ಬಜರಂಗದಳ ನಿಷೇಧದ ಕಾಂಗ್ರೆಸ್‌ ಪ್ರಣಾಳಿಕೆಗೆ ರಮ್ಯಾ ಆಕ್ಷೇಪ

By Kannadaprabha News  |  First Published May 7, 2023, 8:08 PM IST

ಯಾವುದೇ ಸಂಘಟನೆ ಬ್ಯಾನ್‌ ಸರಿಯಲ್ಲ, ದೇಶ ವಿರೋಧಿ ಆಗಿದ್ದರೆ ಕಾನೂನು ಕ್ರಮ ಕೈಗಳ್ಳಬೇಕು ಅಷ್ಟೇ, ಬಿಜೆಪಿ ಡಬಲ್‌ ಅಲ್ಲ, ಟ್ರಬಲ್‌ ಎಂಜಿನ್‌ ಸರ್ಕಾರ: ರಮ್ಯಾ 


ವಿಜಯಪುರ(ಮೇ.07):  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುವ ಕಾಂಗ್ರೆಸ್‌ ಪ್ರಣಾಳಿಕೆಗೆ ಮಂಡ್ಯದ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಆಕ್ಷೇಪವೆತ್ತಿದ್ದಾರೆ. ವಿಜಯಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಜರಂಗದಳ ನಿಷೇಧ ಕುರಿತು ಪ್ರತಿಕ್ರಿಯಿಸಿ, ದೇಶ ವಿರೋಧಿ ಕೃತ್ಯ ಎಸಗುವ ಯಾವುದೇ ಸಂಘಟನೆಯನ್ನು ಬ್ಯಾನ್‌ ಮಾಡುವುದು ಸರಿಯಲ್ಲ. ಇದು ತಮ್ಮ ವೈಯಕ್ತಿಕ ನಿಲುವೆಂದು ಸ್ಪಷ್ಟಪಡಿಸಿದರು.

ಬಜರಂಗದಳ ಅಷ್ಟೇ ಎಲ್ಲ ಯಾರೇ ಧಾರ್ಮಿಕ ಅರಾಜಕತೆ, ಧಾರ್ಮಿಕ ವಿರೋಧಿ ಹೇಳಿಕೆ ನೀಡಿದರೂ ಅಂಥವರ ಮೇಲೆ ಕಾನೂನು ಕ್ರಮವಾಗಬೇಕೇ ಹೊರತು ಸಂಘಟನೆಯನ್ನೇ ಸಂಪೂರ್ಣವಾಗಿ ಬ್ಯಾನ್‌ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಈ ಅಂಶಕ್ಕೆ ನಟಿ ರಮ್ಯಾ ವಿರೋಧ ವ್ಯಕ್ತಪಡಿಸಿದರು.

Tap to resize

Latest Videos

ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಿಸಲಿ: ಯತ್ನಾಳ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳಿಗೆ ಅವಕಾಶವಿದೆ. ಆದರೆ ಯಾರೇ ಶಾಂತಿ ಕದಡಿದರೂ ಅದರ ಮೇಲೆ ಕ್ರಮವಾಗಬೇಕು. ಧಾರ್ಮಿಕ ಭಾವನೆ ಕೆರಳಿಸುವ ವಿಷಯವಾಗಿ ಮಾತನಾಡಿದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದ ನಿರ್ದೇನವಿದೆ. ಹಾಗಾಗಿ ನನಗೆ ಈ ಬ್ಯಾನ್‌ ಅಂಶ ಸರಿ ಕಾಣುವುದಿಲ್ಲ ಎಂದು ಹೇಳಿದರು.

ಟ್ರಬಲ್‌ ಎಂಜಿನ ಸರ್ಕಾರ:

ಬಿಜೆಪಿ ಸರ್ಕಾರ ಡಬಲ್‌ ಎಂಜಿನ್‌ ಸರ್ಕಾರವಲ್ಲ. ಇದು ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಲೇವಡಿ ಮಾಡಿದ ಮಾಜಿ ಸಂಸದೆ ರಮ್ಯಾ, ಡಬಲ್‌ ಎಂಜಿನ್‌ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಇದು ಟ್ರಬಲ್‌ ಎಂಜಿನ್‌ ಸರ್ಕಾರವಾಗಿದೆ. ಇದು 40 ಪಸೆÜರ್‍ಂಟೇಜ್‌ ಸರ್ಕಾರ ಎಂಬ ಹಣೆಪಟ್ಟಿಕಟ್ಟಿಕೊಂಡಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಎಲ್ಲ ನಾಯಕರು ರಾಜ್ಯದಲ್ಲಿಯೇ ಬೀಡು ಬಿಟ್ಟು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸುಮಲತಾ ಅವರು ಬಿಜೆಪಿ ಬೆಂಬಲಿಸಿದ ಕುರಿತು ನಾನು ಯಾವುದೇ ಕಾಮೆಂಟ್‌ ಮಾಡಲ್ಲ ಎಂದು ರಮ್ಯಾ, ಈ ಹಿಂದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲ ಅವರು ನನ್ನ ಪರ ಪ್ರಚಾರಕ್ಕೆ ಬಂದು ಗೆಲುವಿಗೆ ಶ್ರಮಿಸಿದ್ದರು. ಎಂ.ಬಿ.ಪಾಟೀಲ ಒಬ್ಬ ಉತ್ತಮ ರಾಜಕಾರಣಿ ಆಗಿದ್ದಾರೆ. ಹಾಗಾಗಿ ನಾನು ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಕ್ಷೇತ್ರದ ಜನರು ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಗೂಂಡಾ ಸಂಸ್ಕೃತಿ ಬೇಡ:

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುತ್ರ ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯಗಳು ಮೈ ಜುಂ ಎನಿಸುವಂತಹದ್ದು, ಇದನ್ನು ನೋಡಿ ನನಗೆ ಶಾಕ್‌ ಆಯಿತು. ಗೂಂಡಾ ಸಂಸ್ಕೃತಿಗೆ ಅವಕಾಶವಿರಬಾರದು. ನಮ್ಮ ಮಕ್ಕಳಿಗೆ ಬಂದೂಕು ಬೇಡ, ಪುಸ್ತಕ ಬೇಕಾಗಿದೆ ಎಂದು ತಿಳಿಸಿದರು.

ಆಂಜನೇಯನನ್ನು ಕೆಣಕಿ ತಪ್ಪು ಮಾಡಿದ ಕಾಂಗ್ರೆಸ್‌: ಶೃತಿ

ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಪಾಟೀಲರ ಪತ್ನಿ ಆಶಾ ಪಾಟೀಲ, ಬಿಎಲ್‌ಡಿಇ ಸಂಸ್ಥೆ ನಿರ್ದೇಶಕ ಬಸನಗೌಡ (ರಾಹುಲ್‌) ಪಾಟೀಲ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಭಾಗೀರಥಿ ತೇಲಿ ಮುಂತಾದವರು ಉಪಸ್ಥಿತರಿದ್ದರು.

ಸಕ್ರಿಯ ರಾಜಕಾರಣಕ್ಕೆ ಯೋಚಿಸಿಲ್ಲ

ಸಕ್ರಿಯ ರಾಜಕಾರಣ ಪ್ರವೇಶಿಸುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಈಗ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕಿಯಾಗಿ ಪ್ರಚಾರದಲ್ಲಿ ತೊಡಗಿದ್ದೇನೆ ಅಷ್ಟೇ ಎಂದು ಚಿತ್ರನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಹೇಳಿದರು. ಅನಾರೋಗ್ಯ ಕಾರಣದಿಂದಾಗಿ ಎಐಸಿಸಿ ಸೋಷಿಯಲ್‌ ಮೀಡಿಯಾ ಜವಾಬ್ದಾರಿ, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಈಗ ಸಂಪೂರ್ಣ ಆರೋಗ್ಯವಾಗಿದ್ದೇನೆ. ಆದರೆ, ಪುನಃ ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದರು. ಮಂಡ್ಯ, ನಂಜನಗೂಡು, ವರುಣಾ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡಿದ್ದೇನೆ. ವಿಜಯಪುರದಲ್ಲಿ ಬಬಲೇಶ್ವರ ಕ್ಷೇತ್ರದ ಜಾಲಗೇರಿ, ತಿಕೋಟಾ ಹಾಗೂ ಬಬಲೇಶ್ವರದಲ್ಲಿ ರೋಡ್‌ ಶೋ ಮಾಡಿದ್ದೇನೆ. ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲ ಪರವಾದ ಅಲೆ ಇದೆ. ನಾಳೆ ಮುಧೋಳದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಒಳ್ಳೇ ಹುಡುಗ ಸಿಕ್ರೆ ಮದುವೆ ಆಗ್ತೇನೆ:

ಉತ್ತಮ, ಒಳ್ಳೇ ಹುಡುಗ ಸಿಕ್ಕರೆ ಮದುವೆ ಆಗುವ ಆಲೋಚನೆ ಇದೆ. ಗೌಡ್ರ ಹುಡುಗನೇ ಆಗಬೇಕು ಎಂದೇನೂ ಇಲ್ಲ! ಎಂದು ರಮ್ಯಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!