ದೇಶಕ್ಕೆ ಧೂರ್ತ, ಮೂರ್ಖರ ರಾಜಕಾರಣ ಬೇಡ: ಪ್ರಧಾನಿ ಮೋದಿ

Published : Feb 09, 2025, 07:14 AM IST
ದೇಶಕ್ಕೆ ಧೂರ್ತ, ಮೂರ್ಖರ ರಾಜಕಾರಣ ಬೇಡ: ಪ್ರಧಾನಿ ಮೋದಿ

ಸಾರಾಂಶ

ಮೋದಿಯವರ ಗ್ಯಾರಂಟಿಯ ಮೇಲೆ ಭರವಸೆಯಿಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರರಾಜಧಾನಿ ವಲಯದ ಎಲ್ಲಾ ರಾಜ್ಯಗಳನ್ನು ಆಳುತ್ತಿದೆ ಎಂದು ಹರ್ಷಿಸಿದ್ದಾರೆ.

ನವದೆಹಲಿ (ಫೆ.09): ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವುದು ದಾಖಲಿಸಿದ ಬೆನ್ನಲ್ಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಪ್‌ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ದೇಶಕ್ಕೆ ಗಂಭೀರ ರಾಜಕೀಯ ಪರಿವರ್ತನೆ, ವಿಕಸಿತ ಭಾರತದ ಅಗತ್ಯವಿದೆಯೇ ಹೊರತು ಧೂರ್ತರು, ಮೂರ್ಖರ ರಾಜಕಾರಣ ಅಲ್ಲ’ ಎಂದಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಿಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

‘ಶಾರ್ಟ್‌ಕಟ್‌ ರಾಜಕಾರಣವನ್ನು ಶಾರ್ಟ್‌ ಸರ್ಕಿಟ್‌ ಮಾಡಿರುವ ಜನಾದೇಶವು, ರಾಜಕೀಯದಲ್ಲಿ ಭ್ರಷ್ಟಾಚಾರ ಹಾಗೂ ಸುಳ್ಳಿಗೆ ಜಾಗವಿಲ್ಲ ಎಂದಿದೆ. ರಾಜಕಾರಣವನ್ನು ಬದಲಿಸುತ್ತೇವೆ ಎಂದು ಬಂದ ಆಪ್‌-ದಾ(ವಿಪತ್ತು) ಅಪ್ರಾಣಿಕತೆಯನ್ನು ತೋರಿತು. ಅದನ್ನು ಹೊರಗಟ್ಟಿದ ದೆಹಲಿ ಜನ ಬಿಜೆಪಿಯ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ’ ಎನ್ನುತ್ತಾ, ಮೋದಿಯವರ ಗ್ಯಾರಂಟಿಯ ಮೇಲೆ ಭರವಸೆಯಿಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರರಾಜಧಾನಿ ವಲಯದ ಎಲ್ಲಾ ರಾಜ್ಯಗಳನ್ನು ಆಳುತ್ತಿದೆ ಎಂದು ಹರ್ಷಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್​ ತಪ್ಪಿಸುತ್ತಿದ್ದವರಿಗೆ ಬಿಗ್‌ಶಾಕ್!

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಮೋದಿ, ‘ಕಾಂಗ್ರೆಸ್‌ ತನ್ನ ಮಿತ್ರಪಕ್ಷಗಳ ಚುನಾವಣಾ ತಂತ್ರಗಳನ್ನು ಕದ್ದು, ಅವರ ವೋಟ್‌ಬ್ಯಾಂಕ್‌ ಕಸಿಯುತ್ತಿದೆ’ ಎನ್ನುತ್ತಾ ಉತ್ತರಪ್ರದೇಶ, ಬಿಹಾರ್‌, ಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಉದಾಹರಣೆ ನೀಡಿದರು. ಜತೆಗೆ, ಕಾಂಗ್ರೆಸ್‌ ಹಾಗೂ ಆಪ್‌ ನಗರ ನಕ್ಸಲರನ್ನು ಬೆಂಬಲಿಸುತ್ತಿವೆ ಎಂದರು.

ಫಲಿಸಿದ ಮೋದಿ ವರ್ಚಸ್ಸು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ್ದು, ಆಪ್‌ನ ಕನಸು ನುಚ್ಚುನೂರಾಗಿದೆ. ಬರೋಬ್ಬರಿ 27 ವರ್ಷಗಳ ನಂತರ ದೆಹಲಿ ಜನರ ಹೃದಯದಲ್ಲಿ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ಗೆಲುವಿಗೆ ಹಲವು ತಂತ್ರಗಳು ಕಾರಣವಾಗಿದ್ದು, ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮುಖ್ಯ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

ನೆಟ್ಕಲ್ ಯೋಜನೆಯಲ್ಲಿ ಕಳಪೆ ಕಾಮಗಾರಿ: ಶಾಸಕ ಇಕ್ಬಾಲ್ ಹುಸೇನ್ ಆರೋಪ

ದೆಹಲಿಯಲ್ಲಿ ಈ ಬಾರಿ ಬ್ರ್ಯಾಂಡ್ ಮೋದಿ ಎಂಬ ಹೆಸರು ವರ್ಕೌಟ್ ಆಗಿದೆ. ಆಮ್ ಆದ್ಮಿ ಪಕ್ಷದ ಒಂದೊಂದು ಪ್ರಮಾದವನ್ನು ಅತ್ಯಂತ ಕಠಿಣವಾಗಿ, ಲೇವಡಿಯಾಗಿ ಜನರ ಮುಂದೆ ಇಡುವಲ್ಲಿ ಮೋದಿ ಯಶಸ್ವಿಯಾದರು. ದೆಹಲಿಯಲ್ಲಿ ಬಿಜೆಪಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರಲಿಲ್ಲ. ಯಾವೊಬ್ಬ ರಾಜ್ಯ ನಾಯಕರ ಹೆಸರಿನಲ್ಲಿಯೂ ಮತ ಕೇಳಿರಲಿಲ್ಲ. ನರೇಂದ್ರ ಮೋದಿಯವರ ಆಡಳಿತವನ್ನೇ ಪ್ರಮುಖ ಅಸ್ತ್ರವಾಗಿಸಿ ‘ಮೋದಿ ಗ್ಯಾರಂಟಿ’ ಮೂಲಕ ಪ್ರಚಾರ ನಡೆಸಲಾಗಿತ್ತು. ಇವೆಲ್ಲವೂ ಬಿಜೆಪಿಗೆ ವರವಾಗಿ ಪರಿಣಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!