ಜನರ ಮೇಲೆ ಸರ್ಕಾರ ‘ಪತ್ತೇದಾರಿಕೆ’: ಬಿಜೆಪಿ ವಿರುದ್ಧ ಪ್ರಿಯಾಂಕ್‌ ಕಿಡಿ

By Kannadaprabha NewsFirst Published Dec 1, 2022, 1:30 PM IST
Highlights

ಜನರ ಸೋಷಿಯಲ್‌ ಮೀಡಿಯಾ ನೋಡುತ್ತಿರುವ ಬಿಜೆಪಿ, ಕಾಂಗ್ರೆಸ್‌ ಪರ ಇದ್ದರೆ ಮತದಾರರ ಪಟ್ಟಿಯಿಂದ ಹೆಸರು ಕಟ್‌, ಮೋದಿ, ಬಿಜೆಪಿ ಫಾಲೋ ಮಾಡ್ತಿದ್ರೆ ಮಾತ್ರ ಕೊಕ್‌ ಇಲ್ಲ: ಪ್ರಿಯಾಂಕ್‌ ಖರ್ಗೆ 

ಬೆಂಗಳೂರು(ಡಿ.01):  ‘ಬಿಜೆಪಿ ಸರ್ಕಾರವು ಕೇವಲ ಮತದಾರ ಪಟ್ಟಿಮೇಲೆ ಮಾತ್ರವಲ್ಲ. ನಾಗರಿಕರ ಮೇಲೂ ಹದ್ದಿನ ಕಣ್ಣಿಟ್ಟಿದೆ. ಪ್ರತಿಯೊಬ್ಬ ಮತದಾರನ ಸಾಮಾಜಿಕ ಜಾಲತಾಣ ಪರಿಶೀಲಿಸಿ ಅವರು ಬಿಜೆಪಿಯೇತರ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದಕ್ಕಾಗಿಯೇ ದಿನದ 24 ಗಂಟೆಯೂ ನಾಗರಿಕರ ಮೇಲೆ ನಿಗಾವಹಿಸಲಾಗುತ್ತಿದೆ’ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಪ್ರತಿಯೊಬ್ಬ ಜನಸಾಮಾನ್ಯರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ಅವರು ಯಾವ ಪಕ್ಷದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರನ್ನು ಫಾಲೋ ಮಾಡುತ್ತಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುತ್ತಿದೆ. ನರೇಂದ್ರ ಮೋದಿ, ಬಿಜೆಪಿಯನ್ನು ಫಾಲೋ ಮಾಡುತ್ತಿದ್ದರೆ ಮುಂದುವರೆಸಲಾಗುತ್ತಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಇದೇ ರೀತಿಯಲ್ಲಿ ಅಕ್ರಮ ನಡೆಸಲಾಗುತ್ತಿದೆ’ ಎಂದು ದೂರಿದರು.

ಪ್ರಿಯಾಂಕ್ ಖರ್ಗೆ ಸೋಲಿಗಾಗಿ ಪಣ: ಮೊಣಕಾಲ ಮೇಲೆ ತಿರುಮಲ ಬೆಟ್ಟ ಹತ್ತಿ ಹರಕೆ ಹೊತ್ತ ಬಿಜೆಪಿ ಮುಖಂಡ

ರಹಸ್ಯ ಕಾರ್ಯಾಚರಣೆ:

ಹೇಗೆ ಅಕ್ರಮ ಮಾಡುತ್ತಿದ್ದಾರೆ ಎಂಬುದನ್ನೂ ವಿವರಿಸಿದ ಅವರು, ‘ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುತ್ತಾರೆ. ಅದರ ಜತೆ ಮೊಬೈಲ್‌ ನಂಬರ್‌ ಕೊಡಬೇಕು. ಪ್ರತಿಯೊಂದು ಸಾಮಾಜಿಕ ಜಾಲತಾಣ ತೆರೆಯಲೂ ಮೊಬೈಲ್‌ ನಂಬರ್‌ ಅಗತ್ಯ. ಹೀಗಾಗಿ ನಿಮ್ಮ ದೂರವಾಣಿ ಸಂಖ್ಯೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪ್ರೊಫೈಲ್‌ ಹುಡುಕಲಾಗುತ್ತದೆ. ನಿಮ್ಮ ರಾಜಕೀಯ ಆಸಕ್ತಿಗಳನ್ನು ತಿಳಿದು ನೀವು ಕಾಂಗ್ರೆಸ್ಸಿಗರಾಗಿದದ್ದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ’ ಎಂದು ಆರೋಪಿಸಿದರು.

ಡೇಟಾ ಪ್ರೈವಸಿ ಹಿಂಪಡೆದಿದ್ದೇಕೆ?:

‘ಡೇಟಾ ಪ್ರೈವಸಿ ಪ್ರತಿಯೊಬ್ಬರ ಹಕ್ಕು. ಇದನ್ನು ಕಾಪಾಡಲು ದಿ ಡಿಜಿಟಲ್‌ ಪರ್ಸನ್‌ ಡಾಟಾ ಪ್ರೊಟೆಕ್ಷನ್‌ ಬಿಲ್‌-2022 ಹೆಸರಿನಲ್ಲಿ ವಿಧೇಯಕ ತಂದರು. ಇದನ್ನು ಸಮಿತಿಗೆ ತಂದು ಮತ್ತೆ ಪರಿಶೀಲನೆ ಹೆಸರಿನಲ್ಲಿ ವಾಪಸು ತೆಗೆದುಕೊಂಡರು. ಸರ್ಕಾರಕ್ಕೆ ನಾವು ಏನು ಮಾಡುತ್ತಿದ್ದೇವೆ ? ಏನು ಖರೀದಿ ಮಾಡುತ್ತಿದ್ದೇವೆ ಎಂಬುದೆಲ್ಲಾ ಯಾಕೆ ಬೇಕು? ಈ ಸರ್ಕಾರ ನಾಗರಿಕರ ಮೇಲೆ ದಿನದ 24 ಗಂಟೆಯೂ ಸರ್ವೈಲನ್ಸ್‌ (ನಿಗಾ) ಮಾಡುತ್ತಿದ್ದಂತಲ್ಲವೇ?’ ಎಂದು ಕಿಡಿಕಾರಿದರು.
 

click me!