ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಾವೇ ಗೆಲ್ಲೋದು ಅಂತ ಹೇಳಿಕೊಂಡು ಒಡಾಡುತ್ತಿದ್ದಾರೆ. ಆದರೆ ಅಷ್ಟೆ ವೇಗದಲ್ಲಿ ಪ್ರಧಾನಿ ವಿರುದ್ಧ ವಾಗ್ಬಾಣಗಳು ತಿರುಗುಬಾಣಗಳಾಗುತ್ತಿವೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ಚಿಕ್ಕಬಳ್ಳಾಪುರ (ಅ.04): ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಾವೇ ಗೆಲ್ಲೋದು ಅಂತ ಹೇಳಿಕೊಂಡು ಒಡಾಡುತ್ತಿದ್ದಾರೆ. ಆದರೆ ಅಷ್ಟೆ ವೇಗದಲ್ಲಿ ಪ್ರಧಾನಿ ವಿರುದ್ಧ ವಾಗ್ಬಾಣಗಳು ತಿರುಗುಬಾಣಗಳಾಗುತ್ತಿವೆ ಎಂದು ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು. ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಮಹಿಳಾ ಕಾಂಗ್ರೇಸ್ ಕಾರ್ಯಕರ್ತೆಯರ ಸಭೆಗೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಜನಗಣತಿ ಮತ್ತು ಜಾತಿ ಗಣತಿ,ಪ್ರಾದೇಶಿಕ ವಿವಾದಗಳು ಮೋದಿಯವರನ್ನು ಸುತ್ತಿಕೊಳ್ಳುತ್ತಿವೆ. ಹಿಂದುಳಿದ ವರ್ಗಗಳು ಅವರ ಪಕ್ಷದ ವಿರುಧ್ದ ತಿರುಗಿ ಬೀಳುತ್ತವೆ. ನಮ್ಮ ಪಕ್ಷಕ್ಕೆ ಮತಕೊಡಲ್ಲ ಅನ್ನೋ ಕಾರಣಕ್ಕೆ ಜಾತಿ ಗಣತಿ ಬಿಡುಗಡೆ ಮಾಡುತಿಲ್ಲ ಎಂದು ಮೊಯ್ಲಿ ವಿಮರ್ಶಿಸಿದರು.
ಪ್ರಧಾನಿ ಮೋದಿ ಹಿಂದೇಟು: ಪ್ರಧಾನಿ ನರೇಂದ್ರ ಮೋದಿ ಜಾತಿ ಜನಗಣತಿ ಬಿಡುಗಡೆ ಮಾಡಲು ಹಿಂದೇಟು ಹಾಕುತಿದ್ದಾರೆ. ಬಿಹಾರ ಸಿಎಂ ಬಿಡುಗಡೆ ಮಾಡಿರುವ ಜಾತಿ ಗಣತಿಯಲ್ಲಿ ಒಬಿಸಿ ಮೇಲುಗೈ ಸಾದಿಸಿದೆ. ದೇಶದ ಎಲ್ಲ ಕಡೆಯೂ ಹಿಂದುಳಿದ ದಲಿತರ ಸಂಖ್ಯೆ ಹೆಚ್ವಿದೆ. ಅಧಿಕೃತವಾದ ಜಾತಿ ಗಣತಿ ಬಿಡುಗಡೆ ಗೊಳಿಸಿದರೆ ಬಿಜೆಪಿಗೆ ಬರುವ ಮತಗಳು ಶೂನ್ಯವಾಗುತ್ತವೆ ಅನ್ನೋ ಭಯದಿಂದ ಬಿಡುಗಡೆ ಮಾಡುತಿಲ್ಲ ಎಂದು ವಾದಿಸಿದರು
ಸಿದ್ದರಾಮಯ್ಯ ಆಡಳಿತ ಹಿಂದೂ ವಿರೋಧಿ ಆಡಳಿತ: ನಳಿನ್ ಕಟೀಲ್ ಆರೋಪ
ತಮಿಳುನಾಡು ವಿರುದ್ದ ದೂರಿ ಪ್ರಯೋಜನ ಇಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ. ನಮ್ಮ ಹಕ್ಕ ನಾವು ಕೇಳುತ್ತಿದ್ದೇವೆ. ರಾಜ್ಯದಲ್ಲಿ ಕಾವೇರಿ ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಯರಿಸಬೇಕಿತ್ತು. ಆದರೆ ಸಮಸ್ಯೆ ಬಗೆಹರಿಸದೆ ಪ್ರಧಾನಮಂತ್ರಿ ತಮಾಷೆ ನೋಡ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾವೇರಿ ವಿವಾದದಲ್ಲಿ ಮಧ್ಯೆ ಪ್ರವೇಶ ಮಾಡ್ತಿಲ್ಲ. ಈ ಹಿಂದೆ ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಮಧ್ಯೆ ಪ್ರವೇಶ ಮಾಡಿದ್ದನ್ನು ನೆನಪಿಸಿದರು.
ನೀರು ಬಿಡದಿದ್ದರೆ ಸರ್ಕಾರ ವಜಾ: ತಮಿಳು ನಾಡಿಗೆ ಕಾವೇರಿ ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೇ ಸುಪ್ರೀಂ ಕೋರ್ಟ್ ವಜಾ ಮಾಡುತ್ತದೆ. ಇಲ್ಲಿಯವರೆಗೂ ರಾಜ್ಯದಲ್ಲಿ ಯಾವುದೆ ಸರ್ಕಾರ ಇದ್ದರು ನೀರು ಬೀಡುತ್ತಿದ್ದರು. ಎರಡು ರಾಜ್ಯಗಳು ಕಿತ್ತಾಡಬೇಕು ಮೋದಿ ಸರ್ವಾಧಿಕಾರಿಯಾಗಿ ಇರಬೇಕು ಅನ್ನೊ ಭಾವನೆ ಹೊಂದಿದ್ದಾರೆ.ಕಾವೇರಿ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಅವರಿಗಿಲ್ಲಾ ಎಂದರು.
ಕೇಂದ್ರ ಸರ್ಕಾರವು ಕಾವೇರಿಯ ವಿಷಯದಲ್ಲಿ ಸಂಕಷ್ಟ ಸೂತ್ರವನ್ನೆ ಮಾಡಿಲ್ಲ. ಇನ್ನು ಎಲ್ಲಿಂದ ಸಂಕಷ್ಟ ಸೂತ್ರ ಪಾಲೊ ಮಾಡುವುದು. ಸಂಕಷ್ಟ ಸೂತ್ರ ಆಗಿದ್ದರೆ ಅಲ್ಲಿ ಯಾರಿಗೆ ಎಷ್ಟು ಪಾಲು ಯಾವಾಗ ನೀರು ಬಿಡಬೇಕು ಯವಾಗ ಬಿಡಬಾರದು ಎನ್ನುವುದು ಗೊತ್ತಾಗುತಿತ್ತು. ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ ಕಾವೇರಿ ವಿಷಯ ಮಾತನಾಡಲು ಬೇಡಿಕೊಂಡರೂ ಪ್ರಧಾನಿ ನರೇಂದ್ರ ಮೋದಿ ಸಮಯ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆಗಿಂತ, ವಿಧಾನಸಭೆ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಭಾವ ಬೀರುತ್ತೆ: ಸಿ.ಎಂ.ಇಬ್ರಾಹಿಂ
ಕಾವೇರಿ ವಿವಾದ: ಪ್ರಧಾನಿ ನಿರ್ಲಕ್ಷ್ಯ: ಕಾವೇರಿ ವಿವಾದ ಭುಗಿಳೇಳುತ್ತಿದ್ದಂತೆ ಎರಡು ರಾಜ್ಯಗಳನ್ನು ಚರ್ಚೆಗೆ ಕರೆಯಬೇಕಿತ್ತು. ಆದರೆ ಮಾತುಕತೆಗೆ ಕರೆಯದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರ್ಲಕ್ಷ್ಯ ವಹಿಸಿದ್ದಾರೆ. ಕಾವೇರಿ ವಿವಾದ ಬಗೆಯರಿಸುವುದು ಅವರಿಗೆ ಬೇಕಿಲ್ಲ. ಮತ್ತು ಕರ್ನಾಟಕಕ್ಕೆ ನೀರು ಉಳಿಸುವ ಮನಸ್ಸಿಲ್ಲ ಎಂದು ಕಾವೇರಿ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಮಾಧ್ಯಮ ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಂ.ಶಿವಾನಂದ್, ಎಸ್.ಎಂ ಮುನಿಯಪ್ಪ, ಕೆಪಿಸಿಸಿ ಸದಸ್ಯ ನಂದಿ.ಎಂ.ಆಂಜಿನಪ್ಪ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್, ನಗರಸಭಾ ಸದಸ್ಯ ಎಸ್.ಎಂ.ರಫೀಕ್,ನಗರಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುದಾಸೀರ್ ದಾವೂದ್, ಮತ್ತಿತರರು ಇದ್ದರು.