* ಮತ್ತೆ ರಾಜಕೀಯಕ್ಕೆ ಜನಾರ್ಧನ ರೆಡ್ಡಿ
* ಷಷ್ಠ್ಯಾಬ್ದಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ ರೆಡ್ಡಿ
* 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡುತ್ತೇವೆ ಎಂದು ಶಪಥ
ಹೊಸಪೇಟೆ, (ಏ.10): ಸಕ್ರಿಯ ರಾಜಕೀಯಕ್ಕೆ ಬಂದು ಬಿಜೆಪಿಯಲ್ಲಿ ತನ್ನ ಹಿಂದಿನ ಪ್ರಾಭಲ್ಯವನ್ನು ಮುಂದುವರಿಸಲು ಮಾಜಿ ಸಚಿವ ಜಿ.ಜನಾರ್ಧನ ಕಾದು ಕುಳಿತ್ತಿದ್ದಾರೆ. ಕೆಲ ವರ್ಷಗಳ ವಿರಾಮದ ಬಳಿಕ ಮತ್ತೆ ರಾಜಕೀಯ ಜೀವನ ಪುನರಾರಂಭಿಸುವುದಾಗಿ ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿ ಘೋಷಿಸಿಕೊಂಡಿದ್ದಾರೆ.
ಹರಪನಹಳ್ಳಿಯ ಎಚ್. ಪಿ.ಎಸ್. ಕಾಲೇಜಿನ ಮೈದಾನದಲ್ಲಿ ಇಂದು(ಭಾನುವಾರ) ಆಯೋಜಿಸಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಕರುಣಾಕರ ರೆಡ್ಡಿ ಅವರ ಷಷ್ಠ್ಯಾಬ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳ್ಳಾರಿ ಕಾಂಗ್ರೆಸ್ ಭದ್ರಕೋಟೆ ಯಾಗಿತ್ತು. ಅದನ್ನು ಬಿಜೆಪಿ ಭದ್ರಕೋಟೆ ಮಾಡಿದ್ದು ಕರುಣಾಕರೆಡ್ಡಿ. ನಾನು ಚುನಾವಣೆ ಸಂದರ್ಭದಲ್ಲಿ ಪ್ರತಿ ಹಳ್ಳಿಗು ಬರುತ್ತೇನೆ ಎಂದು ಹೇಳುವ ಮೂಲಕ ಮತ್ತೆ ರಾಜಕೀಯ ಪ್ರವೇಶದ ಸುಳಿವು ನೀಡಿದರು.
undefined
ಸದಾನಂದಗೌಡ್ರನ್ನ ಭೇಟಿಯಾದ ಶ್ರೀರಾಮುಲು, ಜನಾರ್ದನ ರೆಡ್ಡಿ
ಮುಂದಿನ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡುತ್ತೇವೆ. ಇದಕ್ಕೆ ಎಲ್ಲಾ ಕಾರ್ಯತಂತ್ರ ರೂಪಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡುವೆ ಎಂದು ಹೇಳಿದ್ದಾರೆ.
ಶ್ರೀರಾಮುಲು ಸೇರಿ ನಾವು ಮೂವರು ಲಕ್ಷ್ಮಣ, ಭರತ್, ಶತ್ರುಘ್ನನಾದರೇ ನಮ್ಮ ಅಣ್ಣ ಕರುಣಾಕರ ರೆಡ್ಡಿ ಶ್ರೀರಾಮ.1999 ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದಾಗ ಜಿಲ್ಲೆಯ ಜನರು ಪ್ರೀತಿ ತೋರಿದರು. ಅದಾದ ಬಳಿಕ ಭಾರತ ರಾಷ್ಟ್ರದ ಇತಿಹಾಸದಲ್ಲಿ 2004 ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಹೊಡೆದುರುಳಿಸಿ, ಕರುಣಾಕರ ರೆಡ್ಡಿಯನ್ನು ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಲಾಯಿತು. ನಮ್ಮ ಕುಟುಂಬಕ್ಕೆ ಹಾಗೂ ಹರಪನಹಳ್ಳಿಗೆ ಅವಿನಾಭವ ಸಂಬಂಧವಿದೆ ಎಂದರು
ನಮ್ಮ ತಂದೆ ಪೊಲೀಸ್ ಕಾನಸ್ಟೇಬಲ್ ಆಗಿ ಕೆಲಸ ಮಾಡಿದ್ದಾರೆ. ನಾನು ಕೂಡ ನನ್ನ ಪ್ರಾಥಮಿಕ ಶಿಕ್ಷಣ ಹರಪನಹಳ್ಳಿಯಲ್ಲೇ ಮಾಡಿದ್ದೇ, ನಿಮ್ಮ ಪ್ರೀತಿಗೆ ಮೂಕ ವಿಸ್ಮಿತನಾಗಿದ್ದೇನೆ ಎಂದು ಹೇಳಿದರು.
ಮನೆಯಲ್ಲಿ ದೊಡ್ಡ ಮಗನಾಗಿದ್ದ ಕರುಣಾಕರೆಡ್ಡಿ. ನನ್ನ ತಂದೆ ಜೊತೆ ಹಿರಿಯ ಮಗನಾಗಿ ಹೆಗಲು ಹೆಗಲು ಕೊಟ್ಟ. ಸಣ್ಣಪುಟ್ಟ ಕಾಂಟ್ರೆಕ್ಟ್ ಮಾಡುತ್ತಿದ್ದ, ನಾನು ಚಿಕ್ಕಂದಿನಲ್ಲೆ ಸರಳ ಜೀವಿ. ನಾನು ಆಡಂಬರ ಮಾಡುತ್ತಿದ್ದೇ . ನನ್ನ ಹುಟ್ಟುಹಬ್ಬಕ್ಕೆ ಹೊಸಬಟ್ಟೆ ಊಟ ಹಾಕಿಸುತ್ತಿದ್ದ. ನಾನು ಒಂದು ಬುಕ್ ಹೊರತರುತ್ತಿದ್ದೇನೆ ಎಂದರು.
ಹರಪನಹಳ್ಳಿ ಪಟ್ಟಣದ ಎಚ್.ಪಿ.ಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಕರುಣಾಕರ ರೆಡ್ಡಿ ಅವರ ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರೊಂದಿಗೆ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ,ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.1/2 pic.twitter.com/kdYdFSUG3w
— B Sriramulu (@sriramulubjp)ದೆಹಲಿ ಮಟ್ಟದಲ್ಲಿ ಒತ್ತಡ
ಜನಾರ್ಧನ ರೆಡ್ಡಿ ತಮ್ಮ ಜಿಗರ್ ದೋಸ್ತ್ ಶ್ರೀರಾಮುಲು ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಹರಸಾಹಸ ಪಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಜೊತೆಗೆ ರಾಮುಲು ಉತ್ತಮ ಬಾಂಧವ್ಯವನ್ನು ಹೊಂದಿರುವುದರಿಂದ, ಆ ಮೂಲಕ ಒತ್ತಡವನ್ನು ಹಾಕಲಾಗುತ್ತಿದೆ. ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಗ್ರೀನ್ ಸಿಗ್ನಲ್ ಬಿಜೆಪಿ ವರಿಷ್ಠರು ನೀಡಬೇಕಾಗಿರುವುದರಿಂದ ದೆಹಲಿ ಮಟ್ಟದಲ್ಲಿ ಒತ್ತಡವನ್ನು ಹಾಕಲಾಗುತ್ತಿದೆ.
ಹಿಂದೆ ದೊಡ್ಡ ಪ್ರಮಾಣದ ವೋಟ್ ಬ್ಯಾಂಕ್ ಹೊಂದಿದ್ದ ಜನಾರ್ಧನ ರೆಡ್ಡಿಗೆ ಸದ್ಯ ಹಿಂದಿನ ವರ್ಚಸ್ಸು ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ಸ್ವಚ್ಛ ಆಡಳಿತ ನೀಡಿ ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರುತ್ತೇವೆ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಬಿಜೆಪಿಗೆ ರೆಡ್ಡಿಗೆ ಮಣೆ ಹಾಕಿದರೆ ಎದುರಾಗಬಹುದು.