
ಚೆನ್ನೈ(ಏ.12): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್ ಆಂದೋಲನ ಆರಂಭವಾಗಿದೆ.
ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿ ಚಿತ್ರವಿರುವ ಬಾರ್‌ಕೋಡ್ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಬಿಜೆಪಿ ಸರ್ಕಾರದ ‘ಹಗರಣಗಳ’ ಮಾಹಿತಿ ಲಭಿಸುತ್ತದೆ. ಜನಪ್ರಿಯ ಗೂಗಲ್ ಪೇ (ಜಿ-ಪೇ) ಆ್ಯಪ್‌ನ ಹೆಸರು ಅನುಕರಿಸಿ ಇದಕ್ಕೆ ‘ಜಿ-ಪೇ’ (ಮೋದಿಜಿ ಪೇ) ಎಂದು ಹೆಸರಿಡಲಾಗಿದೆ.
ಭಾರತದ ದಕ್ಷಿಣದ ತುದಿಯಿಂದ ಬಿಜೆಪಿ ಕಟ್ಟಲು ಮೋದಿ ತಂತ್ರ, ತಮಿಳುನಾಡಿನಲ್ಲಿ ಹೊಸ ಅಲೆ!
ಪ್ರಧಾನಿ ಮೋದಿ ಬುಧವಾರ ತಮಿಳುನಾಡಿನಲ್ಲಿ ಪ್ರಚಾರ ಸಮಾವೇಶ ನಡೆಸಿ ‘ಡಿಎಂಕೆ ಪಕ್ಷ ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮೊಟ್ಟಮೊದಲ ಕಾಪಿರೈಟ್ ಪಡೆದ ಪಕ್ಷ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಡಿಎಂಕೆಯಿಂದ ಮೋದಿ ವಿರುದ್ಧ ‘ಜಿ-ಪೇ’ ಪೋಸ್ಟರ್ ಸಮರ ಆರಂಭವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.