ಹೈಕಮಾಂಡ್‌ನಿಂದ ವಿಜಯದ ಸಂಕೇತ ಸಿಕ್ಕಿದೆ: ಶಾಸಕ ಯತ್ನಾಳ

Published : Feb 09, 2025, 07:26 AM IST
ಹೈಕಮಾಂಡ್‌ನಿಂದ ವಿಜಯದ ಸಂಕೇತ ಸಿಕ್ಕಿದೆ: ಶಾಸಕ ಯತ್ನಾಳ

ಸಾರಾಂಶ

ದೆಹಲಿ ಭೇಟಿ ಫಲಪ್ರದವಾಗಿದ್ದು, ನಮಗೆ ವಿಜಯದ ಸಂಕೇತ ಸಿಕ್ಕಿದೆ. ನಮಗೆ ಅಪಮಾನ ಆಗಿಲ್ಲ, ವಿಜಯದ ಬಂಗಾರ ಕೈಯಲ್ಲಿ ಹಿಡಿದುಕೊಂಡು ಬಂದಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ವಿಜಯಪುರ (ಫೆ.09): ದೆಹಲಿ ಭೇಟಿ ಫಲಪ್ರದವಾಗಿದ್ದು, ನಮಗೆ ವಿಜಯದ ಸಂಕೇತ ಸಿಕ್ಕಿದೆ. ನಮಗೆ ಅಪಮಾನ ಆಗಿಲ್ಲ, ವಿಜಯದ ಬಂಗಾರ ಕೈಯಲ್ಲಿ ಹಿಡಿದುಕೊಂಡು ಬಂದಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ವಿಚಾರಕ್ಕೆ ದೆಹಲಿ ನಾಯಕರ ಭೇಟಿ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೊದಲ ಪ್ರತಿಕ್ರಿಯೆ ನೀಡಿದರು. ನಾವು ವಿಜಯದ ಸಂಕೇತ ಹಿಡಿದುಕೊಂಡು ಬಂದಿದ್ದೇವೆ. ಕೇಂದ್ರ ನಾಯಕರು ನಮಗೆ ಸ್ಪಂದಿಸಿದ್ದು, ನಮ್ಮ‌ ಭೇಟಿ ಅಪಮಾನ ಮಾಡುವುದು ಖಂಡನೀಯ. 

ಯಾರ ಭೇಟಿ ಎಂಬುದು ಗುಪ್ತವಾಗಿಡುವಂತೆ ನಾಯಕರು ಹೇಳಿದ್ದಾರೆಂದು ಯತ್ನಾಳ ತಿಳಿಸಿದರು. ರಾಜ್ಯದ ಬೆಳವಣಿಗೆ ಕುರಿತು ಫೆಬ್ರವರಿ 10 ರಂದು‌ ಕೇಂದ್ರ‌ ನಾಯಕರು ಎಲ್ಲರನ್ನು ಕರೆಯುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಗೊತ್ತಿಲ್ಲ, ರಾಜ್ಯ ಸಹ ಉಸ್ತುವಾರಿ ‌ರಾಜ್ಯಕ್ಕೆ ಬಂದಿದ್ದಾರೆ. ಆರ್.ಅಶೋಕ ‌ಮಾಹಿತಿ ಹೇಳಿದ್ದಾರೆ. ಎಲ್ಲರ ಪ್ರೀತಿ ಗಳಿಸಿದವರಿಗೆ ಅಧಿಕಾರ ನಿಡಬೇಕೆಂದು ಹೇಳಿದ್ದಾರೆ. ಇದೇ ವಿಚಾರ ಮಾಜಿ ಸಚಿವ ‌ನಿರಾಣಿ ಹೇಳಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಹೊಸ ಪರ್ವ ಆರಂಭಕ್ಕೆ ಮಳೆ, ಗಾಳಿ, ಬೆಂಕಿ, ಪ್ರವಾಹ ಬಿರುಗಾಳಿ ಬೀಸಿ ಹೊಸ ವಾತಾವರಣ ಬರುತ್ತದೆ. 

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್​ ತಪ್ಪಿಸುತ್ತಿದ್ದವರಿಗೆ ಬಿಗ್‌ಶಾಕ್!

ಒಳ್ಳೆ ನಾಯಕ ಸಿಗುತ್ತಾನೆ, ನಾವೆಲ್ಲ‌ ಒಂದಾಗಿದ್ದೇವೆ. ಯಾವುದೇ ಜನಾಂಗಕ್ಕೆ ಕೊಟ್ಟರೂ ಸಮಾಧಾನವಿದೆ. ಎಲ್ಲ‌ ಸಮಾಜದ ಮುಖಂಡರೂ ಸಮರ್ಥರಿದ್ದಾರೆ. ಬರೀ ಯತ್ನಾಳ, ವಿಜಯೇಂದ್ರ ಇಲ್ಲ. ಹೆಚ್ಚು ಮತ ಸೆಳೆಯೋರನ್ನ ಮಾಡಬೇಕಿದೆ. ಎಲ್ಲ ಸಮಾಜದ ಮುಖಂಡರೂ ಸಮರ್ಥರಿದ್ದಾರೆ ಎಂದರು. ವಿಜಯೇಂದ್ರ‌ ವಿರೋಧಿ ಬಣ ದಿನದಿಂದ‌ ದಿನ ಹೆಚ್ಚುತ್ತಿದೆ. ವಿಜಯೆಂದ್ರ ಅನನುಭವಿ ತಂದೆ ಹೆಸರು‌ ಹೇಳಿಕೊಂಡು ಬರುತ್ತಿದ್ದಾನೆ. ಆತನಿಗೆ ನಯ ವಿನಯ ಗೊತ್ತಿಲ್ಲ. ಪಕ್ಷ ಸಂಘಟನೆ ಬಗ್ಗೆ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿಕೊಂಡು ಬಂದಿದ್ದಾನೆ. ಯಡಿಯೂರಪ್ಪ ಸಿಎಂ ಇದ್ದರೆಂದು‌ ಗೌರವ ಕೊಡುತ್ತಿದ್ದರು ಎಂದು ಟೀಕಿಸಿದರು.

ಮೂರು ಬೇಡಿಕೆಗಳಿವೆ: ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಭ್ರಷ್ಟ ಕುಟುಂಬದಿಂದ ಬಿಜೆಪಿ ಮುಕ್ತ ಹಾಗೂ ಹಿಂದುತ್ವ ಆಧಾರ ಮೇಲೆ ರಾಜ್ಯದಲ್ಲಿ ಬಿಜೆಪಿ ಬೆಳೆಯಬೇಕು. ಪ್ರಧಾನಿ ಮೋದಿ‌, ಉತ್ತರ ಪ್ರದೇಶದ ಸಿಎಂ ಯೋಗಿ ಮಾದರಿ ಅಧಿಕಾರ ನೀಡಬೇಕು. ನಾನು ವಿರೋಧಿಗಳ ಬಗ್ಗೆ ಮಾತನಾಡಿದರೆ ಅವರ ಆತ್ಮಸ್ಥೈರ್ಯ ಕುಗ್ಗುತ್ತದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ವಿಜಯೇಂದ್ರ ನನ್ನ ಬಗ್ಗೆ ಮಾತನಾಡಿದರೆ ಬಂಡವಾಳ ಬಿಚ್ಚಿಡುವೆ. ಎಲ್ಲಿ ಏನೇನಾಗಿದೆ ಎಲ್ಲವೂ ಗೊತ್ತು. ವಿಜೆಯೇಂದ್ರ ಬಳಿ ಬ್ಲಾಕ್ ಮೇಲ್ ಮಾಡೋ ಟೀಂ‌ ಇದೆ. ಇವೆಲ್ಲ ನಾಟಕ ಬ್ಲ್ಯಾಕ್ ಮೇಲ್ ಬಿಡಬೇಕು.

ಹಾಗೇ ಮಾಡಿದರೆ ನಮ್ಮ ಬಳಿಯೂ ಇದೆ ಎಂದರು. ವಿಜಯೇಂದ್ರ ಲಿಂಗಾಯತ ಫೇಕ್ ಅಕೌಂಟ್ ತಗೆದು ಬಾಯಿಗೆ ಬಂದಂತೆ ಮಾತನಾಡಿಸಿದರೆ ನಾವೂ ಅದೇ ಮಾದರಿ ಉತ್ತರ ನೀಡುತ್ತೇವೆ. ಇಂಥ ಅಕೌಂಟ್‌ಗೆ ನಿಮ್ಮಪ್ಪನಂತ ಅಕೌಂಟ್ ಮಾಡಿ‌ ಉತ್ತರ ನೀಡುತ್ತೇವೆಂದು‌ ಖಡಕ್ ಎಚ್ಚರಿಕೆ ಕೊಟ್ಟರು. ವಿರೋಧ ಪಕ್ಷದ ನಾಯಕನಾಗಲು ಯತ್ನಾಳಗೆ ಆಫರ್ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದೇ ಆಫರ್ ಇಲ್ಲ, ಎಲ್ಲ ಸಮೀಕರಣ ಮಾಡಲಾಗುತ್ತದೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ಸ್ಥಾನಗಳು ಬದಲಾಗುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ,

ನೆಟ್ಕಲ್ ಯೋಜನೆಯಲ್ಲಿ ಕಳಪೆ ಕಾಮಗಾರಿ: ಶಾಸಕ ಇಕ್ಬಾಲ್ ಹುಸೇನ್ ಆರೋಪ

ಸವದಿ ಅವರು ಮೊದಲು ತಮ್ಮ ಪಕ್ಷದ್ದು ನೋಡಿಕೊಳ್ಳಲಿ, ಕಾಂಗ್ರೆಸ್ ನಲ್ಲಿ ದೊಡ್ಡ ಕತ್ತೆ‌ ಬಿದ್ದಿದೆ, ನಮ್ಮ ತಟ್ಟೆಯಲ್ಲಿನ ನೊಣ ನೋಡುತ್ತಿದ್ದಾರೆ. ರಾಹುಲ್ ಹಿಂದೆ ಸಿಎಂ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಿಂದೆ ಡಿ.ಕೆ.ಶಿವಕುಮಾರ ಓಡಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು. ಸದ್ಯ ಬಿಜೆಪಿ ಭ್ರಷ್ಟರ ಕೈಯಿಂದ ಮುಕ್ತವಾಗಬೇಕಿದೆ. ವಿಜಯೇಂದ್ರ ವಿಜಯಪುರ ‌ಮಹಾನಗರ ಪಾಲಿಕೆ‌ಗೆ ಬಂದಿದ್ದ ₹ 125 ಕೋಟಿ‌ ಹಣ ವಾಪಸ್ ತೆಗೆದುಕೊಂಡ ಕಾರಣ ಜಗಳ ಆರಂಭವಾಗಿದೆ. ಆ ಜಗಳದಿಂದಲೇ ಇಂದು‌ ವಿಜಯಪುರದಲ್ಲಿ ಅಭಿವೃದ್ಧಿಯಾಗಿದೆ. ಭಾರತದಲ್ಲಿ ಮೂರನೇ ಶುದ್ದ ಗಾಳಿ ಬೀಸೋ ನಗರ ವಿಜಯಪುರ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ