ಕಾಂಗ್ರೆಸ್‌ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ: ಸಚಿವ ಪರಮೇಶ್ವರ

By Kannadaprabha NewsFirst Published Aug 24, 2024, 8:55 AM IST
Highlights

ಹಿಂದೆ ಸ್ಪಷ್ಟಿಕರಣ ಕೇಳಿ ಒಂದೆರಡು ಮಸೂದೆಗಳನ್ನು ವಾಪಸ್ ಕಳುಹಿಸುತ್ತಿದ್ದರು. ಆದರೆ, ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿರಲಿಲ್ಲ. 11 ಬಿಲ್‌ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿದೆಯೆಂಬ ಸಂದೇಶ ಸಿಗುತ್ತಿದೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ 

ಬೆಂಗಳೂರು(ಆ.24):  ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸದ ಕೊರತೆ ಇದೆ. ಆದ್ದರಿಂದಲೇ 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸ್ಪಷ್ಟಿಕರಣ ಕೇಳಿ ಒಂದೆರಡು ಮಸೂದೆಗಳನ್ನು ವಾಪಸ್ ಕಳುಹಿಸುತ್ತಿದ್ದರು. ಆದರೆ, ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿರಲಿಲ್ಲ. 11 ಬಿಲ್‌ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿದೆಯೆಂಬ ಸಂದೇಶ ಸಿಗುತ್ತಿದೆ ಎಂದರು. 

Latest Videos

ರಾಜ್ಯಪಾಲರಿಗೆ ಬೆದರಿಕೆ ಇರೋ ವಿಚಾರ ನನಗೆ ಗೊತ್ತಿಲ್ಲ: ಗೃಹ ಸಚಿವ

ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊತ್ತಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳ, , ಕೇರಳದಲ್ಲಿ ರಾಜ್ಯ ಪಾಲರ ನಡತೆ, ವರ್ತನೆ ಕುರಿತು ಧ್ವನಿ ಎದ್ದಿವೆ. ಈ ಬಗ್ಗೆ ಚರ್ಚೆ * ಆಗುತ್ತದೆಯೇ ಏನೆಂಬುದು ಮಾಹಿತಿ ಇಲ್ಲ ಎಂದು ಹೇಳಿದರು.

click me!