ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ: ಸಿದ್ದರಾಮಯ್ಯ ವಿರುದ್ದ ಕಿಡಿ

By Govindaraj S  |  First Published Apr 18, 2023, 12:30 AM IST

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಗೋಪಿಕೃಷ್ಣ ಪರವಾಗಿ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.18): ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಗೋಪಿಕೃಷ್ಣ ಪರವಾಗಿ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ. ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರ ನಿವಾಸದಲ್ಲಿಂದು ಮಾಜಿ ಶಾಸಕ ಟಿ.ಹೆಚ್ ಶಿವಶಂಕರಪ್ಪ, ಗೋಪಿಕೃಷ್ಣ ಹಾಗೂ 10 ಮಂದಿ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಬಂಡಾಯ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ಅಂತಿಮವಾಗಿ ಹೆಚ್ ಐ ಗೋಪಿಕೃಷ್ಣ ಅವರನ್ನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

Tap to resize

Latest Videos

undefined

ಅಭ್ಯರ್ಥಿ ವಿರುದ್ದ ಕಿಡಿಕಾರಿದ ಟಿಕೆಟ್ ವಂಚಿತರು: ತರೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ಪಕ್ಷದಲ್ಲಿ 13 ಮಂದಿ ಅರ್ಜಿ ಹಾಕಿದ್ದರು. ಅಂತಿಮವಾಗಿ 13 ಆಕ್ಷಾಂಕಿಗಳಲ್ಲಿ ಮಾಜಿ ಶಾಸಕ ಶ್ರೀನಿವಾಸ್ ಗೆ ಕೈ ಟಿಕೆಟ್ ನೀಡಿದ್ದು ಉಳಿದ ಆಕ್ಷಾಂಕಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ 13 ಮಂದಿ ಆಕ್ಷಾಂಕಿಗಳಲ್ಲಿ 10 ಮಂದಿ ಆಕ್ಷಾಂಕಿಗಳು ಬಂಡಾಯದ ಸಭೆ ನಡೆಸಿ ಅಭ್ಯರ್ಥಿ ವಿರುದ್ದ ಕಿಡಿಕಾರಿದ್ದಾರೆ. ಮಾಜಿ ಶಾಸಕ ಎಸ್, ಎಂ ನಾಗರಾಜ್ ಮಾತನಾಡಿ ಮೇ 10ರಂದು ನಡೆಯುವ ವಿಧಾನ ಸಭಾ ಚುನಾವಣೆಗೆ ಕ್ಷೇತ್ರದಿಂದ 13ಮಂದಿ ಅರ್ಜಿ ಸಲ್ಲಿಸಿದ್ದು, ಶ್ರೀನಿವಾಸ್ ಹೊರತುಪಡಿಸಿ ಯಾರಿಗಾದರೂ ಟಿಕೆಟ್ ಕೊಡುವಂತೆ ಹೇಳಿದ್ದರೂ ಕೂಡ ಹೈಕಮಾಂಡ್ ನಮ್ಮನ್ನು ಕಡೆಗಣಿಸಿ, ಅವರಿಗೆ ಟಿಕೆಟ್ ನೀಡಿರುವುದು ನಮ್ಮೆಲ್ಲರಿಗೂ ಬೇಸರ ತರಿಸಿದೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಟಿ ಒಡೆಯ: ಆದರೆ ಕೈಯಲ್ಲಿರುವುದು ಬರೀ 86 ಸಾವಿರ..

ಹಾಗಾಗಿ ಗೋಪಿಕೃಷ್ಣ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸಿ ಎಲ್ಲರೂ ಬೆಂಬಲ ನೀಡಿ, ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಪಕ್ಷ ಇದೀಗ ಟಿಕೆಟ್ ನೀಡಿರುವ  ಶ್ರೀನಿವಾಸ್ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನ ಹಾಗೂ ಪಕ್ಷದ ವಿರುದ್ಧ ಕೆಲಸ ಮಾಡಿದ್ದರು. ಆದರೂ, ಪಕ್ಷ ಅವರಿಗೆ ಅವಕಾಶ ಮಾಡಿಕೊಟ್ಟಿರುವುದು ಪಕ್ಷ ಕಟ್ಟಿ ಬೆಳೆಸಿದವನಿಗೆ ನೋವುಂಟ ಮಾಡಿದೆ. ಆದರಿಂದ ಈ ಕಣಕ್ಕಿಳಿಸುತ್ತಿದ್ದೇವೆ. ಎಲ್ಲ ಆಕಾಂಕ್ಷಿಗಳು ಒಟ್ಟಾಗಿ ನಿರ್ಧಾರ ಮಾಡಿದ್ದೇವೆ ಎಂದರು. 

ಸಿದ್ದರಾಮಯ್ಯ ವಿರುದ್ದ ಗೋಪಿಕೃಷ್ಣ ಕಿಡಿ: ಗೋಪಿಕೃಷ್ಣ ಮಾತನಾಡಿ ಸಿದ್ದರಾಮಯ್ಯ ಅವರು ಎಲ್ಲ ವೇದಿಕೆಗಳಲ್ಲೂ ಕೂಡಾ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡುತ್ತೇನೆ ಎಂದು ಹೇಳಿಕೊಂಡು ಬರುದ ಮೂಲಕ ಆಸೆ ತೋರಿಸಿದ್ದರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಹಾ ನನಗೆ ಟಿಕೆಟ್ ನೀಡಲು ಸಾಕಷ್ಟು ಪ್ರಯತ್ನ ಪಟ್ಟರು. ಸಿದ್ದರಾಮಯ್ಯರಿಗೆ ನನಗೆ ಟಿಕೆಟ್ ನೀಡುವ ಮನಸ್ಸಿದರೂ ಬೈರತಿ ಸುರೇಶ್ ಮಾತಿಗೆ ಕಟ್ಟುಬಿದ್ದು, ಟಿಕೆಟ್ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ ಎಂದು ಕಣ್ಣೀರಿಟ್ಟರು. ಸಿದ್ದರಾಮಯ್ಯ ಕ್ಷೇತ್ರವಾದ ವರುಣಾ ಕ್ಷೇತ್ರದಲ್ಲಿ 4500 ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದೇನೆ ,ಕಾಂಗ್ರೆಸ್ ಪಕ್ಷಕ್ಕೆ 2 ಕೋಟಿ ಹಣ ನೀಡಿದ್ದೇನೆ ,ಮೂರು ತಿಂಗಳ ಹಿಂದಷ್ಟೆ ವರುಣಾ ಕ್ಷೇತ್ರದಲ್ಲಿ ಮತ್ತೊಂದು ಕಾರ್ಯಕ್ರಮ ಮಾಡಿದ್ದು 20 ಲಕ್ಷ ಖರ್ಚು ಮಾಡಿ ವರುಣಾದಲ್ಲಿ ಕಾರ್ಯಕ್ರಮ ಮಾಡಿದ್ದೆ ಎಂದು ಆಕ್ರೋಶ ಹೊರಹಾಕಿದರು. 

ಚಾಮರಾಜನಗರ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ

ನಿಮ್ಮ ಊರಿಗೆ ಬಂದು ಅಲ್ಲೆ ನಿಂತು ನಿನಗೆ ಟಿಕೆಟ್ ಘೋಷಣೆ ಮಾಡ್ತೀನಿ ಅಂದಿದ್ರು ಸಿದ್ದರಾಮಯ್ಯ, ಆಮೇಲೆ ಟಿಕೆಟ್ ಕೇಳಿದ್ದಕ್ಕೆ ಹೇ... ಸುಮ್ನೆ ನಡಿಯಪ್ಪಾ ನೀನು ಅಂದ್ರು..ಸಿದ್ದು ಮಾತನ್ನ ನೆನೆದು ಸಭೆಯಲ್ಲಿ ಕಣ್ಣೀರಿಟ್ಟರು. ರಾಜಕೀಯ ಪಕ್ಷಗಳು ನನ್ನನ್ನು ಕಡೆಗಣಿಸಿದ್ದರೂ, ನನ್ನ ಕ್ಷೇತ್ರದ ಜನತೆ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು. ಅದೇ ವೇಳೆ ಇದೇ ತಿಂಗಳು 20 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!