ಎಲ್ಲ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಮುನ್ಸೂಚನೆ ಸಿಕ್ಕಿದೆ. ನರೇಂದ್ರ ಮೋದಿ ಮೂರನೆಯ ಬಾರಿ ಪ್ರಧಾನಿ ಆಗಬೇಕು ಎಂಬ ಆಶಯದಿಂದ ಜನರು ಮತ ಚಲಾಯಿಸಿದ್ದಾರೆ. ನಾನು ಕೂಡ ಅತಿ ಹೆಚ್ಚು ಅಂತರದಿಂದ ಬೆಳಗಾವಿ ಕ್ಷೇತ್ರದಿಂದ ಗೆಲುವು ಸಾಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ಜೂ.03): ಎಲ್ಲ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಮುನ್ಸೂಚನೆ ಸಿಕ್ಕಿದೆ. ನರೇಂದ್ರ ಮೋದಿ ಮೂರನೆಯ ಬಾರಿ ಪ್ರಧಾನಿ ಆಗಬೇಕು ಎಂಬ ಆಶಯದಿಂದ ಜನರು ಮತ ಚಲಾಯಿಸಿದ್ದಾರೆ. ನಾನು ಕೂಡ ಅತಿ ಹೆಚ್ಚು ಅಂತರದಿಂದ ಬೆಳಗಾವಿ ಕ್ಷೇತ್ರದಿಂದ ಗೆಲುವು ಸಾಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟ 375 ಕ್ಷೇತ್ರಗಳಲ್ಲಾದರೂ ಗೆಲ್ಲಬಹುದು. 400ಕ್ಕೂ ಅಧಿಕ ಸ್ಥಾನಗಳಲ್ಲಾದರೂ ಗೆಲ್ಲಬಹುದು. ಆದರೆ ಅಧಿಕಾರದ ಗದ್ದುಗೆಯನ್ನು ಮತ್ತೊಮ್ಮೆ ಏರುವುದು ಖಚಿತ. ಎಕ್ಸಿಟ್ ಪೋಲ್ ನಡೆಸಿದ ಎಲ್ಲ ಏಜೆನ್ಸಿಗಳ ಫಲಿತಾಂಶ ಶೇ. 99ರಷ್ಟು ಒಂದೇ ರೀತಿ ಇದೆ ಎಂದರು.
ಸರ್ಕಾರ ಪತನ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದಿಂದ ಸರ್ಕಾರ ಪತನವಾಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಫಲಿತಾಂಶದ ಬಳಿಕ ಆಂತರಿಕ ಕಲಹ ಇನ್ನಷ್ಟು ಹೆಚ್ಚಾಗಲಿದೆ. ಸಿಎಂ, ಡಿಸಿಎಂ ನಡುವಿನ ಕಲಹ ಕೂಡ ಹೊರಬರಲಿದೆ. ಕಾಂಗ್ರೆಸ್‌ನವರ ಅಸಮಾಧಾನದಿಂದ ಸರ್ಕಾರ ಪತನವಾಗಲಿದೆ. ಬಿಜೆಪಿ ಆಪರೇಶನ್ ಕಮಲ ಮಾಡುವ ಅವಶ್ಯಕತೆ ಇಲ್ಲ ಎಂದರು. ತಮ್ಮ ವಿರುದ್ಧ ಯಾಗ ಮಾಡಿಸುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾಗ ಮಾಡಿಸಲು ಡಿ.ಕೆ. ಶಿವಕುಮಾರ ಎಕ್ಸ್‌ಪರ್ಟ್. ಕೇರಳ ಅಲ್ಲ ಭೂಗತದಲ್ಲೂ ಹೋಗಿ ಯಾಗ ಮಾಡಿಸುವ ತಾಕತ್ತು ಡಿ.ಕೆ. ಶಿವಕುಮಾರ ಅವರಿಗೆ ಇದೆ ಎಂದರು.
ಸಮೀಕ್ಷೆಗಳನ್ನು ಮೀರಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಗ್ಯಾರಂಟಿ ಸ್ಥಗಿತ: ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಭವಿಷ್ಯ ನುಡಿದರು.ನಗರದ ಗಾಂಧಿಭವನದಲ್ಲಿ ಮಂಗಳವಾರ ಬೆಳಗಾವಿ ಉತ್ತರ ಮಂಡಲದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲನೆ ಸಲ ಬೇಟಿ ಬಚಾವ್ ಬೇಟಿ ಪಾಡಾವ್ ಯೋಜನಡಿ ಭಾಗ್ಯಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಯಡಿಯೂರಪ್ಪ ಜಾರಿಗೆ ತಂದರು. ಆದರೆ, ಈಗನ ಸರ್ಕಾರ ಆ ಯೋಜನೆ ರದ್ದು ಮಾಡಿದ್ದಾರೆ. ಬಾಲ ಸಂಜೀವಿನಿ ಯೋಜನೆ ರದ್ದು ಮಾಡಿದ್ದಾರೆ.
ಈಗಿನ ಸರ್ಕಾರದ ಹತ್ತಿರ ದುಡ್ಡೆ ಇಲ್ಲ. ಅವರ ಗ್ಯಾರಂಟಿ ಸಲುವಾಗಿ ಎಲ್ಲ ಯೋಜನೆಗಳು ಸ್ಥಗಿತಗೊಂಡಿದೆ. ಲೋಕಸಭಾ ಚುನಾವಣೆ ಮೂಗಿದ ಬಳಿಕ ಅವರ ಗ್ಯಾರಂಟಿಗಳು ನಿಲ್ಲಲಿದೆ. ಅವರ ಗ್ಯಾರಂಟಿಗೆ ಮರಳಾಗಬೇಡಿ ಎಂದು ತಿಳಿಸಿದರು. ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಆಗಿದ್ದು, ಲವ್ ಜಿಹಾದ್ ಮಾಡಿ ಬ್ರೇನ್ ವಾಷ್ ಮಾಡಲಾಗಿದೆ. ಇದನ್ನು ಸಿದ್ದರಾಮಯ್ಯ ಖಂಡಿಸುವ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ವೈಯಕ್ತಿಕ ಕಾರಣಕ್ಕೆ ಮರ್ಡರ್ ಆಗಿದೆ ಎಂದು ಹೇಳಿದ್ದಾರೆ. ಹಿಂದು ಹುಡುಗ ಮುಸ್ಲಿಂ ಹುಡುಗಿಯನ್ನು ಮರ್ಡರ್ ಮಾಡಿದ್ದರೇ ಅವರ ಮನೆಗೆ ಓಡಿ ಹೋಗ್ತಿದ್ದರು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ: ನಟ ಚೇತನ್
ಮಹಿಳಾ ಮೀಸಲಾತಿ ನಗರಸಭೆ ಪುರಸಭೆ ತಾಲೂಕು ಪಂಚಾಯತಿಯಲ್ಲಿ, ಅಸೆಂಬ್ಲಿ, ಎಂಪಿ, ಎಂಎಲ್‌ಎಗೆ ಮೀಸಲಾತಿ ಇರಲಿಲ್ಲ. ಅದಕ್ಕೆ ಶೇ.33 ಮೀಸಲಾತಿ ನೀಡಲಾಗಿದೆ. ಬಸವಣ್ಣನವರ ಸಮಾನತೆಯ ರೀತಿಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ. 4 ಬಾರಿ ಸುರೇಶ್ ಅಂಗಡಿಗೆ ಆಶೀರ್ವಾದ ಮಾಡಿದ್ದೀರಿ. ಮಂಗಲ ಅಂಗಡಿ ಸಹ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೋದಿ ಪ್ರತಿನಿಧಿಯಾಗಿ ನಾನು ಇಲ್ಲಿ ಸ್ಪರ್ಧೆ ಮಾಡ್ತಿದ್ದಿನಿ, ನನಗೆ ಆಶೀರ್ವಾದ ಮಾಡುವ ಮೂಲಕ ನರೇಂದ್ರ ಮೋದಿಯವರನ್ನು 3ನೇ ಬಾರಿ ಪ್ರಧಾನಿ ಮಾಡಿ ಎಂದು ಕೋರಿದರು.