ಮುಡಾ ಕೇಸ್‌ನಲ್ಲಿ ನನ್ನಿಂದ ಒಂದೇ ಒಂದು ಸಣ್ಣ ತಪ್ಪು ಕೂಡ ಆಗಿಲ್ಲ; ಹೈಕಮಾಂಡ್‌ಗೆ ಹೇಳಿದ ಸಿದ್ದರಾಮಯ್ಯ!

By Santosh NaikFirst Published Aug 24, 2024, 8:44 AM IST
Highlights

ಮುಡಾ ಪ್ರಕರಣದಲ್ಲಿ ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ವರಿಷ್ಠರಿಗೆ ತಿಳಿಸಿದ್ದಾರೆ. ಕಾನೂನು ಹೋರಾಟ ನಡೆಸುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಸುಪ್ರೀಂ ಕೋರ್ಟ್ ವರೆಗೂ ಹೋರಾಟ ಮಾಡಲು ಬೆಂಬಲ ನೀಡುವುದಾಗಿ ತಿಳಿಸಿದೆ.

ಬೆಂಗಳೂರು (ಆ.24): ಮುಡಾ ಕೇಸ್‌ನಲ್ಲಿ ನನ್ನಿಂದ ಒಂದೇ ಒಂದು ಸಣ್ಣ ತಪ್ಪು ಕೂಡ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ನವದೆಹಲಿಯಲ್ಲಿ ನಡೆದ ಎಐಸಿಸಿ ವರಿಷ್ಠರ ಸಭೆಯಲ್ಲಿ ತಿಳಿಸಿದ್ದಾರೆ. ಈ ವೇಳೆ ಹೈಕಮಾಂಡ್‌ ಎದುರು ಮಾತನಾಡಿರುವ ಸಿದ್ದರಾಮಯ್ಯ, ದಾಖಲೆಗಳಲ್ಲಿ ಆಗಲಿ, ಬೇರೆಯವರ ಮೇಲೆ ಪ್ರಭಾವ ಬೀರುವುದಾಗಲಿ ನಾನು ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ನೀಡಿರುವ ಮಾಹಿತಿಗೆ ಹೈಕಮಾಂಡ್‌ ಭೇಷ್‌ ಎಂದಿದೆ. ಕಾನೂನು ತಜ್ಞರಿಂದಲೂ ಇದೇ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಫುಲ್‌ ಖುಷಿಯಾಗಿದ್ದಾರೆ. ಯಾವ ಹಂತದ ಹೋರಾಟಕ್ಕೂ ಸಿದ್ದರಾಗಲು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಆಗಸ್ಟ್ 29ರ ಹೈಕೋಟ್೯ ತೀರ್ಪು ನಂತರವೂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಲು ಹೈಕಮಾಂಡ್ ನಿರ್ಧಾರ ಮಾಡಿದೆ. ಸುಪ್ರೀಂ ಕೋರ್ಟ್ ತನಕವೂ ಹೋರಾಟ ಮಾಡೋಣ, ನ್ಯಾಯ ಪಡಿಯೋಣ ಎಂದು ಬೆಂಬಲ ನೀಡಿದ್ದಾರೆ. ಸಿಎಂ ಪರ ಶಾಸಕರು, ಸಂಸದರು, ಸಚಿವರು ಒಟ್ಟಾಗಿ ನಿಲ್ಲಿ ರಾಜ್ಯಪಾಲರು ತನಿಖೆ ಆದೇಶ ನೀಡಿದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

ನಾವು ಕಾನೂನು ನಂಬಿದ್ದೇವೆ: ಮುಡಾ ಕೇಸ್‌ನಲ್ಲಿ ರಾಜ್ಯಪಾಲರ ನಿರ್ಣಯ ಸಂಪೂರ್ಣ ಕಾನೂನು ಬಾಹಿರ ಮಾತ್ರವಲ್ಲದೆ ಸಂವಿಧಾನ ಬಾಹಿರವೂ ಹೌದು. ಈ ವಿಚಾರವಾಗಿ ನಾವು ನಂಬಿಕೊಂಡಿರುವುದು ದೇಶದ ಕಾನೂನುನ್ನು ಮಾತ್ರ. ಬಿಜೆಪಿಯ ಕುತಂತ್ರದ ವಿರುದ್ಧ ನಮ್ಮ ಬೆನ್ನಿಗೆ ನಿಲ್ಲುವುದಾಗಿ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಇಬ್ಬರೂ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Latest Videos

ಬಿಜೆಪಿಗೆ ಉತ್ತರ ನೀಡಿ: ಬಿಜೆಪಿ ಹೋರಾಟಕ್ಕೆ ಪ್ರತಿ ಹೋರಾಟ ರೂಪಿಸುವಂತೆ ರಾಹುಲ್‌ ಗಾಂಧಿ ಹೇಳಿದ್ದಾರೆ. ಪ್ರತಿಭಟನೆಗೆ ಪ್ರತಿಭಟನೆಯಿಂದಲೇ ಗಟ್ಟಿಯಾಗಿ ಉತ್ತರ ಕೊಡಿ ಎನ್ನುವ ಸೂಚನೆಯ ಹೈಕಮಾಂಡ್‌ನಿಂದ ಬಂದಿದೆ. ಜನತೆಯ ಮುಂದೆ ಬಿಜೆಪಿಗರ ಆಟವನ್ನು ಸ್ಪಷ್ಟವಾಗಿ ಇಡಿ ರಾಜ್ಯ, ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಬಿಜೆಪಿಗರ ಆಟವನ್ನು ತಿಳಿಸುವಂತೆ ಸೂಚಿಸಲಾಗಿದೆ. ಬಿಜೆಪಿ ನಿಲುವಿನ ವಿರುದ್ದ, ರಾಜ್ಯಪಾಲರ ಆದೇಶದ ವಿರುದ್ದ ಎಲ್ಲಾ ಹಂತಗಳಲ್ಲಿ ಪ್ರತಿಭಟನೆ ಮಾಡಿ. ಸೆಪ್ಟೆಂಬರ್ ತಿಂಗಳಲ್ಲಿ ಪೂರ್ತಿಯಾಗಿ ಎಲ್ಲಾ ಹಂತಗಳಲ್ಲೂ ಪ್ರತಿಭಟಿಸಿ ಬಳಿಕ ರಾಷ್ಟಮಟ್ಟದಲ್ಲಿ ಪ್ರತಿಭಟನೆ ಮಾಡೋದು, ರಾಷ್ಟ್ರಪತಿ ಗಳ ಮುಂದೆ ಪೆರೇಡ್ ಮಾಡೋ ಯೋಜನೆ ರೂಪಿಸುವಂತೆ ಸಲಹೆ ಕೊಡಲಾಗಿದೆ.

1494 ಕೋಟಿ ರೂ.ಅಕ್ರಮ: ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಂದು ದೂರು..!

ಬಿಜೆಪಿ, ಜೆಡಿಎಸ್ ವಿರುದ್ದ ಗಟ್ಟಿಯಾದ ಹೋರಾಟ ಮಾಡಿ. ಒಬ್ಬ ಹಿಂದುಳಿದ ವರ್ಗದ ನಾಯಕನ ಸಿಎಂ ಆಗಿರುವುದು ಅವರು ಸಹಿಸುತ್ತಿಲ್ಲ. ಬಡಜನರಿಗೆ ನೀಡುವ ಗ್ಯಾರಂಟಿ ಗಳು ಸಹಿಸುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಎನ್ನುವ ಕೋನದಲ್ಲ ಪ್ರತಿಭಟನೆ ಮಾಡುವಂತೆ ತಿಳಿಸಲಾಗಿದೆ.

ಪ್ರಾಸಿಕ್ಯೂಷನ್‌ ವಿರುದ್ಧ ಸಿಎಂಗೆ ರಾಹುಲ್‌ ಗಾಂಧಿ ಅಭಯ: ಸಿದ್ದು ಬೆನ್ನಿಗೆ ಹೈಕಮಾಂಡ್‌..!

click me!