ಸಿ.ಪಿ. ಯೋಗೇಶ್ವರದ್ದು ಎನ್ನಲಾದ ಆಡಿಯೋ ಫುಲ್‌ ಡಿಟೇಲ್ಸ್ ಇಲ್ಲಿದೆ ನೋಡಿ: ಅಮಿತ್‌ ರೌಡಿ- ಬಿಜೆಪಿಗೆ ಜನಾಭಿಪ್ರಾಯ ಇಲ್ಲ

By Sathish Kumar KH  |  First Published Jan 14, 2023, 6:34 PM IST

ನಮ್ಮ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ, ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚಿಸುತ್ತೇವೆ. ಅಮಿತ್ ಷಾ ಒಂಥರ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ- ಆಡಿಯೋ ವೈರಲ್‌..


ಬೆಂಗಳೂರು (ಜ.14): ಚುನಾವಣೆ ಬಳಿಕ ನಮ್ಮ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ, ಆದರೆ, ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಮಾಡಿ ನಾವೇ ಸರ್ಕಾರ ರಚಿಸುತ್ತೇವೆ. ಅಮಿತ್ ಷಾ ಒಂಥರ ರೌಡಿ ರೀತಿ. ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ರಾಜಕೀಯ ಮಾಡ್ತಾರೆ ಕಣಯ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ.

ನಾನು ಕುಮಾರಸ್ವಾಮಿ ವಿರುದ್ಧ ನಿಲ್ಲುತ್ತಿದ್ದೆನೆ. ಇದೇ ಅಶೋಕ್ ಬಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಲ್ಲಲಿ. ಅಶ್ವತ್ಥ್ ನಾರಾಯಣ್ ರಾಮನಗರದಿಂದ ಕುಮಾರಸ್ವಾಮಿ ಮಗನ ಮೇಲೆ ನಿಲ್ಲಲಿ?  2023ಕ್ಕೆ ಒಕಲಿಗರ ನಾಯಕರು ಯಾರು? ಕುಮಾರಸ್ವಾಮಿ ವಿರುದ್ದ ಗೆದ್ದಮೇಲೆ ನಾನು ಏಲ್ಲೊ ಇರ್ತಿನಿ. ನಾನೇ ಸಿಎಂ ಆದರೂ ಆದೆ. ಹೀಗೆ, ಸವಾಲೆಸೆದಿರುವುದು ಮಾತ್ರವಲ್ಲ 2023ರ ಚುನಾವಣೆಯ ಕುರಿತು ಭವಿಷ್ಯ ನುಡಿದಿರುವುದು ಬಿಜೆಪಿಯ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ! 

Tap to resize

Latest Videos

ಆಡಿಯೋದಲ್ಲಿರುವ ಪೂರ್ಣ ವಿವರ ಇಲ್ಲಿದೆ?
2023ರ ಚುನಾವಣೆಯಲ್ಲಿ ಜೆಡಿಎಸ್‌ನ ೨೦ ಅಭ್ಯರ್ಥಿಗಳಯ ಸೋಲುತ್ತಾರೆ. ಇದರಲ್ಲಿ ಗುಬ್ಬಿ ಶ್ರೀನಿವಾಸ್,  ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ.ರಾಮಸ್ವಾಮಿ, ಬೆಂಗಳೂರಿನ ಗನ್  ಮಂಜು, ನೆಲಮಂಗಲದ ಶ್ರೀನಿವಾಸಮೂರ್ತಿ, ಮಳವಳ್ಳಿ ಅನ್ನದಾನಿ, ಮದ್ದೂರು ಡಿ.ಸಿ.ತಮ್ಮಣ್ಣ, ಮಂಡ್ಯಶ್ರೀನಿವಾಸ್, ಕೆ.ಆರ್.ನಗರದ ಸಾ.ರಾ.ಮಹೇಶ್ ಅವರುಗಳು ಹೀನಾಯವಾಗಿ ಸೋಲುತ್ತಾರೆ. ರಾಮನಗರದ ಮೂರು ವಿಧನಸಭಾ ಕ್ಷೇತ್ರದಲ್ಲಿ ಒಂದರಲ್ಲಿ ಜೆಡಿಎಸ್ ಸೋಲುತ್ತದೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಇದ್ದರೂ ಇರಬಹುದು. ಉತ್ತರ ಕರ್ನಾಟದಲ್ಲಿ 5 ಜೆಡಿಎಸ್ ಎಂಎಲ್‌ಎ ಇದ್ದಾರೆ. ಇದರಲ್ಲಿ ಮೂರು ಜನ ವಾಶ್ ಔಟ್ ಆಗ್ತಾರೆ. ಬಂಡೆಪ್ಪ ಕಾಶಪ್ಪನವರ್ ಜತೆಗೆ ಇನ್ನೊಬ್ಬ ಗೆಲ್ಲಬಹುದು ಅಷ್ಟೆ ಎಂದಿದ್ದಾರೆ.

ಆಡಿಯೋ ವೈರಲ್ ಬಗ್ಗೆ ಸಿ ಪಿ ಯೋಗೇಶ್ವರ್ ಸ್ಪಷ್ಟನೆ, ಕೈ ಶಾಸಕ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಸಾ.ರಾ. ಮೇಹೇಶ್ ಸೋಲಿಗೆ ಆತನೇ ಕಾರಣ:
ತುಮಕೂರು ಜಿಲ್ಲೆಯ ವೀರಭದ್ರಯ್ಯ ಅವರ ಪತ್ನಿ , ಬೇಲೂರಿನ ಲಿಂಗೇಶ್ ಸೋಲುತ್ತಾರೆ. ನಮ್ಮ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಗೆಲ್ಲುತ್ತಾನೆ. ಚಿಂತಾಮಣಿಯಲ್ಲಿ ಸಕ್ಕತ್ ಫೈಟ್ ಇದೆ. ಅದರಲ್ಲಿ ರೆಡ್ಡಿ ಔಟ್ ಆಗ್ತಾನೆ.  ಸಕಲೇಶಪುರದಲ್ಲಿ ಕುಮಾರಸ್ವಾಮಿ ಇದ್ದ.  ಅಲ್ಲಿಗೆ ನಮ್ಮ ಕ್ಯಾಂಡಿಡೆಟ್ 2 ಸಾವಿರದಲ್ಲಿ ಸೋತ. ನಾನೇ ಅವನಿಗೆ ಬಿ ಫಾರಂ ನೀಡಿದ್ದೆ ಈ ಬಾರಿಯೂ ಅವನು ಔಟ್. ಇದೇಲ್ಲ ರಫ್ ಕಾಫಿ ಅಷ್ಟೆ. ಸಾ.ರಾ. ಮೇಹೇಶ್ ಸೋಲಿಗೆ ಆತನೇ ಕಾರಣ. ಆತ ಗೆದ್ದಿರುವುದೇ ಕಡಿಮೆ ಅಂತರದಿಂದ. ಅಲ್ಲಿ ಇಬ್ಬರು ಒಕ್ಕಲಿಗರು ಇದ್ದಾರೆ.  ಸಾರಾ ವಿರುದ್ದ ಕಾಂಗ್ರೆಸ್ ಗೆಲ್ಲಬಹುದು.

ಬಿಜೆಪಿಗೆ ಜನಾಭಿಪ್ರಾಯ ಸಿಗುವುದಿಲ್ಲ:
ಮೈಸೂರು ಭಾಗದಲ್ಲಿ ನಾವು, ದೇವೇಗೌಡರು ಅಂಡರ್ ಸ್ಟ್ಯಾಂಡಿಗ್ ಮಾಡಿದ್ದೊ ನನ್ನ ಅಭಿಪ್ರಾಯದ ಪ್ರಕಾರ ಬಿಜೆಪಿ ಸರ್ಕಾರ ಬರೋದಿಲ್ಲ. ಜನಾಭಿಪ್ರಾಯದ ಮೂಲಕವು ಬಿಜೆಪಿ ಬರೋದಿಲ್ಲ ಆದರೆ, ನಾವು ಬಿಜೆಪಿ ಸರಕಾರ ರಚನೆ ಮಾಡ್ತಿವಿ. ಮಾವಿನ ಹಣ್ಣನ್ನು ಮರೆದಲ್ಲೇ ಹಣ್ಣು  ಮಾಡೋಕೊ, ತಂದು ಕೆಮಿಕಲ್ ಹಾಕಿ ಹಣ್ಣು ಮಾಡೋಕು ವೆತ್ಯಾಸ ಇದೆ. ನಾವು ಎರಡಕ್ಕು ರೆಡಿ ಇದ್ದಿವಿ. ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟೋಕೆ ಅವರ ಲೀಡರ್‌ಗಳಿಗೆ ಇಷ್ಟ ಇಲ್ಲ ಡಾ.ಪರಮೇಶ್ವರ್ ಸಹ ಇದ್ದರಲಿ ಒಬ್ಬರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವವರ ಸಂಖ್ಯೆ ಹೆಚ್ಚಿದೆ: 
ಡಿ.ಕೆ.ಶಿವಕುಮಾರ್ ಸ್ಟ್ರೈಟ್ ಫಾರ್ವಡ್. ಅವರು ನಾನೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದಕ್ಕೆ ನಮ್ಮದೇನು ಸಮಸ್ಯೆ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರು ನೇರ ಸ್ಪರ್ಧಿಗಳು.  ನಾವು ಸಂಕ್ರಾಂತಿ ಆದ ಮೇಲೆ ಬಹಳ ಡೆವಲ್ಪ್‌ಮೆಂಟ್ ಮಾಡುತ್ತೇವೆ. ಮೈಸೂರು ಭಾಗದಲ್ಲಿ ಕಾಂಗ್ರಸಿಗರು ಬಹಳ ಮಂದಿ ನಮ್ಮ ಪಕ್ಷಕ್ಕೆ ಬರುತ್ತಾರೆ. ಅವರಿಂದ ನಾಲ್ಕೈದು ಕ್ಷೇತ್ರದಲ್ಲಿ ನಮಗೆ ಪ್ಲಸ್‌ಆಗ್ತುತ್ತೆ ಮಂಡ್ಯ ಕೋಲಾರದಿಂದ ಒಬ್ಬರು ನಮ್ಮ ಕಡೆಗೆ ಬರ್ತಾರೆ. ಎಳೇಂಟು ಬಾರಿ ಸೆಂಟ್ರಲ್ ಮಿನಿಸ್ಟರ್ ಆಗಿದ್ದವರು ಬರ್ತಾರೆ.  ನಮ್ಮ  ಬಳಿ ಎಲ್ಲ ಮಾಹಿತಿ ಇದೆ. ನಾಳೆ ನಾಳಿದ್ದು ಕ್ಲಾರಿಟಿ ಸಿಗುತ್ತೆ. ಎಲೆಕ್ಷನ್ ಬಳಿಕ ಆಪರೇಷನ್ ಕಮಲ ಮಾಡೋದಿಲ್ಲ ಎಲೆಕ್ಷನ್‌ಗು ಮೊದಲೇ ಆಪರೇಷನ್ ಕಮಲ ಮಾಡುತ್ತೇವೆ. 

2023ರಲ್ಲೂ ಜನಾಭಿಪ್ರಾಯದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲ್ಲ: 'ಕಮಲ' ನಾಯಕನ ಆಡಿಯೋ ಬಹಿರಂಗ..!

ಡಿಕೆಶಿ ವಿರುದ್ಧ ಅಶೋಕ್‌ ಸ್ಪರ್ಧಿಸಲಿ?
ಸಿದ್ದರಾಮಯ್ಯ ಕೋಲಾರದಿಂದ ಸೋಲ್ತಾರೆ ಎಂದು ನಾನು ಹೋಳೊದಿಲ್ಲ ಮುಖ್ಯಮಂತ್ರಿ ಆಗಿದ್ದವರನ್ನು ನನ್ನ ಬಾಯಿಂದ ಸೋಲ್ತಾರೆ ಅಂತಾ ಏಕೇ ಹೇಳಲಿ? ಸಿದ್ದರಾಮಯ್ಯ ಗೆಲ್ಲಲಿ. ಅವರು ಗೆಲುವೆ ಅವರಿಗೆ ತೊಂದರೆ, ಅವರು ಗೆದ್ದರಷ್ಟೆ ಸಿಎಂ ಆಗೋದು? ಅವರ ಕೊನೆ ಪ್ರಯತ್ನ. ಕಾಂಗ್ರೆಸ್‌ನಲ್ಲಿ ಪಾಪುಲರ್ ಲೀಡರ್ ಎಂದರೆ ಸಿದ್ದರಾಮಯ್ಯ. ನಾನು ಕುಮಾರಸ್ವಾಮಿ ವಿರುದ್ದ ಸ್ಪರ್ಧೆ ಮಾಡ್ತಿದ್ದಿನಿ. ಅಶೋಕ್ ಡಿ.ಕೆ.ಶಿವಕುಮಾರ್ ವಿರುದ್ದ ನಿಲ್ಲಲಿ. ಅಶ್ವತ್ಥ್ ನಾರಾಯಣ್ ಕುಮಾರಸ್ವಾಮಿ ಮಗನ ವಿರುದ್ದ ನಿಲ್ಲಲಿ? ಇದೊಂದು ಹೋರಾಟ ಆಗ್ಲಿ. ನಾನು ಸೋತರೂ ನನ್ನ ಮಂತ್ರಿ ಮಾಡ್ಲಿಲ್ಲವಾ? ಹಂಗೇ ಅವರನ್ನು ಮಂತ್ರಿ ಮಾಡ್ತಾರೆ. 

ಅಮಿತ್‌ ಶಾ ಒಂಥರಾ ರೌಡಿಸಂ ಕಣಯ್ಯ:
ಅಮಿತ್ ಶಾ ಹೇಳಿದ್ದಾರೆ . ಹೊಂದಾಣಿಕೆ ರಾಜಕೀಯ ಬೇಡ ಅಂತಾ. ಅಮಿತ್ ಶಾ ಒಂಥಾರ ರೌಡಿಸಂ ಕಣಯ್ಯ. ಪಾರ್ಟಿ ವಿರುದ್ದ ಯಾರಾದರೂ ಮಾತನಾಡಿದರೆ ಅಷ್ಟೆ ಅವರ ಕಥೆ. ನಮ್ಮನೆಲ್ಲ ಮೊನ್ನೆ ಕರೆದು ಅವರು ಮಾತನಾಡಿದ್ದಾರೆ. ಪಾರ್ಟಿ ವಿರುದ್ಧ ಯಾರ್ಯಾರು ದ್ರೋಹ ಮಾಡ್ತಿದ್ದೀರಾ ಎಂದು ಗೊತ್ತು ಎಂದು ನೀಟಾಗಿ ಹೇಳಿದ್ದಾರೆ. ಇದರಲ್ಲೆ ಹೊಂದಾಣಿಕೆ ಅಂತಾ ಜನರಲ್ಲಿ ಚರ್ಚೆಯಾಗುತ್ತಿದೆ.ಒಟ್ಟಿನಲ್ಲಿ ಏನೇ ಆಗ್ಲಿ ಬಿಜೆಪಿ ಸರಕಾರ ರಚನೆಯಾಗುತ್ತೆ ಎಂದಿದ್ದಾರೆ.

click me!