ಕೊನೆಗೂ ಮಾಧುಸ್ವಾಮಿ ಬೇಡಿಕೆಗೆ ಅಸ್ತು ಎಂದ ಸಿಎಂ.. ಸೈನಿಕನಿಗೆ ಶಾಕ್!

Published : Jan 25, 2021, 10:05 PM ISTUpdated : Jan 25, 2021, 10:10 PM IST
ಕೊನೆಗೂ ಮಾಧುಸ್ವಾಮಿ ಬೇಡಿಕೆಗೆ ಅಸ್ತು ಎಂದ ಸಿಎಂ.. ಸೈನಿಕನಿಗೆ ಶಾಕ್!

ಸಾರಾಂಶ

ಸಚಿವ ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆ ಪ್ರಹಸನ/ 9 ದಿನದಲ್ಲಿ 4 ಬಾರಿ ಖಾತೆ ಬದಲಾವಣೆ/ ಮತ್ತೆ ಸುಧಾಕರ್ ಕೈ ಸೇರಿದ ವೈದ್ಯ ಶಿಕ್ಷಣ/ ಕೊನೆಗೂ ಮಾಧುಸ್ವಾಮಿ ಕೈಗೆ ಬಂದ ಸಣ್ಣ ನೀರಾವರಿ

ಬೆಂಗಳೂರು (ಜ. 25) ಮಾಧುಸ್ವಾಮಿ ರಾಜೀನಾಮೆ ವದಂತಿ ನಂತರ ಮತ್ತೆ ಸೋಮವಾರ ರಾತ್ರಿ ಖಾತೆ ಬದಲಾವಣೆ ಮಾಡಿರುವ ಸಿಎಂ ಯಡಿಯೂರಪ್ಪ ಸಣ್ಣ ನೀರಾವರಿ ಖಾತೆಯನ್ನು ಮಾಧುಸ್ವಾಮಿ ಅವರಿಗೆ  ನೀಡಿದ್ದಾರೆ

ರಾಜ್ಯದ ಸಚಿವ ಸಂಪುಟ ಪ್ರಹಸನಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಪದೇ ಪದೇ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕಾರಣದ ವಲಯದಲ್ಲಿ ಕೇಳಿ ಬಂದಿದ್ದವು.  ಈಗ ಮಾಧುಸ್ವಾಮಿ ಅವರಿಗೆ ಮರಳಿ ಹಳೆ ಖಾತೆ ಸಿಕ್ಕಿದೆ.

ಖಾತೆ ಬದಲಾವಣೆ ಪ್ರಹಸನ;  ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?

ಸಿಪಿ ಯೋಗೇಶ್ವರ ಬಳಿ ಇದ್ದ ಸಣ್ಣ ನೀರಾವರಿಯನ್ನು ಮಾಧುಸ್ವಾಮಿಗೆ  ನೀಡಲಾಗಿದ್ದು ಯೋಗೇಶ್ವರ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯನ್ನು ನೀಡಲಾಗಿದೆ.

ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಸಚಿವ ಸಂಪುಟ ಸಭೆಯಿಂದಲೇ ಜೆ.ಸಿ. ಮಾಧು ಸ್ವಾಮಿ ಹೊರಗೆ ಉಳಿದಿದ್ದರು.  ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿರುವ ಆನಂದ್ ಸಿಂಗ್ ಎಲ್ಲವೂ ಸರಿ  ಇದೆ ಎಂಬ ಮಾತುಗಳನ್ನು ಆಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!