ಈ ಬಾರಿ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ನೂರಾರು ಕಾರ್ಯಕರ್ತರು ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಉಸ್ತುವಾರಿಗಳೆದರು ಪ್ರತಿಭಟನೆ ನಡೆಸಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ. ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.10) : ಈ ಬಾರಿ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ನೂರಾರು ಕಾರ್ಯಕರ್ತರು ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಉಸ್ತುವಾರಿಗಳೆದರು ಪ್ರತಿಭಟನೆ ನಡೆಸಿದರು.
undefined
ಉಸ್ತುವಾರಿಗಳಾದ ಭಾನು ಪ್ರಕಾಶ್ ಹಾಗೂ ಆರಗ ಜ್ಞಾನೇಂದ್ರ ಅವರು ಪಕ್ಷದ ಕಚೇರಿ ಪಾಂಚಜನ್ಯದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಸುತ್ತಿದ್ದ ವೇಳೆ ಅಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಈ ಬಾರಿ ಶೋಭಾ ಕರಂದ್ಲಾಜೆ(Shobha karandlaje) ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.ಈ ವೇಳೆಯಲ್ಲಿ ತೀವ್ರವಾದ ಘೋಷಣೆ, ಪ್ರತಿಭಟನೆ ಹಿನ್ನೆಲೆ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ರದ್ದು ಮಾಡಿ ಉಸ್ತುವಾರಿ ತೆರಳಿದರು.
Shobha Karandlaje: ನಮ್ಮ ಪಕ್ಷದ ಕೆಲವರಿಂದಲೇ ಟಿಕೆಟ್ ತಪ್ಪಿಸಲು ಷಡ್ಯಂತ್ರ: ಶೋಭಾ ಕರಂದ್ಲಾಜೆ
ಶೋಭಾ ವಿರುದ್ಧ ಗೋಬ್ಯಾಕ್ ಘೋಷಣೆ :
ಜಿಲ್ಲಾ ಬಿಜೆಪಿಯ ಮಹಿಳಾ ಮುಖಂಡರು ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಕಾರ್ಯಕರ್ತರು ಶೋಭಾ ವಿರುದ್ಧ ಗೋಬ್ಯಾಕ್ ಘೋಷಣೆಗಳನ್ನು ಕೂಗಿದ್ದಲ್ಲದೆ, ಶೋಭಾ ಅವರಿಗೆ ಟಿಕೆಟ್ ನೀಡಿದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಚುನಾವಣೆ ಪ್ರಚಾರ ಮಾಡಲು ಆಗುವುದಿಲ್ಲ ಎಂದರು. ಕಾಂಗ್ರೆಸ್ ಶಾಸಕರ ಜೊತೆ ನಗುತ್ತಾ ನನಗೆ ಟಿಕೆಟ್ ಘೋಷಣೆ ಆಗುತ್ತೆ ಎನ್ನುತ್ತಾರೆ. ಅಂತವರ ಪರವಾಗಿ ನಾವು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕಾ, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಶೋಭಾ ಕರಂದ್ಲಾಜೆ ಕಾರಣ, ಯಡಿಯೂರಪ್ಪ ಅವರು ನಗರಕ್ಕೆ ಬಂದು ಶೋಭಾ ಕಳೆದ ಬಾರಿಗಿಂತ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಹೇಗೆ ಹೇಳಿದರು. ಶೋಭಾ ಅವರ ಪರವಾಗಿ ಅವರು ಇಲ್ಲಿಗೇಕೆ ಬರಬೇಕು ಎಂದು ಪ್ರಶ್ನಿಸಿದರು.
ಅವರು ಕಾಂಗ್ರೆಸ್ ಎಂಪಿ ಆಗಿದ್ದಾರೆ. ಗೆದ್ದ 10 ವರ್ಷದಲ್ಲಿ ಒಮ್ಮೆಯೂ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬರಲಿಲ್ಲ. ಸದಾನಂದಗೌಡರು, ಶೋಭಾ ಕರಂದ್ಲಾಜೆ ಅವರಾರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದವರೇ ಅಲ್ಲ. ಎಲ್ಲಾ ಸಂದರ್ಭದಲ್ಲೂ ಹೊರಗಿನವರನ್ನೇ ಕರೆತಂದರೆ ಎಂತಹ ದುರಂತ ಇದು. ಸಾಮಾನ್ಯ ಕಾರ್ಯಕರ್ತ ಯಾರಿಗಾದರೂ ಸರಿ ನಮ್ಮವರಿಗೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದರು.
ಈ ವೇಳೆ ವೀಕ್ಷಕರಾಗಿ ಆಗಮಿಸಿದ್ದ ಆರಗ ಜ್ಞಾನೇಂದ್ರ ಮಾತನಾಡಿ, ಕಾರ್ಯಕರ್ತರ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾನಾಗಲಿ, ಭಾನುಪ್ರಕಾಶ್ ಅವರಾಗಲಿ ತೀರ್ಮಾನ ತೆಗೆದುಕೊಳ್ಳುವವರಲ್ಲ. ಕಾರ್ಯಕರ್ತರ ಧ್ವನಿ, ಭಾವನೆಗಳನ್ನು ಯಾರಿಗೆ ತಲುಪಿಸಬೇಕು ಅವರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇವೆ. ನಾಳೆ ಯಾರೇ ಅಭ್ಯರ್ಥಿ ಆದರೂ ಹೆಗಲು ಕೊಟ್ಟು ಕೆಲಸ ಮಾರುವವರು ನೀವು. ನಿಮ್ಮ ಮಾತಿಗೆ ನಮ್ಮೆಲ್ಲರ ಗೌರವವಿದೆ. ಸಹಜವಾಗಿ ಹಲವು ಘಟನೆಗಳು ನಿಮಗೆ ಸಿಟ್ಟು ತರಿಸಿವೆ. ನೀವು ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದವರು. ಎಲ್ಲಿ ತಪ್ಪಾಗಿದೆ ಅದನ್ನು ತಿದ್ದಿಕೊಳ್ಳಬೇಕು ಎನ್ನುವುದನ್ನು ನಾವು ಹೇಳುತ್ತೇವೆ. ಚುನಾವಣೆ ಸಂದರ್ಭದಲ್ಲಿ ಇದು ಹಾದಿ, ಬೀದಿ ಚರ್ಚೆ ಆಗುವುದು ಬೇಡ. ನಾವು ಮೋದಿ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.
ನಮ್ಮ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು ನಾವೆಲ್ಲ ಒಂದೇ ಧ್ವನಿಯಿಂದ ಕೆಲಸ ಮಾಡಬೇಕು. ನಮ್ಮ ಒಡಕಿನ ಲಾಭ ಅನ್ಯರಿಗೆ ಆಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಲಹೆ ಮಾಡಿದರು.
ಲೋಕಸಭಾ ಚುನಾವಣೆ: ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರಿಂದಲೇ ಬೈಕ್ ರಾಲಿ!
ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದೆಂದು ನಡೆದ ಪ್ರತಿಪ್ರಭಟನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಗುರಿ ಮೋದಿ ಮತ್ತೊಮ್ಮೆ ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಯಾರೇ ಆದರೂ ತಮ್ಮ ಭಾವನೆಯನ್ನು ವ್ಯಕ್ತ ಪಡಿಸಲು ಮಾರ್ಗಗಳು ಬೇರೆ ಬೇರೆ ಇವೆ ಎಂದರು. ರಾಷ್ಟ್ರ ಹಿತದ ಹಿನ್ನೆಲೆಯಲ್ಲೇ ನಾವು ಉಳಿದೆಲ್ಲಾ ವಿಷಯಳನ್ನು ಮರೆತು ಒಂದೇ ಧ್ವನಿಯಾಗಿ ಕೆಲಸ ಮಾಡಬೇಕಿದೆ. ಇಡೀ ದೇಶದಲ್ಲಿ 400 ಸ್ಥಾನಗಳ ಗುರಿ ಮುಟ್ಟಬೇಕು ಎಂದರೆ ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕಿದೆ. ನನ್ನ ಗ್ರಹಚಾರ ಸರಿಯಿಲ್ಲದ ಕಾರಣಕ್ಕೆ ನಾನು ಸೋತಿರಬಹುದು. ನನ್ನದೇ ಏನೋ ತಪ್ಪಿರಬಹುದು ಎಂಬುದನ್ನೂ ಹೇಳಿದ್ದೇನೆ. ಇಷ್ಟೊಂದು ಕೆಲಸ ಮಾಡಿದ ಮೇಲೂ ಜನ ನನ್ನ ಕೈಬಿಡುವುದಿಲ್ಲ ಎನ್ನುವ ಅತೀ ವಿಶ್ವಾಸ ಇತ್ತು. ಅದೂ ಸಹ ಕೆಲವೊಮ್ಮೆ ಈ ರೀತಿ ಸೋಲಿಗೆ ಕೆಲವೊಮ್ಮೆ ಕಾರಣವಾಗುತ್ತದೆ. ಅದಕ್ಕೆ ಇನ್ನಿಬ್ಬರ ಕಡೆ ಬೆಟ್ಟು ಮಾಡಿ ತೋರಿಸುವುದಿಲ್ಲ. ಯಾರಾದರೂ ಪಕ್ಷ ದ್ರೋಹದ ಕೆಲಸ ಮಾಡಿದ್ದರೆ ಕರ್ಮ ಅವರನ್ನು ಬೆನ್ನು ಬಿಡದೆ ಕಾಡುತ್ತದೆ. ಅವರು ಅದನ್ನು ಅನುಭವಿಸಬೇಕು ಎಂದರು.