• ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿಯೂ ಗಿಫ್ಟ್ ಪಾಲಿಟಿಕ್ಸ್
• ಹಾಲಿ ಬಿಜೆಪಿ ಶಾಸಕನ ಕ್ಷೇತ್ರದಲ್ಲಿ ಮರಾಠಾ ವರ್ಸಸ್ ಲಿಂಗಾಯತ ಟಿಕೆಟ್ ಫೈಟ್
• ಹಳದಿ ಕುಂಕುಮ ಕಾರ್ಯಕ್ರಮ ನಡೆಸಿ ಹಾಟ್‌ಬಾಕ್ಸ್ ಗಿಫ್ಟ್ ನೀಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಜ.24): ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಮಹಿಳೆಯರನ್ನು ಕರೆಯಿಸಿ ಅರಿಶಿನ ಕುಂಕುಮ ಕಾರ್ಯಕ್ರಮ ಜೋರಾಗಿ ನಡೆಯುತ್ತಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಳದಿ ಕುಂಕುಮ ಕಾರ್ಯಕ್ರಮ ನಡೆಸಿ ಟಿಫಿನ್ ಬಾಕ್ಸ್ ಗಿಫ್ಟ್ ನೀಡಿದ್ದರು. ಈಗ ಇದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೂ ವ್ಯಾಪಿಸಿದೆ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುರುಘೇಂದ್ರಗೌಡ ಪಾಟೀಲ್ ಹಳದಿ ಕುಂಕುಮ ಕಾರ್ಯಕ್ರಮ ಆಯೋಜಿಸಿ ಮಹಿಳೆಯರಿಗೆ ಹಾಟ್ ಬಾಕ್ಸ್ ಗಿಫ್ಟ್ ನೀಡಿದ್ದಾರೆ.
undefined
ಮರಾಠಾ ವರ್ಸಸ್ ಲಿಂಗಾಯತ ಫೈಟ್: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,43,842 ಮತದಾರರು ಇದ್ದು, 1,20,923 ಪುರುಷ ಮತದಾರರು ಇದ್ದರೆ 1,22,919 ಮಹಿಳಾ ಮತದಾರರು ಇದ್ದಾರೆ. ಜಾತಿವಾರು ಲೆಕ್ಕಾಚಾರ ನೋಡೋದಾದ್ರೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ. ಲಿಂಗಾಯತ ಸಮುದಾಯದ ಅಂದಾಜು 75 ಸಾವಿರ ಮತಗಳಿದ್ದರೆ, ಮರಾಠಾ ಸಮುದಾಯದ 48 ಸಾವಿರ ಹಾಗೂ ಮುಸ್ಲಿಂ ಸಮುದಾಯದ 50 ಸಾವಿರ ಮತಗಳಿವೆ. ಉಳಿದಂತೆ ಇತರ ಸಮುದಾಯದ ಮತಗಳು ಇವೆ. ಹೀಗಾಗಿ ಲಿಂಗಾಯತ ಕೋಟಾದಡಿ ಬಿಜೆಪಿ ಟಿಕೆಟ್ ಪಡೆಯಲು ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಬಿಜೆಪಿ ಟಿಕೆಟ್‌ಗಾಗಿ ಲಾಭಿ ನಡೆಸಿದ್ದಾರೆ.
Assembly election: ಗ್ರಾಮೀಣ ಉತ್ಸವ ಮಾಡಿದ್ದೇನೆ ಹೊರತು ಯಾರಿಗೂ ಗಿಪ್ಟ್ ಕೊಟ್ಟಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತರಿಗೆ ಅನ್ಯಾಯ: ಹಾಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಇರುವಾಗಲೇ ತಮ್ಮ ಜನಸಂಪರ್ಕ ಕಚೇರಿ ತೆರೆದು ಕ್ಷೇತ್ರದಾದ್ಯಂತ ಓಡಾಟ ಶುರು ಮಾಡಿದ್ದಾರೆ. ಬೆಳಗಾವಿ ಬುಡಾ ಅಧ್ಯಕ್ಷರ ಬದಲಾವಣೆ ಹಾಗೂ ಕಳೆದ ವರ್ಷ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದ್ದು ಲಿಂಗಾಯತ ಸಮುದಾಯಕ್ಕೆ ಎಂಎಲ್‌ಎ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಜಿಲ್ಲಾ ಬಿಜೆಪಿ ನಾಯಕರ ಮುಂದೆ ಇಡುತ್ತಿದ್ದಾರಂತೆ.
ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಇನ್ನು ಅರಿಶಿನ ಕುಂಕುಮ ನೆರವೇರಿಸಿ ಮಹಿಳೆಯರಿಗೆ ಹಾಟ್ ಬಾಕ್ಸ್ ಗಿಫ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಮುರುಘೇಂದ್ರಗೌಡ ಪಾಟೀಲ್, 'ಎಂಪಿ ಫೌಂಡೇಷನ್ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದೆವೆ. ನನ್ನ ಪತ್ನಿ ಹಾಗೂ ನನ್ನ ಸಹೋದರನ ಪತ್ನಿ ಮಹಾನಗರ ಪಾಲಿಕೆ ಸದಸ್ಯರಿದ್ದಾರೆ.ಹೀಗಾಗಿ ಮಹಿಳಾ ಸಂಘಟನೆ ದೃಷ್ಟಿಯಿಂದ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಬಂದ ಮಹಿಳೆಯರನ್ನು ಹಾಗೇ ಕಳಿಸಬಾರದೆಂದು ಗಿಫ್ಟ್ ವಿತರಣೆ ಮಾಡುತ್ತಿದ್ದೇವೆ. ನಾನು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋದು ನಿಜ ಎಂದಿದ್ದಾರೆ.
Belagavi: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಸಮಾವೇಶ
ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ: ಈ ಬಾರಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿರುವೆ. ಎಲ್ಲರನ್ನೂ ಸಂಪರ್ಕ ಮಾಡ್ತಿರುವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ. ನಾನು 18 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುತ್ತಿರುವೆ. ಎರಡು ಸಲ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ, ಯುವ ಮೋರ್ಚಾ ಅಧ್ಯಕ್ಷನಾಗಿ ಕೆಲಸ ಮಾಡಿರುವೆ. ಸದ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವೆ. ಪಕ್ಷದ ಹಿರಿಯರು ಹೇಳಿದ ಮಾರ್ಗದಲ್ಲಿ ನಡೆಯುವೆ' ಎಂದು ತಿಳಿಸಿದ್ದಾರೆ.
ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಮತದಾರರ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದು ಯಾರಿಗೆ ಟಿಕೆಟ್ ಸಿಗುತ್ತೆ ಯಾರು ಚುನಾವಣೆಯಲ್ಲಿ ಆರಿಸಿ ಬರುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.