ಬಿಜೆಪಿಯಿಂದ ಮಹಾರಾಷ್ಟ್ರದಲ್ಲಿ ಕರ್ನಾಟಕ ರೀತಿ ಸಂಚು: ಪರಮೇಶ್ವರ್‌

Published : Jun 26, 2022, 05:00 AM IST
ಬಿಜೆಪಿಯಿಂದ ಮಹಾರಾಷ್ಟ್ರದಲ್ಲಿ ಕರ್ನಾಟಕ ರೀತಿ ಸಂಚು: ಪರಮೇಶ್ವರ್‌

ಸಾರಾಂಶ

ಬಿಜೆಪಿಯವರು ಕರ್ನಾಟಕದಲ್ಲಿ ಮಾಡಿದ್ದನ್ನೇ ಮಹಾರಾಷ್ಟ್ರದಲ್ಲೂ ಮಾಡುತ್ತಿದ್ದು, ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎಂದು ಕಾಂಗ್ರೆಸ್‌ ಮುಖಂಡ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

ಕಲಬುರಗಿ (ಜೂ.26): ಬಿಜೆಪಿಯವರು ಕರ್ನಾಟಕದಲ್ಲಿ ಮಾಡಿದ್ದನ್ನೇ ಮಹಾರಾಷ್ಟ್ರದಲ್ಲೂ ಮಾಡುತ್ತಿದ್ದು, ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎಂದು ಕಾಂಗ್ರೆಸ್‌ ಮುಖಂಡ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಸಾಮಾನ್ಯ. ಇದಕ್ಕೆ ದೇಶದ ಸಂವಿಧಾನದಲ್ಲಿಯೇ ಅವಕಾಶ ಇದೆ. ಅದಕ್ಕಾಗಿ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್‌ ಸೇರಿ ಸರ್ಕಾರ ರಚನೆ ಮಾಡಿವೆ. 

ಆದರೆ ಆಂತರಿಕವಾಗಿ ಇದಕ್ಕೆ ಪ್ರಚೋದನೆ ಮಾಡಿ ಸರಕಾರ ಬೀಳಿಸುವುದು ಬಿಜೆಪಿಯ ವ್ಯವಸ್ಥಿತವಾದ ಸಂಚು ಮಾಡಿದೆ ಎಂದರು. ಇದು ಬಿಜೆಪಿಯವರೇ ಮಾಡಿಸುತ್ತಿದ್ದಾರೆ ಎನ್ನುವಂತದ್ದು ಇಡೀ ಜಗತ್ತಿಗೆ ಗೊತ್ತಾಗಿದೆ. ಈ ಸರ್ಕಾರ ಕೆಡವಿ ತಮ್ಮ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ಇದು ಬಹಳ ದಿನ ನಡೆಯುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಇದನ್ನು ತಡೆಯಲು ಚುನಾವಣಾ ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಅಗತ್ಯವಿದೆ. ಇಡೀ ದೇಶದಲ್ಲಿಯೇ ಇದನ್ನ ಚರ್ಚೆ ಮಾಡಿ ದೊಡ್ಡ ಬದಲಾವಣೆ ತರಬೇಕಾಗಿದೆ. 

ಪರಮೇಶ್ವರ ಮುಂದಿನ ಸಿಎಂ ಘೋಷಿಸಿ: ಕಾಂಗ್ರೆಸ್‌ಗೆ ಶೆಟ್ಟರ್‌ ಸವಾಲ್‌

ಇಲ್ಲದಿದ್ದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಅಗೋದಿಲ್ಲ ಎಂದರು. ಇನ್ನು ತಮಗೆ ಪಕ್ಷದಲ್ಲಿ ಸ್ಥಾನಮಾನ ಕೊಡುತ್ತಿರುವ ಬಗ್ಗೆ ಕಿಂಚಿತ್ತೂ ಬೇಸರ ಇಲ್ಲ ಎಂದ ಅವರು ಎಂಟು ವರ್ಷ ಸತತ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ನಂತರ ಬಂದ ಸರ್ಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಯಾವುದೇ ರೀತಿಯ ಬೇಸರವಿಲ್ಲ ಎಂದರು.

ನಾವು ರಾಜ್ಯ ಇಬ್ಭಾಗಕ್ಕೆ ಬಿಡಲ್ಲ: ಕರ್ನಾಟಕ ಯಾವುದೇ ಕಾರಣಕ್ಕೂ ವಿಭಾಗ ಆಗೋದಿಲ್ಲ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಹೇಳಿದರು. ಕೊರಟಗೆರೆ ತಾಲೂಕಿನ ಸಸ್ಯಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಮಾತನಾಡಿದ ಅವರು, ಬಹಳ ಶ್ರಮದಿಂದ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕರ್ನಾಟಕ ರಚನೆಯಾಗಿದೆ. ಯಾರದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನು ಒಡೆಯುವ ಕೆಲಸ ಯಾರು ಮಾಡಬಾರದು ಎಂದರು.

ಪ್ರವಾದಿ ಮಹಮದ್‌ರಿಗೆ ಅಪಮಾನ, ಬಿಜೆಪಿ ಕ್ಷಮೆ ಕೇಳಬೇಕು: ಜಿ.ಪರಮೇಶ್ವರ್

ಇದೇ ವೇಳೆ ಅಗ್ನಿಪಥ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಸೆಕ್ಯುರಿಟಿ ಬಹಳ ಮುಖ್ಯ. ಗಡಿಯಲ್ಲಿ ಸೈನಿಕರು ಪ್ರಾಣವನ್ನೇ ಕೊಟ್ಟು ಹೋರಾಡ್ತಾರೇ. ಅಂತಹ ವಿಚಾರದಲ್ಲಿ ನಾವು ಹೊಂದಾಣಿಕೆ ಆಗಬಾರದು. ಯುವಕರು 4 ವರ್ಷ ಕಳೆದ ಮೇಲೆ ಏನು ಎಂಬುದನ್ನು ಯೋಚನೆ ಮಾಡಬೇಕಿದೆ ಎಂದರು. ಇನ್ನು ವರಿಷ್ಠರು ತೀರ್ಮಾನ ಮಾಡಿದ್ರೆ ಗುಬ್ಬಿ ಶಾಸಕ ಶ್ರೀನಿವಾಸ್‌ ಅವರನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ತೀವಿ ಎಂದು ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ