ಕ್ಷೇತ್ರವನ್ನು 1996ರಿಂದಲೂ ಪ್ರತಿನಿಧಿಸಿಕೊಂಡು ಬರುತ್ತಿದ್ದ ಗಾಂಧಿ ಕುಟುಂಬಕ್ಕೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿ ಉತ್ತರ ಪ್ರದೇಶದ ಪ್ರಭಾವಿ ಸಚಿವ ಜಿತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಹಾಗೂ ಕಾರ್ಯಕರ್ತರು ಇದನ್ನು ಹೇಗೆ ಸ್ವೀಕರಿಸುವರು ಮತ್ತು ಮತ ಹಾಕುವಾಗ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪೀಲಿಭೀತ್(ಏ.16): ನೇಪಾಳದ ಗಡಿಗೆ ಹೊಂದಿಕೊಂಡಂತಿರುವ ಉತ್ತರ ಪ್ರದೇಶದ ಪೀಲಿಭೀತ್ ಕ್ಷೇತ್ರವು ಈ ಬಾರಿ ಚುನಾವಣೆಯಲ್ಲಿ ನಿಂತವರಿಗಿಂತ ನಿಲ್ಲದವರಿಂದಾಗಿಯೇ ಹೆಚ್ಚು ಮುನ್ನೆಲೆಗೆ ಬಂದಿದೆ. ಕ್ಷೇತ್ರವನ್ನು 1996ರಿಂದಲೂ ಪ್ರತಿನಿಧಿಸಿಕೊಂಡು ಬರುತ್ತಿದ್ದ ಗಾಂಧಿ ಕುಟುಂಬಕ್ಕೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿ ಉತ್ತರ ಪ್ರದೇಶದ ಪ್ರಭಾವಿ ಸಚಿವ ಜಿತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಹಾಗೂ ಕಾರ್ಯಕರ್ತರು ಇದನ್ನು ಹೇಗೆ ಸ್ವೀಕರಿಸುವರು ಮತ್ತು ಮತ ಹಾಕುವಾಗ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ತಮಗೆ ಟಿಕೆಟ್ ನಿರಾಕರಣೆಯಾದಂದಿನಿಂದ ಬಹಿರಂಗವಾಗಿ ವರುಣ್ ಎಲ್ಲೂ ಅಸಮಾಧಾನ ಹೊರಹಾಕಿಲ್ಲವಾದರೂ ಸ್ವತಃ ಪ್ರಧಾನಿ ಮೋದಿ ಭಾಗವಹಿಸಿದ್ದ ರ್‍ಯಾಲಿಗೆ ಗೈರಾಗುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಜಿತಿನ್ ಪ್ರಸಾದ್ ಅವರೂ ಪ್ರಧಾನಿ ಮೋದಿ ಮಾಡಿರುವ ಅಭಿವೃದ್ಧಿಯ ಹೆಸರಿನಲ್ಲೇ ಮತ ಕೇಳುತ್ತಿದ್ದು, ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.
Lok Sabha Election 2024: ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ, ಬುಲೆಟ್ ರೈಲು ರಾಜ್ಯದಲ್ಲಿ ಓಡಲಿದೆ: ಮೋದಿ
ಮತ್ತೊಂದೆಡೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳೂ ಕೂಡ ಮಾಜಿ ಮಂತ್ರಿಗಳಾದ ಭಾಗ್ವತ್ ಸರಣ್ ಗಂಗ್ವಾರ್ ಮತ್ತು ಅನೀಸ್ ಅಹ್ಮದ್ ಖಾನ್ ಅವರನ್ನು ಕಣಕ್ಕಿಳಿಸಿದೆ. ಇವರು ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಹೊಂದಿಲ್ಲದಿದ್ದರೂ ಮಂತ್ರಿಗಳಾಗಿದ್ದಾಗ ಮಾಡಿದ ಕೆಲಸಗಳು ಇವರ ಕೈ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಮನೆಮಗನನ್ನೆ ಕಳೆದುಕೊಂಡಿರುವ ಪೀಲಿಭೀತ್ ಕ್ಷೇತ್ರದ ಜನತೆ ಈ ಬಾರಿ ಯಾರನ್ನು ಸಂಸದರಾಗಿ ಆರಿಸುತ್ತಾರೆ ಎಂಬುದು ಕುತೂಹಲವಾಗಿದೆ.
ಸ್ಟಾರ್ ಕ್ಷೇತ್ರ- ಪೀಲಿಭೀತ್
ಮತದಾನದ ದಿನ-ಏ.19
ಒಟ್ಟು ವಿಧಾನಸಭಾ ಕ್ಷೇತ್ರಗಳು-5
ರಾಜ್ಯ-ಉತ್ತರ ಪ್ರದೇಶ
ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ- ಜಿತಿನ್ ಪ್ರಸಾದ್
ಎಸ್‌ಪಿ- ಭಗ್ವತ್ ಸರಣ್ ಗಂಗ್ವಾರ್
ಬಿಎಸ್‌ಪಿ- ಅನೀಸ್ ಅಹ್ಮದ್ ಖಾನ್
2019ರ ಚುನಾವಣೆ ಫಲಿತಾಂಶ:
ಗೆಲುವು: ಬಿಜೆಪಿ-ವರುಣ್ ಗಾಂಧಿ
ಸೋಲು: ಎಸ್‌ಪಿ-ಹೇಮ್‌ರಾಜ್ ವರ್ಮಾ