ಮಾಜಿ ಸಚಿವ ಮೇಟಿಗೆ ತಪ್ಪಿದರೆ ನನಗೆ ಕಾಂಗ್ರೆಸ್ ಟಿಕೆಟ್ ನೀಡಿ, ಕೊನೆ ಅವಕಾಶ ಕೊಡಿ: ಡಾ.ದೇವರಾಜ್ ಪಾಟೀಲ

By Suvarna News  |  First Published Feb 18, 2023, 7:59 PM IST

ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಎಚ್.ವೈ.ಮೇಟಿ ಅವರಿಗೆ ಟಿಕೆಟ್ ತಪ್ಪಿದರೆ ನನಗೆ ಕೊಡಿ, ಇದು ನನಗೆ ಇರುವ ಕೊನೆಯ ಅವಕಾಶ ಎಂದು ಖ್ಯಾತ ವೈದ್ಯ ಡಾ.ದೇವರಾಜ್ ಪಾಟೀಲ ಹೇಳಿದ್ದಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಫೆ.18): ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಎಚ್.ವೈ.ಮೇಟಿ ಅವರಿಗೆ ಟಿಕೆಟ್ ತಪ್ಪಿದರೆ ನನಗೆ ಕೊಡಿ, ಇದು ನನಗೆ ಇರುವ ಕೊನೆಯ ಅವಕಾಶ ಎಂದು ಖ್ಯಾತ ವೈದ್ಯ ಡಾ.ದೇವರಾಜ್ ಪಾಟೀಲ ಹೇಳಿದರು. ಅವರು ಬಾಗಲಕೋಟೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿ ಇಟ್ಟುಕೊಂಡು ರಾಜಕೀಯಕ್ಕೆ ಬಂದೆ, 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ  ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿತ್ತು. ಅನಿವಾರ್ಯ ಕಾರಣದಿಂದ ಬಿಟ್ಟು ಕೊಡಬೇಕಾಯಿತು. 2014ರಲ್ಲಿ ಎಂಪಿಗೂ ಟಿಕೆಟ್ ನೀಡುತ್ತೇವೆಂದು ಹೇಳಿದ್ದರೂ ಸಹ ಕೊನೆ ಗಳಿಗೆಯಲ್ಲಿ ಸಿಗಲಿಲ್ಲ. 2018ರಲ್ಲಿ ಮತ್ತೆ ಟಿಕೆಟ್ ನೀಡಿದ್ದರು ಆದರೆ ಮಾಜು ಸಿಎಂ ಸಿದ್ದರಾಮಯ್ಯ ಅವರು ಬಂದ್ರು, ನನಗೆ ಬೇರೆ ದಾರಿಯಿರಲಿಲ್ಲ,  ತ್ಯಾಗ ಮಾಡಬೇಕಾಯಿತು ಎಂದು ಕಾಂಗ್ರೆಸ್ ಮುಖಂಡ ಡಾ. ದೇವರಾಜ ಪಾಟೀಲ್ ಹೇಳಿದರು.

ಕಾಂಗ್ರೆಸ್ ಪಕ್ಷದ ಹಿರಿಯರು ನನ್ನ ರಾಜಕೀಯದ ತ್ಯಾಗವನ್ನು ಅರಿತು ಅವಕಾಶವನ್ನು ನೀಡಲಿ:
ಇನ್ನು ಇಷ್ಟೆಲ್ಲಾ ನನ್ನ ರಾಜಕೀಯ ಜೀವನದಲ್ಲಿ ಇಂತಹ ಘಟನೆಗಳು ನಡೆದರೂ ನನ್ನ ಹೃದಯಕ್ಕೆ ತ್ರಾಸ್ ಮಾಡಿಕೊಳ್ಳಲಿಲ್ಲ. ನನಗೆ ರಾಜಕೀಯದ ಅವಕಾಶ ಸಿಕ್ಕಿಲ್ಲವೆಂದು ಸುಮ್ಮನಾದೆ. 2023ರ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದ್ದೇನೆ. ಇದು ನನ್ನ ಕೊನೆ ಅವಕಾಶ. ಈ ಬಾರಿಯೂ ಟಿಕೆಟ್ ತಪ್ಪಿದ್ದರೆ  ಮುಂದೆ ನಾನು ಎಂದೂ ಟಿಕೆಟ್ ಕೇಳುವುದಿಲ್ಲ. ಆದರೆ ನನ್ನ ಜನಸೇವೆ ಮುಂದುವರೆಯುತ್ತದೆ. ನನಗೆ ಕಾಂಗ್ರೆಸ್ ಪಕ್ಷದ ಹಿರಿಯರು ನನ್ನ ರಾಜಕೀಯದ ತ್ಯಾಗವನ್ನು ಅರಿತು ಅವಕಾಶವನ್ನು ನೀಡುತ್ತಾರೆಂದು ನಂಬಿದ್ದೇನೆ.

Tap to resize

Latest Videos

undefined

ಈ ಬಾರಿ ಬಾಗಲಕೋಟೆ ಮತಕ್ಷೇತ್ರದ ಆಕಾಂಕ್ಷಿಯಾಗಿದ್ದು ನಮ್ಮೆಲ್ಲರ ಹಿರಿಯರಾದ ಎಚ್.ವೈ.ಮೇಟಿ ಅವರು ಆಕಾಂಕ್ಷಿಯಾಗಿದ್ದು, ಒಂದು ವೇಳೆ ಪಕ್ಷದವರು ಟಿಕೆಟ್ ಬದಲಾವಣೆ ಮಾಡಿದರೆ ನನಗೆ ಟಿಕೆಟ್ ದೊರೆಯುವ ಭರವಸೆ ಇದೆ.  ಕೊನೆಯಲ್ಲಿ ಟಿಕೆಟ್ ಕೊಡದೇ ಇದ್ದರೇ ದೇವರಾಣೆಗೂ  ಸಾಕು ಅನಕ್ಕೊತೀನಿ. ರಾಜಕೀಯ ಬೇಕೋ ಬೇಡವೋ, ಪಕ್ಷ ಬಿಡಬೇಕೋ ಎಂಬುದನ್ನು ನನ್ನ ಹಿತೈಷಿಗಳ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಸಿದ್ದರಾಮಯ್ಯ ಭೇಟಿ​ಯಾದ ಶಿವಲಿಂಗೇಗೌಡ ‘ಕಾಂಗ್ರೆಸ್‌’ ಸೇರ್ಪಡೆ ಚರ್ಚೆ

ನನ್ನ ಬೆನ್ನಿಗೆ ಚೂರಿ ಹಾಕಿದರು:
ಈ ಮದ್ಯೆ ನಾನು ಬಂಗಾರದ ಜಿಂಕೆ  ಬೆನ್ನ ಹತ್ತಿನಿ ಎಂದೆನಿಸಿತು. ರಾಜಕೀಯದಲ್ಲಿದ್ದು ಸಮಾಜ ಸೇವೆ ಮಾಡುವುದಕ್ಕು ವೈದ್ಯ ವೃತ್ತಿ ಯಲ್ಲಿ ಜನಸೇವೆ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ವೈದ್ಯ ವೃತ್ತಿಯಲ್ಲಿ ಬಹಳ ಅಡೆತಡೆಗಳಿವೆ. ಆದರೆ ಅಧಿಕಾರವಿದ್ದರೇ ಜನಸೇವೆ ಹೆಚ್ಚಿನ ರೀತಿಯಲ್ಲಿ ಮಾಡಬಹುದು. ಜನರಿಗೆ ಇನ್ನು  ಹತ್ತಿರವಾಗಬಹುದು ಎಂಬ ಉದ್ದೇಶ ನನ್ನದಾಗಿತ್ತು. ಈಗಾಗಲೇ ಬಾದಾಮಿ ಕ್ಷೇತ್ರಕ್ಕೆ ಎರಡು ಬಾರಿ ಪ್ರಯತ್ನಿಸಿದೆ. ಅನಿವಾರ್ಯ ಕಾರಣಗಳಿಂದ ಟಿಕೆಟ್ ಕೈತಪ್ಪಿತ್ತು. ರಾಜಕೀಯ ರಾಜಕೀಯವಾಗಿ ಇರಲಿ. ಅದು ವ್ಯಕ್ತಿಗತವಾಗಬಾರದು. ಅಲ್ಲಿ ಸ್ವಲ್ಪ ವಾತಾವರಣ ಬದಲಾವಣೆ ಆಯ್ತು. ಜನರನ್ನು ಸೇರಿಸುವ ಶಕ್ತಿ ತೋರಿಸಬೇಕು.

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಮಂಡ್ಯ ಉಸ್ತುವಾರಿ ಕೊಟ್ರು ಬೇಡ: ಸಚಿವ ಕೆ.ಸಿ. ನಾರಾಯಣಗೌಡ

ಇನ್ನು ಬೆನ್ನಿಗೆ ಚೂರಿ ಹಾಕು ಕೆಲಸ ಮಾಡಬಾರದು. ಒಂದು ಸಂಸ್ಥೆ ಹುಟ್ಟು ಹಾಕಿದ್ದೆ.  ಆ ಸಂಸ್ಥೆ ಬಹಳ ಚಂದ ಬೆಳಸಿದ್ದೆ. ಆ ಸಂಸ್ಥೆ ಮುಳುಗಿಸಲು ಪ್ರಯತ್ನ ಮಾಡಿದ್ದರು. ಆಗ ಆ ವ್ಯವಸ್ಥೆ ನನಗೆ ಸರಿ ಎನಿಸಲಿಲ್ಲ. ನನ್ನ ರಾಜಕೀಯ ಭವಿಷ್ಯ ಮುಗಿಸಲು ನಮ್ಮ ಪಕ್ಷದವರೇ ಕೆಲವರು ಮುಂದೆ ಬಂದರು. ಹೀಗೆ ಮುಂದುವರೆದರೆ ಮಾನ ಮರೆಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ದೂರ ಸರಿದೆ. ನನ್ನ ಸ್ವಭಾವವೇ ಹೀಗೆ ನಾನು ಮಕ್ಕಳ ಡಾಕ್ಟರ್. ಅವರವರ ವೃತ್ತಿ ತಕ್ಕಂತೆ ಸ್ವಭಾವ ಇರುತ್ತದೆ. ನನಗೆ ಬಾದಾಮಿಯಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ಆಯ್ತು. ಆದ್ದರಿಂದ ಕ್ಷೇತ್ರ ಬೇಡ ಅಂದು ಬಿಟ್ಟೆ ಎಂದು ಡಾ.ದೇವರಾಜ್ ಪಾಟೀಲ ಹೇಳಿದರು.

click me!