ಬಡಿದಾಡುವ ಬಿಜೆಪಿಗರಿಗೆ ಆರೆಸ್ಸೆಸ್‌ ಲಾಠಿ ಕೊಡಿ: ಕಾಂಗ್ರೆಸ್‌ ಲೇವಡಿ

By Kannadaprabha NewsFirst Published Jun 30, 2023, 3:20 AM IST
Highlights

‘ಬಿಜೆಪಿಯಲ್ಲಿನ ಬಡಿದಾಟ ನೋಡಿದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನವರ ಲಾಠಿ ಉಪಯೋಗಕ್ಕೆ ಬರಲಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಲಾಠಿ ಕೊಟ್ಟರೆ ಬಡಿದಾಡಿಕೊಂಡು ಬದುಕುಳಿದವರಿಗೆ ಬಿಜೆಪಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು’ ಎಂದು ರಾಜ್ಯ ಕಾಂಗ್ರೆಸ್‌ ವ್ಯಂಗ್ಯವಾಡಿದೆ. 

ಬೆಂಗಳೂರು (ಜೂ.30): ‘ಬಿಜೆಪಿಯಲ್ಲಿನ ಬಡಿದಾಟ ನೋಡಿದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್‌ನವರ ಲಾಠಿ ಉಪಯೋಗಕ್ಕೆ ಬರಲಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಲಾಠಿ ಕೊಟ್ಟರೆ ಬಡಿದಾಡಿಕೊಂಡು ಬದುಕುಳಿದವರಿಗೆ ಬಿಜೆಪಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು’ ಎಂದು ರಾಜ್ಯ ಕಾಂಗ್ರೆಸ್‌ ವ್ಯಂಗ್ಯವಾಡಿದೆ. ಇದು ಆರ್‌ಎಸ್‌ಎಸ್‌ ನಾಯಕರಿಗೆ ಬಿಜೆಪಿಯಲ್ಲಿನ ಗೊಂದಲ ಬಗೆಹರಿಸಲು ಕಾಂಗ್ರೆಸ್‌ ಕಡೆಯಿಂದ ನೀಡುತ್ತಿರುವ ಉಚಿತ ಐಡಿಯಾ ಎಂದೂ ಲೇವಡಿ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ‘ರಾಜ್ಯಾಧ್ಯಕ್ಷರಿಂದಲೇ ಬಿಜೆಪಿಗೆ ಸೋಲಾಗಿರುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಹೀಗಿದ್ದರೂ ನಳಿನ್‌ ಕುಮಾರ್‌ ಕಟೀಲ್‌ ಅವರು ಸುಮ್ಮನಿರುವುದೇಕೆ? ಸೋಲಿನಲ್ಲಿ ನನ್ನದೇನೂ ತಪ್ಪಿಲ್ಲ, ಶ್ಯಾಡೋ ಅಧ್ಯಕ್ಷರಾದ ಪ್ರಹ್ಲಾದ್‌ ಜೋಶಿ, ಬಿ.ಎಲ್‌.ಸಂತೋಷ್‌ ಅವರೇ ಸೋಲಿಗೆ ಹೊಣೆ ಎಂದು ಘೋಷಿಸಿಬಿಡಲಿ. ಸೋಲಿಗೆ ಸರದಾರರಾದ ಜೋಶಿ, ಸಂತೋಷ್‌ ಅವರುಗಳ ಹೆಸರೆತ್ತಲು ಬಿಜೆಪಿಗರು ಭಯಪಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದೆ.

Latest Videos

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಗ್ರಾ.ಪಂ. ಗೆಲ್ಲಲಾಗದವರು ಯಾರು?: ಒಂದು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದವರು ಇಡೀ ಬಿಜೆಪಿಯನ್ನು ಹಿಡಿತಕ್ಕೆ ಪಡೆದು ಕುಣಿಸುತ್ತಿದ್ದಾರೆ ಎಂದು ಸ್ವತಃ ರೇಣುಕಾಚಾರ್ಯ ಅವರೇ ಹೇಳಿದ್ದಾರೆ. ರೇಣುಕಾಚಾರ್ಯ ಅವರು ಹೇಳಿದ ಗ್ರಾ.ಪಂ. ಚುನಾವಣೆಗೂ ನಿಲ್ಲಲಾಗದ ಆ ನಾಯಕ ಯಾರು? ದಮ್ಮು, ತಾಕತ್ತಿದ್ದರೆ ರಾಜ್ಯ ಬಿಜೆಪಿಯು ಆ ದೊಣ್ಣೆ ನಾಯಕನ ಹೆಸರು ಹೇಳಲಿ ಎಂದು ಕುಟುಕಿದೆ.

ಆತ್ಮಹತ್ಯೆ ವಿಮರ್ಶೆಯಾ?: ಈ ಎಲ್ಲಾ ಬೆಳವಣಿಗೆಗಳಿಂದ ಬಿಜೆಪಿ ಈಗ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆಯೋ ಆತ್ಮಹತ್ಯೆ ವಿಮರ್ಶೆ ಮಾಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ. ಅಧ್ಯಕ್ಷರಿಂದ ಸೋಲಾಯಿತು, ವಲಸಿಗರಿಂದ ಸೋಲಾಯಿತು, ಹೊಂದಾಣಿಕೆಯಿಂದ ಸೋಲಾಯಿತು, ಬಡವರ ಅಕ್ಕಿ ಕಿತ್ತುಕೊಂಡು ಸೋಲಾಯಿತು, ಮೋದಿ ಬೀದಿ ಸುತ್ತಿದ್ದಕ್ಕೆ ಸೋಲಾಯಿತು, ಗುಜರಾತ್‌ ಮಾದರಿಯಿಂದ ಸೋಲಾಯಿತು, ಪಕ್ಷದ್ರೋಹಿಗಳಿಂದ ಸೋಲಾಯಿತು ಹೀಗೆ ಇಷ್ಟೆಲ್ಲಾ ಸೋಲಿನ ಆತ್ಮಾವಲೋಕನದ ಹೇಳಿಕೆ ನೀಡಿದ್ದಾರೆ. ಆದರೆ ಅಂತಿಮ ಫಲಿತಾಂಶ ಬರಲೇ ಇಲ್ಲ ಎಂದು ಕುಹಕವಾಡಿದೆ.

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಬೊಮ್ಮಾಯಿ ತಲೆ ತಗ್ಗಿಸಬೇಕಿತ್ತು: ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸುವ ಮೂಲಕ ಬಡವರ ಅನ್ನ ಕಿತ್ತುಕೊಂಡಿದ್ದಕ್ಕೆ ಸೋಲಾಗಿದೆ ಎಂದು ರೇಣುಕಾಚಾರ್ಯ ಪ್ರಾಮಾಣಿಕ ವಿಮರ್ಶೆ ಮಾಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ಮಾತುಗಳನ್ನು ಕೇಳಿ ತಾವು ತಲೆತಗ್ಗಿಸಿ ನಿಲ್ಲಬೇಕಿತ್ತು. ನಿಮಗೆ ಪಾಪಪ್ರಜ್ಞೆ ಕಾಡಬೇಕಿತ್ತು. ಅದು ಬಿಟ್ಟು ನಮ್ಮ ಅನ್ನಭಾಗ್ಯದ ಬಗ್ಗೆ ಕುಹುಕದ ಮಾತಾಡುತ್ತಿದ್ದೀರಿ ಎಂದರೆ ನೀವು ನಿರ್ಲಜ್ಜತನದ ಪರಮಾವಧಿಗೆ ತಲುಪಿದ್ದೀರಿ ಎಂದೇ ಅರ್ಥ ಎಂದು ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿದೆ.

click me!