ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ನಂ.1 ಸಂಸದ ಅಂದ್ರೆ ಪ್ರತಾಪ ಸಿಂಹ ಪ್ರಮೋದ್ ಮುತಾಲಿಕ್

By Ravi Janekal  |  First Published Mar 10, 2024, 8:53 PM IST

ಮೈಸೂರು ಕೊಡಗು ಕ್ಷೇತ್ರದಿಂದ ಸಂಸದ ಪ್ರತಾಪ ಸಿಂಹರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಚರ್ಚೆ ಆಗ್ತಿದೆ. ಹಿಂದುತ್ವ, ಅಭಿವೃದ್ಧಿ ವಿಚಾರದಲ್ಲಿ ಸಮಾನವಾಗಿ ತೆಗೆದುಕೊಂಡು ಹೋಗ್ತಿರುವ ಕರ್ನಾಟಕದಲ್ಲಿರುವ ಏಕೈಕ ಸಂಸದ ಅಂದ್ರೆ ಪ್ರತಾಪ್ ಸಿಂಹ. ಇಂಥವರಿಗೆ ಟಿಕೆಟ್ ಕಣ್ಮುಚ್ಚಿ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.


ಬಾಗಲಕೋಟೆ (ಮಾ.10): ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಿಂದ ಸಂಸದ ಪ್ರತಾಪ ಸಿಂಹರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಚರ್ಚೆ ಆಗ್ತಿದೆ. ಹಿಂದುತ್ವ, ಅಭಿವೃದ್ಧಿ ವಿಚಾರದಲ್ಲಿ ಸಮಾನವಾಗಿ ತೆಗೆದುಕೊಂಡು ಹೋಗ್ತಿರುವ ಕರ್ನಾಟಕದಲ್ಲಿರುವ ಏಕೈಕ ಸಂಸದ ಅಂದ್ರೆ ಪ್ರತಾಪ್ ಸಿಂಹ. ಇಂಥವರಿಗೆ ಟಿಕೆಟ್ ಕಣ್ಮುಚ್ಚಿ ಕೊಡಬೇಕು ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂಸದ ಪ್ರತಾಪ್ ಸಿಂಹರ ಪರ ಬ್ಯಾಟಿಂಗ್ ಮಾಡಿದರು.

ಇಂದು ಬಾಗಲಕೋಟೆ ಕಲಾದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಇವತ್ತಿನ ದುರ್ಬಲ, ನಿಷ್ಕ್ರಿಯ ಎಂಪಿಗಳ ದೊಡ್ಡ ಪಟ್ಟಿಯಿದೆ ಅಂಥವರನ್ನು ಸಂಸದ ಪ್ರತಾಪ ಸಿಂಹರಿಗೆ ಹೋಲಿಕೆ ಮಾಡೋಕೆ ಆಗೊಲ್ಲ. ಅಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬೇರೆಯವರ ರೀತಿ ಬಾಲಬಡುಕತನ, ಲಾಬಿ, ಸಲಾಮ್ ಹೊಡೆಯುವುದು ಸಂಸದ ಪ್ರತಾಪ ಸಿಂಹ ಮಾಡಿಲ್ಲ. ಅಭಿವೃದ್ಧಿ ವಿಚಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ನಂಬರ್ ಒನ್ ಸಂಸದ. ಇಂಥವರಿಗೆ ಟಿಕೆಟ್ ಕೊಡದಿದ್ರೆ ನಾಗರಿಕರು, ಯುವಕರು ಸಿಡಿದೇಳುತ್ತಾರೆ ಎಂದರು.

Tap to resize

Latest Videos

ನಿಪ್ಪಾಣಿ ಶ್ರೀರಾಮ ಮಂದಿರಕ್ಕೆ ಬಾಂಬ್ ಬೆದರಿಕೆ; ಇಂಥ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಹೆದರೊಲ್ಲ: ಪ್ರಮೋದ್ ಮುತಾಲಿಕ್ ಕಿಡಿ 

ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದದಿಂದ ಸಿಂಹ ಟಿಕೆಟ್ ತಪ್ಪಿಸಲಾಗ್ತಿದಿಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಕೈತಪ್ಪಲು ಷಡ್ಯಂತ್ರ ನಡೆದಿದೆ ಎಂಬುದು ಕೇಳಿಬಂದಿದೆ. ಆದರೆ ಇದರ ಹಿಂದೆ ಯಾರು ಕೆಲಸ ಮಾಡ್ತಿದ್ದಾರೆ. ಯಾರು ಕಾಲು ಎಳೆಯುತ್ತಿದ್ದರೋ ನನಗೆ ಗೊತ್ತಿಲ್ಲ. ಬಿಜೆಪಿಗೆ ಇದು ಒಳ್ಳೆಯ ಲಕ್ಷಣ ಅಲ್ಲ. ಟೋಟಲ್ ಕರ್ನಾಟಕದ ಚುನಾವಣೆ ಮೇಲೆ ಇದು ಹೊಡೆತ ಬೀಳುತ್ತೆ. ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೆ ಶೋಭೆ ತರುವಂತದಲ್ಲ. ತಲವಾರ ಹಿಡಿದ ಮುಸ್ಲಿಂರಿಗೆ ಎಚ್ಚರಿಕೆ ಕೊಟ್ಟ ಏಕೈಕ ವ್ಯಕ್ತಿ ಸಿಂಹ. ಹನುಮ ಜಯಂತಿಯಲ್ಲಿ ಪಾದಯಾತ್ರೆ ಮಾಡಿದ ಏಕೈಕ ಎಂಪಿ ಸಿಂಹ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಸಿಂಹ ಪರಿಶ್ರಮ ಇದೆ. ಅಂಥವರಿಗೆ ಟಿಕೆಟ್ ಕೊಡದೇ ಇನ್ಯಾರಿಗೋ ಸಹಾಯ ಮಾಡೋ ಕೆಲಸವನ್ನು ನಾನು ಕ್ಷಮಿಸೊಲ್ಲ ಎಂದರು.

ಪ್ರತಾಪ್ ಕ್ಷೇತ್ರಕ್ಕೆ ಯದುವೀರ್ ಹೆಸರು: ಹೊಸ ಮುಖಕ್ಕೆ ಮಣೆ ಹಾಕುವುದು ಸಾಮಾನ್ಯ ಎಂದ ಅಶ್ವತ್ಥನಾರಾಯಣ

ಪ್ರತಾಪ್ ಸಿಂಹರಿಗೆ ಟಿಕೆಟ್ ಕೈತಪ್ಪಿದ್ರೆ ಹೋರಾಟ: ಮುತಾಲಿಕ್ ಎಚ್ಚರಿಕೆ:

ಪ್ರತಾಪ್‌ ಸಿಂಹರಿಗೆ ಟಿಕೆಟ್ ತಪ್ಪಿದ್ರೆ ಯಾವ ರೀತಿ ಪರಿಣಾಮ ಬೀಳಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ನಾವು ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಪ್ರಜ್ಞಾ ಸಿಂಗ್ ಅವರಿಗೂ ಟಿಕೆಟ್ ಕೊಡದೇ ಇರೋದು ತಪ್ಪು. ಗೋಡ್ಸೆ ಒಬ್ಬ ದೇಶಭಕ್ತ ಎಂದಿದ್ದು ದೊಡ್ಡ ಅಪರಾಧವೇ? ಹೌದು ಗೋಡ್ಸೆ ಒಬ್ಬ ದೇಶಭಕ್ತ. ಗುಂಡು ಹಾರಿಸಿರೋದು ತಪ್ಪಿರಬಹುದು, ಆದ್ರೆ ದೇಶದ್ರೋಹ ಅನ್ನೋದು ತಪ್ಪು. ಸುಫಾರಿ ಕಿಲ್ಲರ್ ಅಲ್ಲ, ಆಸ್ತಿಗಾಗಿ ಕೊಲೆ ಮಾಡಲಿಲ್ಲ ಆತ. ದೇಶಕ್ಕಾಗಿ ಕೊಲೆ ಮಾಡಿದ. ದೇಶದ ಹಿತಕ್ಕಾಗಿ ಕೊಲೆ ಮಾಡಿದ. ಪ್ರಜ್ಞಾ ಸಿಂಗ್ ಗೆ ಟಿಕೆಟ್ ತಪ್ಪಿಸಿದ್ದು ನೋಡಿದ್ರೆ ಬಿಜೆಪಿ ಎಲ್ಲೋ ಒಂದು ಕಡೆ ವಿಕೃತಿ ಕಡೆ ಹೊರಟಿದೆ ಅಂತನಿಸುತ್ತೆ. ಇದು ಸರಿಯಲ್ಲ, ಈ ರೀತಿ ಹೊಂದಾಣಿಕೆ ರಾಜಕಾರಣ ಒಳ್ಳೆಯದಲ್ಲ ಆದ್ರೂ ಕೇಂದ್ರ ಸರ್ಕಾರದ ನಾಯಕತ್ವದಲ್ಲಿ ವಿಶ್ವಾಸವಿದೆ ಎಂದರು.

click me!