
ನವದೆಹಲಿ (ಮಾ. 11): ಉತ್ತರ ಪ್ರದೇಶದಲ್ಲಿ (Uttar Pradesh) ಬಿಜೆಪಿಯ (BJP) ದಾಖಲೆಯ ಗೆಲುವಿನ ಬಳಿಕ, ಭ್ರಮನಿರಸನಗೊಂಡಿರುವ ಶಿವಸೇನೆ ನಾಯಕ ಮತ್ತು ಸಂಸದ ಸಂಜಯ್ ರಾವತ್ ( Shiv Sena leader MP Sanjay Raut ) ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ (BSP Leader Mayawati) ಮತ್ತು ಆಲ್ ಇಂಡಿಯಾ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM Chief Asaduddin Owaisi) ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯ ಗೆಲುವಿನಲ್ಲಿ ಅವರ ಕೊಡುಗೆಗಾಗಿ ಪದ್ಮವಿಭೂಷಣ ಅಥವಾ ಭಾರತ ರತ್ನವನ್ನು ನೀಡಬೇಕು ಎಂದು ಟೀಕೆ ಮಾಡಿದ್ದಾರೆ.
"ಬಿಜೆಪಿ ಅದ್ಭುತ ವಿಜಯವನ್ನು ಸಾಧಿಸಿದೆ. ಯುಪಿ ಅವರ ರಾಜ್ಯವಾಗಿತ್ತು, ಇನ್ನೂ, ಅಖಿಲೇಶ್ ಯಾದವ್ ( Akhilesh Yadav) ಅವರ ಸ್ಥಾನಗಳು 42 ರಿಂದ 125 ಕ್ಕೆ 3 ಪಟ್ಟು ಹೆಚ್ಚಾಗಿದೆ. ಮಾಯಾವತಿ ಮತ್ತು ಓವೈಸಿ ಬಿಜೆಪಿಯ ಗೆಲುವಿಗೆ ಕೊಡುಗೆ ನೀಡಿದ್ದಾರೆ, ಆದ್ದರಿಂದ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು," ಎಂದು ಸಂಜಯ್ ರಾವತ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ, ಉತ್ತರಾಖಂಡದಲ್ಲಿ ಅವರ ಮುಖ್ಯಮಂತ್ರಿ ಸೋಲು ಕಂಡಿದ್ದಾರೆ. ಗೋವಾದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳೂ ಸೋಲು ಕಂಡಿದ್ದಾರೆ ಮತ್ತು ಪಂಜಾಬ್‌ನಲ್ಲಿ ಪಕ್ಷವನ್ನು "ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ" ಎಂದು ಸಂಜಯ್ ರಾವತ್ ವಿಮರ್ಶೆ ಮಾಡಿದ್ದಾರೆ.
"ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಎಲ್ಲರೂ ಪಂಜಾಬ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಹಾಗಿದ್ದರೂ ಪಂಜಾಬ್ ನಲ್ಲಿ ಪಕ್ಷ ಏಕೆ ಸೋಲು ಕಂಡಿದೆ? ಯುಪಿ, ಉತ್ತರಾಖಂಡ, ಗೋವಾ ಈಗಾಗಲೇ ಬಿಜೆಪಿ ಪಕ್ಷದ್ದಾಗಿದೆ. ಕಾಂಗ್ರೆಸ್ ಹಾಗೂ ಶಿವಸೇನೆ ಯುಪಿಯಲ್ಲಿ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಪಂಜಾಬ್ ನಲ್ಲಿ ಬಿಜೆಪಿ ಪಕ್ಷ ಕಳೆದುಕೊಂಡಿದೆ' ಎಂದು ಹೇಳಿದ್ದಾರೆ. ಬಿಎಸ್‌ಪಿ ಮತ್ತು ಎಐಎಂಐಎಂ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿಯ "ಬಿ" ತಂಡಗಳು ಎಂದು ವಿರೋಧ ಪಕ್ಷದ ಅನೇಕರು ಚುನಾವಣೆಯ ವೇಳೆ ಆರೋಪ ಮಾಡಿದ್ದರೂ, ಇಂಥ ಆರೋಪಗಳನ್ನು ಎರಡೂ ಪಕ್ಷಗಳು ಪದೇ ಪದೇ ನಿರಾಕರಿಸಿದ್ದವು.
Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!
ಬಿಎಸ್‌ಪಿ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡ ಹೀನಾಯ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಬಿಎಸ್ ಪಿ ಅಧಿನಾಯಕಿ ಮಾಯಾವತಿ ಬಿಎಸ್‌ಪಿ ಬಿಜೆಪಿಯ "ಬಿ-ಟೀಮ್" ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಮಾಧ್ಯಮ ವೇದಿಕೆಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ತಮ್ಮ ಪಕ್ಷವು ಮಾತ್ರ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಬಲ್ಲದು ಎಂದು ವಿಶ್ವಾಸವ್ಯಕ್ತಪಡಿಸಿದರು. ಸೋಲಿನ ಬಳಿಕ ಮಾತಾಡಿದ ಓವೈಸಿ ಜನರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದರು ಮತ್ತು ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು "ವೋಟ್ ಬ್ಯಾಂಕ್‌ಗಳಾಗಿ ಬಳಸಿಕೊಳ್ಳಲಾಗಿದೆ" ಎಂದು ಆರೋಪ ಮಾಡಿದರು.
ಮೋದಿ- ಯೋಗಿ ‘ಡಬಲ್ ಎಂಜಿನ್’ ಎದುರು ಅಖಿಲೇಶ್ ‘ಸೈಕಲ್’ ಪಂಕ್ಚರ್ ಆಗಿದ್ಹೇಗೆ?
ರಾಜಕೀಯವಾಗಿ ಮಹತ್ವದ ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 273 ಸ್ಥಾನಗಳಲ್ಲಿ ಜಯ ಸಾಧಿಸಿವೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಸ್ವಂತ ಬಲದಿಂದ 111 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ,ಅದರ ನೇತೃತ್ವದ ಮೈತ್ರಿಕೂಟವು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದು ಸಮಾಜವಾದಿ ಪಕ್ಷದ ಅತ್ಯುತ್ತಮ ಸಾಧನೆ ಎನಿಸಿದೆ. ಮಾಯಾವತಿಯವರ ಪಕ್ಷವು ಶೇಕಡಾ 12.8 ರಷ್ಟು ಮತಗಳನ್ನು ಪಡೆದುಕೊಂಡಿದ್ದಲ್ಲದೆ, ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. AIMIM ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ ಮತ್ತು ಅದರ ಮತಗಳ ಪಾಲು ಶೇಕಡಾ 0.49 ರಷ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.