ರಮೇಶ್ ಜಾರಕಿಹೊಳಿಗೆ ಚೂರಿ ಹಾಕಿದ್ದು ಅವರ ಅಳಿಯಂದಿರು

By Kannadaprabha NewsFirst Published Nov 17, 2019, 10:34 AM IST
Highlights

 ಲಖನ್‌ ಬೆನ್ನಿಗೆ ಚೂರಿ ಹಾಕಿದ ಎಂಬ ಸಹೋದರ ರಮೇಶ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬರೀ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದವರು ಯಾರು ಎಂದು ಬೆನ್ನು ಮುಟ್ಟಿಕೊಂಡು ನೋಡಲಿ ಎಂದು ದೂರಿದರು.

ಗೋಕಾಕ [ನ.17]:  ರಮೇಶ ಜಾರಕಿಹೊಳಿಗೆ ಅಳಿಯಂದಿರು ಚೂರಿ ಹಾಕಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಸಹೋದರನಿಗೆ ತಿರುಗೇಟು ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಖನ್‌ ಬೆನ್ನಿಗೆ ಚೂರಿ ಹಾಕಿದ ಎಂಬ ಸಹೋದರ ರಮೇಶ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬರೀ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದವರು ಯಾರು ಎಂದು ಬೆನ್ನು ಮುಟ್ಟಿಕೊಂಡು ನೋಡಲಿ ಎಂದು ದೂರಿದರು.

ಸಚಿವ ಸ್ಥಾನ ಕೊಟ್ಟಿದ್ದರೂ ಕಾಂಗ್ರೆಸ್‌ ಬಿಟ್ಟು ರಮೇಶ ಬೆನ್ನಿಗೆ ಚೂರಿ ಹಾಕಿದ್ದಾರೆ. ಪಕ್ಷದ ವರಿಷ್ಠರ ಮನವಿಗೂ ಕ್ಯಾರೆ ಎನ್ನದೇ ಬಿಜೆಪಿ ಸೇರಿಕೊಂಡು ಎಲ್ಲರಿಗೂ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ನಾವು ಯಾವುದೇ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿಲ್ಲ. ರೋಬೋಟ್‌ ಚಿತ್ರದಂತೆ ನಾವು ರಮೇಶ ಜಾರಕಿಹೊಳಿಯನ್ನು ರೆಡಿ ಮಾಡಿದ್ವಿ. ಈಗ ಅವರ ಅಳಿಯಂದಿರು ಚಿಪ್‌ ಚೇಂಜ್‌ ಮಾಡಿದ್ದಾರೆ. ರಮೇಶ ಅಳಿಯಂದಿರು ಭ್ರಷ್ಟಾಚಾರ ಮಾಡಿದನ್ನು ನಾವು ಕಣ್ಣುಮುಚ್ಚಿ ನೋಡಬೇಕಾ? ಜನರಿಗಾಗಿ ನಾನು ಹೋರಾಟ ಮಾಡಬೇಕು ಎಂದರು.

ರಮೇಶ್ ಜಾರಕಿಹೊಳಿ ಜತೆ ಒಳ ಮೈತ್ರಿ, ಲಖನ್ ಬದಲಿಗೆ ಹೊಸ ಹೆಸ್ರು ತೇಲಿ ಬಿಟ್ಟ ಡಿಕೆಶಿ, ಲಕ್ಷ್ಮೀ...

ನ.18ರಂದು 10 ಗಂಟೆಗೆ ನಾನು ನಾಮಪತ್ರ ಸಲ್ಲಿಸುವೆ. ನಾನು ರಮೇಶ ಜಾರಕಿಹೊಳಿಯಂತೆ ಲಕ್ಷ ಜನರನ್ನು ಸೇರಿಸುವುದಿಲ್ಲ. ನಿಮಗೆ ನಮ್ಮ ಶಕ್ತಿ ಗೊತ್ತಾಗಲಿದೆ. ಗೋಕಾಕ ರಾಜಕಾರಣ ಯಾರಿಗೂ ಗೊತ್ತಾಗುವುದಿಲ್ಲ. ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಗೊತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಶಾಸಕರ ಅಳಿಯಂದಿರ ಭ್ರಷ್ಟಾಚಾರ ಮಿತಿ ಮೀರಿದೆ. ಅದಕ್ಕಾಗಿ ನಾನು ರಮೇಶ ಜಾರಕಿಹೊಳಿಯಿಂದ ದೂರ ಬಂದಿದ್ದೇನೆ. ಕಾಂಗ್ರೆಸ್ಸಿನ ನಮ್ಮ ನಾಯಕರು ನನಗೆ ಟಿಕೆಟ್‌ ಅಂತಾ ಘೋಷಣೆ ಮಾಡಿದ್ದಾರೆ. ನನ್ನ ಹೋರಾಟ ರಮೇಶ ಜಾರಕಿಹೊಳಿ ಅಳಿಯಂದಿರ ವಿರುದ್ಧ. ನಾನು ಅವರ ವಿರುದ್ಧ ಚುನಾವಣೆ ಮಾಡುತ್ತೇನೆ. ನಮ್ಮ ತಂತ್ರಗಾರಿಕೆ ಲೀಕ್‌ ಆಗದಂತೆ ಎಚ್ಚರಿಕೆ ವಹಿಸಿದ್ದೇನೆ. ಪ್ರಶ್ನೆ ಪತ್ರಿಕೆ ಲೀಕ್‌ ಮಾಡುವುದಿಲ್ಲ. ನಮ್ಮ ಪ್ರಚಾರವೇ ಬೇರೆ. ನಮ್ಮ ಸ್ಟೈಲೇ ಬೇರೆ ಎಂದರು.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.

click me!