to resize

Latest Videos

ಶಾಸಕರ ಆಪ್ತ ಕಾರ್ಯದರ್ಶಿಗೆ ಕಳೆದ ವಾರ ಸೋಂಕು ಧೃಡಪಟ್ಟಿದ್ದು, ಆ ಬಳಿಕ ಶಾಸಕರು ಸ್ವಯಂ ಕ್ವಾರಂಟೈನ್‌ಗಿದ್ದರು. ವಾರದ ಬಳಿಕ ಪರೀಕ್ಷೆಗೊಳಗಾದ ಲಾಲಾಜಿ ಆರ್ ಮೆಂಡನ್‌ ವರದಿಯಲ್ಲಿ ಸೋಂಕು ಧೃಡಪಟ್ಟಿದೆ.

ಗುಡ್‌ ನ್ಯೂಸ್: ಕರ್ನಾಟಕದಲ್ಲಿ ತಗ್ಗಿದ ಕೊರೋನಾ, ಹೆಚ್ಚಿದ ಚೇತರಿಕೆ ಪ್ರಮಾಣ

ನನ್ನ ಆಪ್ತ ಕಾರ್ಯದರ್ಶಿಯೋರ್ವರಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನಲೆ ಕಳೆದ 7 ದಿನಗಳಿಂದ ಹೋಂ ಕಾರಂಟೈನ್ ನಲ್ಲಿದ್ದು ಮುಂಜಾಗೃತಾ ಕ್ರಮವಾಗಿ ನಾನು ಪರೀಕ್ಷೆ ಮಾಡಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಯಾವುದೇ ಸೋಂಕಿನ ಲಕ್ಷಣಗಳು ಇಲ್ಲದಿರುವುದರಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಶೂಶ್ರುಷೆ ಪಡೆಯುತ್ತಿದ್ದೇನೆ. ಅಗತ್ಯ ಕಾರ್ಯಗಳಿಗೆ ಕಚೇರಿಯನ್ನು ಸಂಪರ್ಕಿಸಿ..ನಾನು ಆದಷ್ಟು ಬೇಗ ಕಾಪು ಜನತೆಯ ಸೇವೆಗೆ ಮರಳುತ್ತೇನೆ ತಮ್ಮ ಸಹಕಾರವಿರಲಿ ಎಂದು ಸಾಮಾಜಿ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

click me!