ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ: ನಟ ಚೇತನ್

By Govindaraj S  |  First Published Jun 3, 2024, 5:24 PM IST

ಸಿದ್ದರಾಮಯ್ಯ ಬಿಜೆಪಿ ಮೀಸಲಾತಿ ವಿರೋಧಿ ಎನ್ನುತ್ತಾರೆ, ಆದರೆ ಎಸ್ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೆ ಬಿಜೆಪಿ, ಸಿಎಂ ಬೊಮ್ಮಾಯಿ ಒಳಮೀಸಲಾತಿಗೆ ಆಯೋಗ ರಚಿಸಿದರು, ಈಗಿನ ಸರಕಾರ ಎಲ್ಲಾವನ್ನು ಕಾರ್ಯರೂಪಕ್ಕೆ ತರಬೇಕು ಎಂದು ನಟ ಚೇತನ್ ಹೇಳಿದರು.


ಕೊಡಗು (ಜೂ.03): ಸಿದ್ದರಾಮಯ್ಯ ಬಿಜೆಪಿ ಮೀಸಲಾತಿ ವಿರೋಧಿ ಎನ್ನುತ್ತಾರೆ, ಆದರೆ ಎಸ್ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೆ ಬಿಜೆಪಿ, ಸಿಎಂ ಬೊಮ್ಮಾಯಿ ಒಳಮೀಸಲಾತಿಗೆ ಆಯೋಗ ರಚಿಸಿದರು, ಈಗಿನ ಸರಕಾರ ಎಲ್ಲಾವನ್ನು ಕಾರ್ಯರೂಪಕ್ಕೆ ತರಬೇಕು, ಜಾತಿ ಜನಗಣತಿ ಹೊರಗೆ ಬರಬೇಕು ಎಂದು ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ನಟ, ಹೋರಾಟಗಾರ ಚೇತನ್ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಇದರಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಸಿಎಂ ಎಸ್ಟಿ ಒಳ ಮೀಸಲಾತಿಗೆ ಕಮಿಷನ್ ರಚನೆ ಮಾಡಬೇಕು. ಈ ಮೂಲಕ ಎಸ್ಟಿ 49 ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದು ಚೇತನ್ ಹೇಳಿದರು.

ಶ್ರೀಮಂತರ ಆಸ್ತಿ ಬಡವರಿಗೆ ಮರುಹಂಚಿಕೆ ಮಾಡಿ: ಸಿಎಂ ಅಹಿಂದ ಪರ ಕೆಲಸ ಮಾಡುತ್ತಿಲ್ಲ. ಅಲೆಮಾರಿ ಜನಾಂಗಗಳ ಅಭಿವೃದ್ಧಿ ಹಣ ನೀಡದೆ ಆಂಜನಾದ್ರಿ ಹನುಮ ಮಂದಿರದ ಅಭಿವೃದ್ಧಿಗೆ ನೂರು ಕೋಟಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್ ವಾಗ್ದಾಳಿ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಚೇತನ್, ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ನೂರು ಕೋಟಿ ಹಣ ನೀಡಿರುವ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಆ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಸುವಂತೆ ಒತ್ತಾಯಿಸಿದರು. 

Tap to resize

Latest Videos

ಚಿಕ್ಕೋಡಿ ಪಟ್ಟಣದ ರಾಮನಗರ ಅಲೆಮಾರಿ ಜನಾಂಗದ 82 ಕುಟುಂಬಗಳು ಇನ್ನೂ ಕೂಡ ಬಡತನದಲ್ಲಿವೆ, ವಾಸ ಮಾಡಲು ಒಂದು ಸೂರು ಕಾಣದೇ ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಸೋಮಾರಿ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ನೀಡಿಲ್ಲ.  ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಮುಂದಾಗದೇ ಹನುಮಾನ ಜನ್ಮಭೂಮಿ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಇದೇ ಸರ್ಕಾರದ ಆದ್ಯತೆನಾ? ಎಂದು ಪ್ರಶ್ನಿಸಿದರು. 

ಪ್ರಸ್ತುತ ಕಾಣುತ್ತಿರುವುದು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್: ಮಾಜಿ ಸಿಎಂ ಸದಾನಂದ ಗೌಡ

ಕೂಡಲೇ 82 ಕುಟುಂಬಗಳಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿದರು. ತಾನು ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನಿಜವಾಗಲೂ ಅಹಿಂದಪರ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಅಹಿಂದ ಪರ ಕೆಲಸ ಮಾಡದೇ ಸೋಮಾರಿಯಾಗಿದ್ದಾರೆ ಎಂದು ಕಿಡಿಕಾರಿದು. ಇದೇ ವೇಳೆ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿ ಶ್ರೀಮಂತರ ಆಸ್ತಿಯನ್ನ ಬಡವರಿಗೆ ಮರುಹಂಚಿಕೆ ಮಾಡುವಂತೆ ಒತ್ತಾಯಿಸಿದರು.

click me!