ಕೆಜಿಎಫ್ ಬಿಜೆಪಿಯಲ್ಲಿ ಬಣ ರಾಜಕೀಯ, ಪತ್ನಿಗೆ ಟಿಕೇಟ್ ಕೊಡಿಸಲು MP ಮುನಿಸ್ವಾಮಿ ಸರ್ಕಸ್

By Suvarna News  |  First Published May 9, 2022, 5:24 PM IST

* ಕೆಜಿಎಫ್ ಬಿಜೆಪಿಯಲ್ಲಿ ಬಣ ರಾಜಕೀಯ
* ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಭಿನ್ನಾಬಿಪ್ರಾಯ
* ಪತ್ನಿ ಶೈಲಜಾಗೆ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ ಸಂಸದ ಮುನಿಸ್ವಾಮಿ


ವರದಿ: ದೀಪಕ್,ಏಷ್ಯಾನೆಟ್ ಸುವಣ೯ ನ್ಯೂಸ್,ಕೋಲಾರ

ಕೋಲಾರ , (ಮೇ.09):
ಕೋಲಾರ ಜಿಲ್ಲೆಯಲ್ಲಿ ದಿನಕ್ಕೊಂದು ರಾಜಕೀಯ ಹೈ ಡ್ರಾಮ ನಡೆಯುತ್ತಿದೆ. ಚುನಾವಣೆಗೆ ಇನ್ನಿಲ್ಲದ ಸಕ೯ಸ್ ಮಾಡ್ತಿರುವ ಟಿಕೇಟ್ ಆಕಾಂಕ್ಷಿಗಳು,ಮತದಾರರನ್ನು ಸೆಳೆಯಲು ಇನ್ನಿದ ಕಸರತ್ತು ಮಾಡ್ತಿದ್ದಾರೆ. ಅದರಲ್ಲೂ ತಮಿಳರು ಹೆಚ್ಚಿಗೆ ವಾಸವಿರುವ ಕೆಜಿಎಫ್ ಕ್ಷೇತ್ರದಲ್ಲಿ ಭಾರಿ ಹೈಡ್ರಾಮ ನಡೆಯಿತ್ತಿದ್ದು,ತಮಿಳುನಾಡು ಸ್ಟೈಲ್ ನಲ್ಲೇ ಭಜ೯ರಿ ಪ್ರಚಾರ ಶುರು ಮಾಡ್ಕೊಂಡಿದ್ದಾರೆ,ಇದಕ್ಕೆ ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷರು ಹಾಗು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ಕೆ.ಅಣ್ಣಾಮಲೈ ಸಹ ನಿನ್ನೆ ಸಾಕ್ಷಿಯಾಗಿದ್ರು.

ಹೌದು.. ಕೆಜಿಎಫ್ ಕೇತ್ರ ಕೋಲಾರದಲ್ಲಿ ಇದ್ರೂ ಸಹ ಈ ಭಾಗದ ಜನರು ತಮಿಳು ಭಾಷೆಯನ್ನು ಹೆಚ್ಚಾಗಿ ಬಳಸುತ್ತಾರೆ,ತಮಿಳು ಸಿನಿಮಾ ನಟರು ಹಾಗೂ ರಾಜಕಾರಿಣಿಗಳನ್ನು ಹೆಚ್ಚು ಫಾಲೋ ಮಾಡ್ತಾರೆ.ಸಧ್ಯ  ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಪುತ್ರಿ ರೂಪಾ ಇಲ್ಲಿ ಶಾಸಕಿಯಾಗಿದ್ದು,ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಹೇಗಾದ್ರು ಮಾಡಿ ಸೋಲಿಸಿ ಮತ್ತೆ ಇಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಅಂತ ಸಂಸದ ಮುನಿಸ್ವಾಮಿ ನಿಧ೯ರ ಮಾಡಿ ಭಜ೯ರಿ ರ್ಯಾಲಿ ಹಾಗೂ ಸಮಾವೇಶಗಳನ್ನು ಮಾಡ್ತಿದ್ದಾರೆ.ಇದಕ್ಕೆ ಪೂರಕವಾಗಿ ಕನಾ೯ಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಫಾಲೋಹರ್ಸ್ ಗಳನ್ನು ಹೊಂದಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷರು ಆಗಿರುವ ಕೆ.ಅಣ್ಣಾಮಲೈ ಅವರನ್ನು ಕರೆಸಿ ರೋಡ್ ಷೋ ಜೊತೆಗೆ ತಮಿಳು ಭಾಷೆಯಲ್ಲಿ ಭಾಷಣ ಮಾಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟು ಮಾಡಿದ್ದಾರೆ.

Latest Videos

undefined

ಕೋಲಾರ ಬಿಜೆಪಿಯಲ್ಲಿ ಕೋಲಾಹಲ, MP ಮುನಿಸ್ವಾಮಿ ನಡೆಗೆ ಸಿಡಿದೆದ್ದ ಮೂಲ ಬಿಜೆಪಿಗರು

ಇದರ ನಡುವೆ ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡರು ಆಗಿರುವ ವೈ.ಸಂಪಂಗಿ ಅವರನ್ನು ನಿನ್ನೆಯ ಕಾಯ೯ಕ್ರಮಕ್ಕೆ ಕರೆಯದೇ ಇರೋದು ಹಲವೂ ಅನುಮಾನಗಳಿಗೆ ಕಾರಣವಾಗಿದೆ.ಅಣ್ಣಾಮಲೈ ಅವರನ್ನು ಕರೆಸದೇ ಇದ್ರು ಸಹ ಸಂಪಂಗಿ ಅವರಿಗೆ ಆಹ್ವಾನ ನೀಡಿಲ್ಲ,ಈಗಾಗಿ ಕೆಜಿಎಫ್ ನಲ್ಲಿ ಇದೀಗ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಶಾಸಕ ವೈ.ಸಂಪಂಗಿಯವರ ಎರಡು ಗುಂಪುಗಳ ನಡುವೆ ಕಿತ್ತಾಟ ಶುರುವಾಗಿದೆ.ಇಷ್ಟೂ ವಷ೯ಗಳ ಕಾಲ ಕೆಜಿಎಫ್ ಭಾಗದಲ್ಲಿ ಮಾಜಿ  ಶಾಸಕರು ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದಾರೆ,ಆದ್ರೇ ರಾಜಕೀಯ ವೈಮನಸ್ಸಿನಿಂದ ಕಾಯ೯ಕ್ರಮಕ್ಕೆ ಆಹ್ವಾನ ನೀಡದೇ ಈ ರೀತಿ ಅವಮಾನ ಮಾಡಿರೋದು ಬೇಸರ ತಂದಿದೆ ಅಂತ ವೈ.ಸಂಪಂಗಿ ಕಡೆಯವರು ಆಕ್ರೋಶ ಹೊರ ಹಾಕ್ತಿದ್ದಾರೆ.

ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಕೆಲ ತಿಂಗಳಿನಿಂದ ಒಳಗೊಳಗೆ ಕಿತ್ತಾಟ ಶುರುವಾಗಿದೆ.ಹಲವಾರು ಬಾರಿ ಮಾಧ್ಯಮಗಳಿಗೂ ಸಂಸದ ಮುನಿಸ್ವಾಮಿ ವಿರುದ್ದ ಪರೋಕ್ಷವಾಗಿ ವೈ.ಸಂಪಂಗಿ ವಾಗ್ದಾಳಿ ಸಹ ಮಾಡಿದ್ದಾರೆ.ಇವರಿಬ್ಬರ ನಡುವೆ ಒಂದಾಣಿಕೆ ಇಲ್ಲಾ ಅನ್ನೋದು ಈಗಾಗಲೇ ಬಹಿರಂಗವಾಗಿದೆ.ಇದಕ್ಕೆ ಪೂರಕವಾಗಿ ಅಣ್ಣಾಮಲೈ ಬಂದಿರುವ ಕಾಯ೯ಕ್ರಮಕ್ಕೆ ಆಹ್ವಾನ ನೀಡದೇ ಇರೋದೆ ಸಾಕ್ಷಿ ಅಂತ ಬಿಜೆಪಿ ಪಕ್ಷದವರೇ ಮಾತನಾಡಿಕೊಳ್ತಿದ್ದಾರೆ.ಇನ್ನು ಇಷ್ಟೆಲ್ಲಾ ಬೆಳವಣಿಗೆ ಆದ ಬಳಿಕ ಕೆಜಿಎಫ್ ನಲ್ಲಿ ಎರಡು ಬಣಗಳಾಗಿದ್ದು ಯಾರ ಜೊತೆ ಗುರುತಿಸಿಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಕೆಲ ಕಾಯ೯ಕತ೯ರಿದ್ದಾರೆ.

ಇನ್ನು ಸಂಸದ ಮುನಿಸ್ವಾಮಿ ಅವರು ಕೆಜಿಎಫ್ ಕ್ಷೇತ್ರದಲ್ಲಿ ಹೊಸ ಅಭ್ಯಥಿ೯ಯ ಹುಡುಕಾಟದಲ್ಲಿದ್ದಾರೆ ಅನ್ನೋ ಸುದ್ದಿಯೂ ಹರಿದಾಟ್ತಿದೆ.ಆಗಾಗೆ ಮುನಿಸ್ವಾಮಿ ಅವರ ಪತ್ನಿ ಶೈಲಜಾ ಅವರ ಹೆಸರು ಸಹ ಕೇಳಿ ಬತಿ೯ದೆ.ಈಗಾಗಲೇ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರನ್ನು ಸೋಲಿಸಿರುವ ಮುನಿಸ್ವಾಮಿ ,ಮುನಿಯಪ್ಪ ನವರ ಮಗಳು ರೂಪ ಅವರನ್ನು ಸೋಲಿಸಲು ಬಹಳಷ್ಟೂ ಓಡಾಟ ಮಾಡ್ತಿದ್ದಾರೆ.ಈಗಾಗಿ ತಮ್ಮ ಪತ್ನಿ ಶೈಲಜಾ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ತರುತ್ತಾರೆ ಅಂತ ಅಲ್ಲಲ್ಲಿ ಬಿಜೆಪಿ ಕಾಯ೯ಕತ೯ರು ಮಾತನಾಡಿಕೊಳ್ತಿದ್ದಾರೆ.

ಇದಕ್ಕೆ ಪೂರಕವಾಗಿ ಸಂಸದ ಮುನಿಸ್ವಾಮಿ ಅವರು ಸಹ ಈಗಾಗಲೇ ಬಿಜಿಎಂಎಲ್ ಹಾಗೂ ಚಿನ್ನದ ಗಣಿ ಮರು ಚಾಲನೆಗೆ ಹೆಚ್ಚಿದಾಗಿ ಓಡಾಡುತ್ತಿದ್ದು,ಇದಕ್ಕೆ ಹೆಚ್ಚಿನ ಹೊತ್ತು ಕೊಟ್ಟು ದೆಹಲಿಯ ನಾಯಕರನ್ನು ವಾರಕ್ಕೊಮ್ಮೆ ಭೇಟಿ ಆಗ್ತಿದ್ದಾರಂತೆ.ಒಂದೂ ಕೇಂದ್ರ ಸಕಾ೯ರ ಏನಾದ್ರು ತಜ್ಞರ ವರದಿ ತರೆಸಿಕೊಂಡು ಚಿನ್ನದ ಗಣಿಗೆ ಮರು ಚಾಲನೆ ನೀಡಿದ್ರೆ ಕೆಜಿಎಫ್ ನಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ,ಇದು ನಮಗೆ ಅನುಕೂಲವಾಗಲಿದೆ ಅಂತ ಸಂಸದ ಮುನಿಸ್ವಾಮಿ ಓಡಾಡುತ್ತಿದ್ದಾರೆ.ಇನ್ನು ಈ ಭಾರಿಯ ವಿಧಾನಸಭಾ ಚುನಾವಣೆಯಲಿ ನಮಗೆ ಟಿಕೇಟ್ ಸಿಗಲಿದೆ ಎಂದು ಮಾಜಿ ಶಾಸಕ ವೈ.ಸಂಪಂಗಿ ನಂಬಿಕೊಂಡಿದ್ದಾರೆ,ರಾಜ್ಯದ ಹಿರಿಯ ನಾಯಕರ ಸಂಪಕ೯ದಲ್ಲಿದ್ದಾರೆ.ಆದ್ರೇ ಒಂದೂ ವೇಳೆ ಟಿಕೆಟ್ ಏನಾದ್ರು ಕೈ ತಪ್ಪಿದ್ರೆ ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಅಂತ ಸಾವ೯ಜನಿಕರು ಮಾತನಾಡಿಕೊಳ್ತಿದ್ದಾರೆ. 

ಒಟ್ಟಾರೆ ಕೆಜಿಎಫ್ ನ ಬಿಜೆಪಿಯಲ್ಲಿ ಎರಡು ಬಣಗಳಾಗಿದ್ದು,ಯಾರ ಜೊತೆ ಗುರುತಿಸಿಕೊಳ್ಬೇಕು ಅಂತ ಕಾಯ೯ಕತ೯ರು ಗೊಂದಲದಲ್ಲಿದ್ದಾರೆ. ಇವರಿಬ್ಬರ ವೈಮನಸ್ಸನ್ನು ಸರಿಪಡಿಸದೇ ಹೋದ್ರೆ ಇದರ ಲಾಭವನ್ನು ಪಡೆದುಕೊಂಡು ಮತ್ತೆ ಕಾಂಗ್ರೆಸ್ ಗೆಲುವೂ ಸಾಧಿಸೋದ್ರಲ್ಲಿ ಅನುಮಾನವಿಲ್ಲ……

click me!