ಈ ಪ್ರಯತ್ನ ಆರು ತಿಂಗಳ ಹಳೆಯದ್ದು, ಈಗ ಮತ್ತೆ ಚಾಲ್ತಿಗೆ ಬಂದಿದೆ. ಸರ್ಕಾರ ರಚನೆಯಾದ ಆರು ತಿಂಗಳೂ ಸಹ ನಮ್ಮಲ್ಲಿ 20-30 ಶಾಸಕರು ಗುಂಪಾಗಿ ಹೋಗುತ್ತಾರೆ. ಸರ್ಕಾರ ಬೀಳಲಿದೆ ಎಂಬ ಚರ್ಚೆ ಬಂದಿತ್ತು. ಬಳಿಕ ಆರು ತಿಂಗಳು ಸುಮ್ಮನಾಗಿದ್ದರು. ಇದೀಗ ಮತ್ತೆ ಚಾಲಿಗೆ ಬಂದಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು(ಆ.24): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೆಡವಲು ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತ್ರ ನಡೆಸಿರುವ ಬಗ್ಗೆ ಗುರುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿರುವುದು ಆದರೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಸಚಿವರು ಸಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ಅವರು, ಈ ಬಗ್ಗೆ ಚರ್ಚೆ ನಡೆದಿದ್ದು ಸತ್ಯ. ಆದರೆ, ಸರ್ಕಾರ ಕೆಡವಿ ಹಾಕುವ ಸಾಮರ್ಥ ಜೆಡಿಎಸ್‌ಗೆ ಇಲ್ಲ ಎಂದರು.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ಕುರಿತು ಪ್ರಸ್ತಾಪಿಸಿದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಸರ್ಕಾರವನ್ನು ಬೀಳಿಸಲು ಕನಿಷ್ಠ 60-70 ಮಂದಿ ಕೈ ಶಾಸಕರು ಬಿಜೆಪಿ-ಜೆಡಿಎಸ್ಗೆ ಬೇಕು. ನಮ್ಮಿಂದ ಯಾವೊಬ್ಬ ಶಾಸಕರೂ ಹೋಗಲು ಸಾಧ್ಯವಿಲ್ಲ, ಯತ್ನಿಸಿರುವ ಬಿಜೆಪಿ-ಜೆಡಿಎಸ್ ಪತ್ಯ೦ತ್ರ ಫಲ ನೀಡಲ್ಲ ಎಂದರು' ಎಂದು ಮಾಹಿತಿ ನೀಡಿದರು.
6 ತಿಂಗ್ಳಲ್ಲಿ ಸರ್ಕಾರ ಬೀಳಿಸ್ತೇವೆಂದು ಅಮಿತ್ ಶಾಗೆ ದೇವೇಗೌಡ,ಎಚ್‌ಡಿಕೆ ವಚನ, ಸಿಎಂ ಸಿದ್ದರಾಮಯ್ಯ
ಕನ್ನಡಪ್ರಭ ವರದಿ ಸಂಚಲನ:
'ರಾಜ್ಯ ಸರ್ಕಾರವನ್ನು ಮುಂದಿನ 6 ತಿಂಗಳಲ್ಲಿ ಅಸ್ಥಿರಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಚನ ನೀಡಿ ಬಂದಿದ್ದಾರೆ. ಹೀಗಾಗಿಯೇ ಪ್ರಾಸಿಕ್ಯೂಷನ್ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಗುರುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ' ಎಂದು 'ಕನ್ನಡಪ್ರಭ' ಮಾಡಿದ್ದ ವರದಿಯು ತೀವ್ರ ಸಂಚಲನ ಉಂಟು ಮಾಡಿತ್ತು.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, 'ಅಸ್ಥಿರಗೊಳಿಸುವ ಷಡ್ಗ ಚಿತ್ರದ ಬಗ್ಗೆ ಚರ್ಚೆಯಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದರು. ನಮ್ಮ ಸರ್ಕಾರವನ್ನು ಪಕ್ಷಾಂತರ ಕಾಯಿದೆ ಅನ್ವಯ ಆಗದಂತೆ ಕೆಡವಲು ಪ್ರತಿಪಕ್ಷಗಳಿಗೆ ಈಗಿನ ಸ್ಥಾನ ಸೇರಿ 3ನೇ 2ರಷ್ಟು ಬಹುಮತ ಬೇಕು. ಇದು ಸಾಧ್ಯವಾಗಬೇಕಾದರೆ ನಮ್ಮ ಪಕ್ಷದ 70-80 ಶಾಸಕರು ಹೋಗಬೇಕು' ಎಂದರು.
'ಇನ್ನು ಕಳೆದ ಬಾರಿ ಮಾಡಿದಂತೆ ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಸಹ 60 ಶಾಸಕರು ರಾಜೀನಾಮೆ ನೀಡಿ ಮತ್ತೆ ಚುನಾವಣೆ ಗೆಲ್ಲಬೇಕು. ಈಈಗಿನ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದಿಂದಒಬ್ಬಶಾಸಕರೂ ಸಹ ಈ ರೀತಿ ರಾಜೀನಾಮೆ ನೀಡಿ ಹೋಗು ವುದಿಲ್ಲ. ಹಿಂದೆ ಹೋದವರೇ ಪ್ರಾಯಶ್ಚಿತ್ತ ಪಟ್ಟಿದ್ದಾರೆ. ನಮ್ಮ ಪಕ್ಷಕ್ಕೆ ವಾಪಸು ಬರಲು ಸಿದ್ದರಾಗಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಅಮಿತ್ ಶಾ ಬೆದರಿಕೆಗೆ ಹೆದರಿದ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿ: ಭಂಡಾರಿ
ಷಡ್ಯಂತ್ರ ಮತ್ತೆ ಚಾಲ್ತಿಗೆ- ಸತೀಶ:
ಸಿಎಲ್‌ಪಿ ಸಭೆಯಲ್ಲಿ ಸರ್ಕಾರ ಬೀಳಿಸುವ ಷಡ್ಯಂತ್ರದ ಬಗ್ಗೆ ಚರ್ಚೆ ಆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, 'ಈ ಪ್ರಯತ್ನ ಆರು ತಿಂಗಳ ಹಳೆಯದ್ದು, ಈಗ ಮತ್ತೆ ಚಾಲ್ತಿಗೆ ಬಂದಿದೆ. ಸರ್ಕಾರ ರಚನೆಯಾದ ಆರು ತಿಂಗಳೂ ಸಹ ನಮ್ಮಲ್ಲಿ 20-30 ಶಾಸಕರು ಗುಂಪಾಗಿ ಹೋಗುತ್ತಾರೆ. ಸರ್ಕಾರ ಬೀಳಲಿದೆ ಎಂಬ ಚರ್ಚೆ ಬಂದಿತ್ತು. ಬಳಿಕ ಆರು ತಿಂಗಳು ಸುಮ್ಮನಾಗಿದ್ದರು. ಇದೀಗ ಮತ್ತೆ ಚಾಲಿಗೆ ಬಂದಿದೆ' ಎಂದರು.
ಎಚ್‌ಡಿಕೆ, ಎಚ್‌ಡಿಡಿ ವಚನ ಕೊಟ್ಟಿರಬಹುದು:
'6 ತಿಂಗಳಲ್ಲಿ ಸರ್ಕಾರ ಅಸ್ಥಿರಗೊಳಿಸುವ ವಚನ ನೀಡಿದ್ದಾರಂತಲ್ಲ?' ಎಂಬ ಪ್ರಶ್ನೆಗೆ, 'ಅಮಿತ್ ಶಾ ಅವರಿಗೆ ಕುಮಾರಸ್ವಾಮಿ, ದೇವೇಗೌಡ ಮಾತು ಕೊಟ್ಟಿದ್ದಾರೆ ಎಂಬುದು ನಿಮ್ಮ ಪ್ರಶ್ನೆ. ಕೊಟ್ಟಿರಬಹುದು, ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಇದು ರಾಜಕೀಯ, ಇಲ್ಲಿ ಏನು ಬೇಕಾದರೂ ಆಗಬಹುದು. ನಾನು ಸಿಎಲ್ ಪಿಯಲ್ಲಿ ನಮ್ಮ ಸರ್ಕಾರದ ಅವಧಿ ಮುಗಿಯು ವವರೆಗೂ ಇದೇ ರೀತಿ ನಡೆಯುತ್ತದೆ ಎಂದೂ ಹೇಳಿದ್ದೇನೆ' ಎಂದು ಸತೀಶ್ ತಿಳಿಸಿದರು.