Karnataka Assembly Poll 2023 ಕಾಂಗ್ರೆಸ್ ಪಾಳಯದಲ್ಲಿ 'ದಲಿತೋತ್ಸವ' ಪೈಪೋಟಿ

By Ramesh B  |  First Published Sep 3, 2022, 12:25 PM IST

ಕೇವಲ ಸಿದ್ದರಾಮೋತ್ಸವ ಮಾತ್ರವಲ್ಲ, ಪ್ರತ್ಯೇಕ ದಲಿತ ಸಮಾವೇಶ ಆಯೋಜನೆಗೆ ಎಐಸಿಸಿ ಮಟ್ಟದಲ್ಲೇ ಚಿಂತನೆ ನಡೆದಿದೆ. ಆದ್ರೆ, ಇದರ ನಾಯಕತ್ವಕ್ಕೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ಶುರುವಾಗಿದೆ.


ಬೆಂಗಳೂರು, ಸೆಪ್ಟೆಂಬರ್.03): ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಇನ್ನೇನು ಆರು ತಿಂಗಳು ತಿಂಗಳುಗಳಷ್ಟೇ ಬಾಕಿ ಉಳಿದಿವೆ. ಹೀಗಿರುವಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ಆರಂಭಿಸಿವೆ. 

ಎದುರಾಳಿಗಳ ವಿರುದ್ಧ ರಣತಂತ್ರ ರೂಪಿಸುವುದರ ಜೊತೆಗೆ ಪಕ್ಷದ ಆಂತರಿಕ ತಿಕ್ಕಾಟಗಳಿಗೂ ಮದ್ದು ಅರೆಯುವ ಕೆಲಸಗಳು ಸಾಗಿವೆ. ಈಗಾಗಲೇ ಹಾಲಿ ಶಾಸಕರು ಹಾಗು ಕಳೆದ ಬಾರಿ ಸೋತಿರುವವರು ಕ್ಷೇತ್ರಗಳಲ್ಲಿ  ಬೀಡುಬಿಟ್ಟಿದ್ದಾರೆ. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸಂಚಾರ ಆರಂಭಿಸುವ ಮೂಲಕ ಮತದಾರರ ಮನಗೆಲ್ಲಲು ಸರ್ಕಸ್ ಆರಂಭಿಸಿದ್ದಾರೆ, 

Tap to resize

Latest Videos

Belagavi Politics: ಯಮಕನಮರಡಿ ಬಿಟ್ಟರೆ ಸವದತ್ತಿಯಿಂದ ಸ್ಪರ್ಧೆ: ಸತೀಶ ಜಾರಕಿಹೊಳಿ

ಕೈ ಪಾಳಯದಲ್ಲಿ 'ದಲಿತೋತ್ಸವ'
ಯೆಸ್...ಈಗಾಗಲೇ ಕಳೆದ ತಿಂಗಳು ಸಿದ್ದರಾಮಯ್ಯನವರ 75ನೇ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಿದೆ.ದಾವಣಗೆರೆಯಲ್ಲಿ ನಡೆದಿದ್ದ ಅಮೃತಮಹೋತ್ಸವದಲ್ಲಿ ಸೇರಿದ್ದ ಜನ ಕಾಂಗ್ರೆಸ್‌ಗೆ ಹೊಸ ಆಶಾಭಾವನೆ ಮೂಡಿಸಿದೆ. ಸೇರಿದ್ದ ಜನಸ್ತೋಮದಿಂದಾಗಿ ಕಾಂಗ್ರೆಸ್ ರಣೋತ್ಸಹದಲ್ಲಿದ್ದು, ಅದನ್ನೇ ಕಾಪಾಡಿಕೊಂಡು ಹೋಗಬೇಕೆನ್ನು ಪ್ಲಾನ್ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ರೀತಿಯಲ್ಲಿ ಸಮಾವೇಶಗಳನ್ನ ಆಯೋಜಿಸಲು ಕೈ ಪಾಳೆಯದಲ್ಲಿ ಚಿಂತನೆಗಳು ನಡೆದಿವೆ.

ಕೈ ಪಾಳಯದಲ್ಲಿ 'ದಲಿತೋತ್ಸವ' ಪೈಪೋಟಿ
ಹೌದು...ಕೇವಲ ಸಿದ್ದರಾಮೋತ್ಸವ ಮಾತ್ರವಲ್ಲ, ಪ್ರತ್ಯೇಕ ದಲಿತ ಸಮಾವೇಶ ಆಯೋಜನೆಗೆ ಎಐಸಿಸಿ ಮಟ್ಟದಲ್ಲೇ ಚಿಂತನೆ ನಡೆದಿದೆ. ದಲಿತ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದ್ದು, ಅದಕ್ಕಾಗಿ ಬೃಹತ್ ಸಮಾವೇಶ ಮಾಡಲು ಮುಂದಾಗಿದ್ದು, ಇದಕ್ಕೆ ದಲಿತ ನಾಯಕರನ್ನು ಮುಂದಿಡಲು ಪ್ಲಾನ್ ಮಾಡಿದೆ. ದಲಿತ ಸಮಾವೇಶ ಆಯೋಜನೆಗೆ ಡಾ.ಜಿ ಪರಮೇಶ್ವರ್ ಹಾಗೂ ಕೆಎಚ್ ಮುನಿಯಪ್ಪಗೆ ಜವಾಬ್ದಾರಿವಹಿಸಿ ಇವರ ನೇತೃತ್ವದಲ್ಲಿ  ಸಮಾವೇಶ ಆಯೋಜಿಸಲು ಎಐಸಿಸಿ ಅಸ್ತು ಎಂದಿದೆ.ಆದರೆ. ಇನ್ನೂ ದಲಿತೋತ್ಸವ ಚಿಂತನೆಯ ಹಂತದಲ್ಲಿರುವಾಗಲೇ ದಲಿತ ನಾಯಕತ್ವಕ್ಕಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ.

ಜನತೆಗೆ ಯೋಜನೆ ತಲುಪಿಸಿ, ರಾಜಕೀಯ ಲಾಭ ಪಡೀರಿ: ಪ್ರಧಾನಿ ಮೋದಿ

ಸಿದ್ದರಾಮೋತ್ಸವದಿಂದ ಅಹಿಂದ ಮತಗಳ ಕ್ರೋಢೀಕರಣ ಆಗಿದೆ. ಆದರೆ ದಲಿತ ಸಮಯದಾಯವನ್ನು ಸಿದ್ದರಾಮಯ್ಯ ನೆರಳಿನಿಂದ ಹೊರತಂದು ಪ್ರತ್ಯೇಕವಾಗಿ ಒಗ್ಗೂಡಿಸುವ ಬಗ್ಗೆ ದಲಿತ ನಾಯಕರ ಪ್ಲ್ಯಾನ್. ಕೆಲ ದಿನಗಳಲ್ಲೇ ದಲಿತ ಶಾಸಕರ ಸಭೆ ನಡೆಸಲು ಪರಮೇಶ್ವರ್ ಹಾಗೂ ಮುನಿಯಪ್ಪ ತೀರ್ಮಾನಿಸಿದ್ದಾರೆ. 

ಆದ್ರೆ, ಇದೇ ವೇಳೆ ಸಿದ್ದರಾಮಯ್ಯ ಆಪ್ತರಿಂದಲೂ ದಲಿತ ಸಂಘಟನೆಗಳನ್ನು ಒಗ್ಗೂಡಿಸಲು ಪ್ರತ್ಯೇಕ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಸಿದ್ದರಾಮಯ್ಯ ಆಪ್ತ ಮಹದೇವಪ್ಪ ಅವರು ರಾಜ್ಯದ ಪ್ರಮುಖ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಸಭೆ ನಡೆಸಲು ಮುಂದಾಗಿದ್ದಾರೆ.

 ಆ ಮೂಲಕ ದಲಿತ ಸಂಘಟನೆಗಳೂ ಸಿದ್ದರಾಮಯ್ಯ ಹಿಡಿತದಲ್ಲೇ ಇರುವಂತೆ ನೋಡಿಕೊಳ್ಳಲು ಮಹದೇವಪ್ಪ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಮುಂದೆ 'ದಲಿತ ಸಿಎಂ' ಸಾಧ್ಯತೆಗಳು ಕಂಡುಬಂದರೆ ಕೇವಲ ಪರಮೇಶ್ವರ್ ಮಾತ್ರವಲ್ಲ ತಾವೂ ಅರ್ಹರೇ ಎಂಬ ಸಂದೇಶ ರವಾನಿಸಲು ಮಹದೇವಪ್ಪ ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ಪರೋಕ್ಷವಾಗಿ ದಲಿತ ನಾಯಕತ್ವಕ್ಕಾಗಿ ಕಾಂಗ್ರೆಸ್ ಪಾಳಯದಲ್ಲೇ ಪೈಪೋಟಿ ಶುರುವಾಗಿದ್ದು, ಇದು ಚುನಾವಣೆ ವೇಳೆಗೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

click me!