
ವಿಧಾನ ಪರಿಷತ್ತು (ಆ.22): ರಾಜ್ಯವನ್ನು ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ನಮ್ಮ ಸರ್ಕಾರದ ಗುರಿ. ಮಾದಕ ವಸ್ತು ಸರಬರಾಜು ಜಾಲದ ವಿರುದ್ಧ ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ. ಅಧಿಕಾರಿಗಳು ಶಕ್ತಿ ಮೀರಿ ಈ ಜಾಲ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
2023ರಲ್ಲಿ 6767 ಪ್ರಕರಣ ದಾಖಲಿಸಿ 5,611 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 92 ಮಂದಿ ವಿದೇಶಿಗರು. 2024ರಲ್ಲಿ 4,188 ಮತ್ತು 2025ರಲ್ಲಿ ಇದುವರೆಗೆ 3,530 ಪ್ರಕರಣಗಳನ್ನು ದಾಖಲಾಗಿದೆ. 2020ರಲ್ಲಿ 35 ಕೋಟಿ ರು. ಮೌಲ್ಯದ ಗಾಂಜಾ, ಸಿಂಥೆಟಿಕ್ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2023ರಲ್ಲಿ ಅತಿ ಹೆಚ್ಚು 133 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಶೋಷಿತರ ಬದುಕಿನ ದಿಕ್ಕು ಬದಲಿಸಿದ್ದು ಸಂವಿಧಾನ: ನೊಂದವರು ಮತ್ತು ಶೋಷಿತರ ಬದುಕಿನ ದಿಕ್ಕನ್ನೇ ಬದಲಿಸಿದ್ದು ಸಂವಿಧಾನ ಮತ್ತು ಶಿಕ್ಷಣ ಎಂದು ಅಭಿಪ್ರಾಯಪಟ್ಟರು. ಇದಕ್ಕಾಗಿಯೇ ದೇವರೇ ಅಂಬೇಡ್ಕರರನ್ನು ಭೂಮಿಗೆ ಕಳುಹಿಸಿದ್ದಾನೆ ಎಂದೆನಿಸುತ್ತಿದೆ ಎಂದರು. ಸಮಾನತೆ, ಭಾತೃತ್ವದ ವಿಷಯವನ್ನು ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲೇ ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಕೋಟಿ ಕೋಟಿ ಜನ ಬಡತನ ಶೋಷಣೆಯಲ್ಲಿ ನರಳಬೇಕಾಗಿತ್ತು. ವೇದಿಕೆಯಲ್ಲಿ ಕುಳಿತವರು ಕೂಡ ಕೂಲಿ ಮಾಡಬೇಕಿತ್ತು ಎಂದರು.
ಸಂವಿಧಾನ, ಶಿಕ್ಷಣ ನಮ್ಮನ್ನು ಬದಲಿಸಿದೆ. ಶಿಕ್ಷಣದಿಂದ ಎಲ್ಲರಿಗೂ ಅನುಕೂಲ ಆಗಿದೆ. ರಾಜಕೀಯದಲ್ಲಿರುವ ಎಲ್ಲರಿಗೂ ಪಕ್ಷ ನಿಮಿತ್ತ. ಬಡವರನ್ನು ಮೇಲೆತ್ತುವ ಕೆಲಸಕ್ಕೆ ಯಾವುದು ಅಡ್ಡಿಯಾಗಬಾರದು ಎಂದರು. ವಿಶ್ವ ಮಟ್ಟದಲ್ಲಿ ಕೀರ್ತಿ ಗಳಿಸಿದ ಡಾಕ್ಟರ್, ಇಂಜಿನಿಯರ್ ನಮ್ಮ ದೇಶದವರೇ ಆಗಿದ್ದಾರೆ. ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯವನಾಗಿದ್ದು, ನನ್ನ ತಂದೆ ಗಂಗಾಧರಯ್ಯ ವಿನೋಬಾ ಭಾವೆ, ಅಂಬೇಡ್ಕರ್ ಇತರೆ ಮಹನೀಯರ ಪ್ರಭಾವಕ್ಕೆ ಒಳಗಾಗಿ ಸಾಧನೆ ಮಾಡಿದರು. ನನ್ನ ಮುತ್ತಾತ ಗಂಗಮರಿಯಪ್ಪ ಮೈಸೂರು ಸಂಸ್ಥಾನದಲ್ಲಿ ಹವಾಲ್ದಾರ್ ಆಗಿದ್ದರು ಎಂದರು.
ಜನರಿಗಾಗಿ ನಾವು ಎಂದು ಹೇಳಿದ ಮೊದಲ ಸಂಸ್ಥಾನ ಮೈಸೂರು, ಬಡವರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಕೊಡುವ ಮೊದಲೇ ಮೈಸೂರು ಸಂಸ್ಥಾನ ಸಮಾನತೆ ಕೊಟ್ಟಿದೆ. ಹೀಗಾಗಿ ಸೂರ್ಯ ಚಂದ್ರ ಇರುವವರೆಗೂ ಸ್ಮರಿಸಬೇಕು ಎಂದರು. ಬೆಂಡರವಾಡಿಯಲ್ಲಿ ನಡೆದ ಕಾರ್ಯಕ್ರಮ ನನ್ನ ಹೃದಯ ಮತ್ತು ಮನಸ್ಸಿಗೆ ತಟ್ಟಿದೆ. ಹೀಗಾಗಿ ಮಹಿಳಾ ಕೈಗಾರಿಕೆ ಮತ್ತು ಗ್ರಂಥಾಲಯಕ್ಕೆ 10 ಲಕ್ಷ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದರು. ಶಿಕ್ಷಣ ಭೀಷ್ಮ ಎಂದು ನನ್ನ ತಂದೆ ಬಗ್ಗೆ, ಸವ್ಯಸಾಚಿ ಪರಮೇಶ್ವರ ಎಂದು ನನ್ನ ಬಗ್ಗೆ ಪುಸ್ತಕ ಬರೆಯುವ ಮೂಲಕ ಸಮಾಜಕ್ಕೆ ನಮ್ಮ ಬಗ್ಗೆ ತಿಳಿಸಿಕೊಟ್ಟ ಮಹದೇವಭರಣಿ ನನ್ನ ಕಿರಿಯ ಸಹೋದರ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.