ಮೋದಿ ಸಂಪುಟಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ ಘಟಾನುಘಟಿಗಳ ವಿದಾಯ

By Suvarna News  |  First Published Oct 10, 2020, 5:13 PM IST

ಇದು ದುರಾದೃಷ್ಟವೋ ಅಥವಾ ಕಾಲದ ನಿಯಮವೋ ಏನೋ ಮೋದಿ ಸಂಪುಟದಲ್ಲಿ ಘಟಾನುಘಟಿ ನಾಯಕರು ಕೊಂಡಿ ಕಳಚಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ 6 ವರ್ಷಗಳಲ್ಲಿ ಮೋದಿ ಸಂಪುಟ ಸಾಕಷ್ಟು ಜನರನ್ನು ಕಳೆದುಕೊಂಡಿದೆ. 


ನವದೆಹಲಿ (ಅ. 10): ದುರಾದೃಷ್ಟವೋ ಏನೋ ಕಳೆದ 6 ವರ್ಷಗಳಲ್ಲಿ ತುಸು ಹೆಚ್ಚು ಅನ್ನಬಹುದಾದಷ್ಟು ಸಂಖ್ಯೆಯಲ್ಲಿ ಮೋದಿ ಸಂಪುಟದ ಮಂತ್ರಿ ಗಳಾಗಿದ್ದವರು ಆಸು ನೀಗಿದ್ದಾರೆ.ಅದರಲ್ಲೂ ಕ್ಯಾನ್ಸರ್ ಪೀಡಿತರು ಬಹಳ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ತೀರಿಕೊಂಡ ಮೊದಲ ಸಂಪುಟ ಸದಸ್ಯ ಪರಿಸರ ಮಂತ್ರಿ ಆಗಿದ್ದ ಮಧ್ಯ ಪ್ರದೇಶದ ಅನಿಲ್ ಮಾಧವ್ ದವೆ. ಸಂಘದ ಹಿನ್ನೆಲೆ ಇದ್ದ ಅನಿಲ್ ದವೆ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡು ಅಧಿಕಾರ ದಲ್ಲಿದ್ದಾಗಲೇ ನಿಧನರಾದರು.

Tap to resize

Latest Videos

ತನ್ನ 60 ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡು ನಿಧನರಾದವರು ಬೆಂಗಳೂರಿನ ಸಂಸದರಾಗಿದ್ದ ಅನಂತ ಕುಮಾರ.ಬೆಂಗಳೂರು ದಿಲ್ಲಿ ಅಮೆರಿಕಾ ದಲ್ಲಿ ಚಿಕಿತ್ಸೆ ನೀಡಿದರು ಯಶಸ್ವಿ ಆಗದೇ ನವೆಂಬರ್ 12 2018 ರಂದು ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅನಂತ ಕುಮಾರ ಆಸು ನೀಗಿದರು.

'ಮೋದಿ ಕ್ಯಾಬಿನೆಟ್‌ನಲ್ಲಿ ಬಿಜೆಪಿಯೇತರ ಮಂತ್ರಿ ರಾಮದಾಸ್ ಅಠಾವಳೆ ಒಬ್ಬರೇ'

ನಂತರ ಬಿಜೆಪಿ ಗೆ ಬಿದ್ದ ದೊಡ್ಡ ಹೊಡೆತ ಅತ್ಯಂತ ಪ್ರಭಾವಿ ವಕ್ತಾರ ರಾಗಿ ಮೋದಿ ಸಂಪುಟದ ಮಂತ್ರಿ ಗಳಾಗಿದ್ದ ಸುಶ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ನಿಧನ. ಸುಶ್ಮಾ ಸ್ವರಾಜ್ ಮಧುಮೇಹ ಮತ್ತು   ಕಿಡ್ನಿ ವೈಫಲ್ಯ ದಿಂದ ಬಳಲಿ ನಿಧಾನರಾದರೆ ಅರುಣ್ ಜೇಟ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಆಸು ನೀಗಿದರು.ಅನಾರೋಗ್ಯದ ಕಾರಣದಿಂದ ಇಬ್ಬರು ಕೂಡ ಮೋದಿ 2 ಸರ್ಕಾರದಲ್ಲಿ ಮಂತ್ರಿ ಆಗಿರಲಿಲ್ಲ.

ಇನ್ನು ಪ್ಯಾಂಕ್ರಿಯಾ ಕ್ಯಾನ್ಸರ್ ದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಸಾವು ಕೂಡ ಅಷ್ಟೇ ಆಘಾತಕಾರಿ.ಗೋವಾ ದಲ್ಲಿ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಪರಿಕ್ಕರ ದಿಲ್ಲಿ ಅಮೆರಿಕ ದಲ್ಲಿ ಚಿಕಿತ್ಸೆ ಪಡೆದರು ಸಹಕಾರಿ ಆಗಲಿಲ್ಲ.

ಇನ್ನು ಕಳೆದ ತಿಂಗಳು ಕರೋನಾ ಕ್ಕೆ ಬಲಿಯಾದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರದು ಕೂಡ ದುರ್ದೈವಿ ಸಾವು.ಸೋಂಕು ತಗುಲಿದ ರು ಯಾವುದೇ ಲಕ್ಷಣಗಲಿಲ್ಲದೆ ಏಕಾಏಕಿ ಕೋಮಾಕ್ಕೆ ಹೋದ ಅಂಗಡಿ ಸಾಹೇಬರ ಪಾರ್ಥಿವ ವನ್ನು ದಿಲ್ಲಿಯಿಂದ ಬೆಳಗಾವಿ ಗೂ ತರಲಾಗಲಿಲ್ಲ.

ಇನ್ನು 3 ದಿನಗಳ ಹಿಂದಷ್ಟೇ ಆಸು ನೀಗಿದ ರಾಮ್ ವಿಲಾಸ ಪಾಸ್ವಾನ್ ಒಂದೆರಡು ವರ್ಷದಿಂದ ಅನಾರೋಗ್ಯಕ್ಕೆ ಈಡಾಗಿದ್ದರು.ಬಿಹಾರ ಚುನಾವಣೆಯ ತಯಾರಿ ಮಧ್ಯೆಯೇ ಪಾಸ್ವಾನ್ ನಿಧನ ರಾಗಿದ್ದು ಮೋದಿ ಸರ್ಕಾರಕ್ಕೆ ಆದ ಬಹು ದೊಡ್ಡ ಹೊಡೆತ.

- ಪ್ರಶಾಂತ್ ನಾತು, ದೆಹಲಿಯಿಂದ ಕಂಡ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!