ಅಮಿತ್ ಶಾ ಮನೆಗೆ ಬಂದಿದ್ದರು, ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟ ವಿ.ಸೋಮಣ್ಣ

By Gowthami KFirst Published May 7, 2023, 6:26 PM IST
Highlights

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಅಮಿತ್ ಶಾ ಮನೆಗೆ ಬಂದು ಟಾಸ್ಕ್ ನೀಡಿದ್ದರು. ಮಗನಿಗೆ ಟಿಕೆಟ್ ಕೊಟ್ಟು ಬಿಡಿ ಅಂತ ಕೇಳಿಕೊಂಡೆ ಆದರೆ ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು ಎಂದಿದ್ದಾರೆ.

ಮೈಸೂರು (ಮೇ.7): ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.  ಅಮಿತ್ ಶಾ ಮನೆಗೆ ಬಂದು ಟಾಸ್ಕ್ ನೀಡಿದ್ದರು. ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿ.ಎಲ್.ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ. ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅಮಿತ್ ಶಾ ನನ್ನ ಮನೆಗೆ ಬಂದರು. ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು. ಅದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು. ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟು ಬಿಡಿ ಅಂತ ಕೇಳಿಕೊಂಡೆ. ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು. ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ. ಎಂದು ಮೈಸೂರಿನಲ್ಲಿ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಈ ಮೂಲಕ ವರುಣ ದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಹಠ ತೊಟ್ಟಿದೆ.

ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿ.ಸೋಮಣ್ಣ  ಟಾಂಗ್ ಕೊಟ್ಟಿದ್ದಾರೆ. ವರುಣವನ್ನು ತಾಲೂಕು ಮಾಡಿಲ್ಲ. ಒಂದು ಪಟ್ಟಣ ಪಂಚಾಯಿತಿ ಮಾಡಿಲ್ಲ.  ಆದರೂ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, 14 ಬಜೆಟ್ ಮಾಡಿದ್ದೀರಿ. ನೀವು ಏನೂ ಮಾಡಿಲ್ಲ. ಆದರೂ ಇಷ್ಟೆಲ್ಲ ಸಿಕ್ಕಿದೆ. ದೇವರ ಕೈಯಲ್ಲಿ ಬರೆಸಿಕೊಂಡು ಬಂದವರು ಯಾರೂ ಇಲ್ಲ. ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ‌. ನಿಮ್ಮ ಕಾರ್ಯವೈಖರಿ ನಿಮಗೆ ತೃಪ್ತಿಯಾಗಿದೆಯೇ ಹೇಳಿ? ನಿಮಗೆ ಚಾಲೆಂಜ್ ಮಾಡಲ್ಲ, ಮನವಿ ಮಾಡುತ್ತೇನೆ. ವರುಣ ಕ್ಷೇತ್ರಕ್ಕೆ ಹೋಗೋಣ ಬನ್ನಿ. ಏನಾಗಬೇಕಿತ್ತು ನೋಡೋಣ ಬನ್ನಿ. ರಾತ್ರಿ 1 ಗಂಟೆಗೆ ಮಲಗುತ್ತೇನೆ, ಬೆಳಗ್ಗೆ 4.30ಕ್ಕೆ ಏಳುತ್ತೇನೆ. ನನ್ನಷ್ಟು ಜನರ ಹತ್ತಿರಕ್ಕೆ ಹೋಗುವ ರಾಜಕಾರಣಿ ಯಾರೂ ಇಲ್ಲ. ಇದನ್ನು ನಾನು ಅಹಂಕಾರದಿಂದ ಹೇಳಿಕೊಳ್ಳುತ್ತೇನೆ ಅಂದುಕೋಬೇಡಿ ಎಂದಿದ್ದಾರೆ.

Latest Videos

ಸೋಮಣ್ಣ ಮನೆ ಕೊಟ್ಟಿಲ್ಲ ಸಿದ್ದರಾಮಯ್ಯ ಆರೋಪ‌ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅದೃಷ್ಟದ ರಾಜಕಾರಣಿ ಎಂದು ಸಂವಾದದಲ್ಲಿ ವಿ ಸೋಮಣ್ಣ ಹೇಳಿ ನೀಡಿದ್ದಾರೆ. ಅದೃಷ್ಟ ಇದೆ ಅಂತಾ ಬಂಡೆಗೆ ತಲೆ‌ ಚಚ್ಚಿಕೊಳ್ಳುತ್ತಿದ್ದೀರಾ. ಈಗ ನಿಮಗೆ ಕಾಲ‌ ಬಂದಿದೆ. ತಾವು ಕೊಟ್ಟಿರುವ ಮನೆಗಳ ವಿವರ ನೀಡಿದ ವಿ ಸೋಮಣ್ಣ‌. ಹಿಂದೆ ನನ್ನನ್ನು ಸಿದ್ದರಾಮಯ್ಯ ಅವರೇ ಹೊಗಳಿದ್ದರು. ಈಗ ಏನು ಮರೆವಾ ? ಅಥವಾ ಗಿಲ್ಟಾ ? ಬೇರೆಯವರನ್ನು ಹೊಗಳಬಾರದು ಅನ್ನೋದಾ ? ಸಿದ್ದರಾಮಯ್ಯಗೆ ವಿ ಸೋಮಣ್ಣ ಪ್ರಶ್ನೆ ಕೇಳಿದ್ದಾರೆ.

ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯ್ತು: ಪ್ರಿಯಾಂಕ್ ಖರ್ಗೆ

ಇನ್ನೊಬ್ಬರ ಕೆಲಸವನ್ನು ಗೌರವಿಸಿ. ಅದು ಕಾಮನಸೆನ್ಸ್, ನಾಯಕತ್ವದ ಗುಣ ಲಕ್ಷಣ. ಭ್ರಷ್ಟಾಚಾರದ ಆರೋಪ ವಿಚಾರ. ನಾನು ಸಿದ್ದರಾಮಯ್ಯ ಜೊತೆ ಕುಳಿತು ಚರ್ಚೆ ಮಾಡಲು ಸಿದ್ದ. ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಕಡೆಗಣಿಸಿದ್ದಾರೆ. ಸಿದ್ದರಾಮಯ್ಯ ಗೋವಿಂದರಾಜನಗರಕ್ಕೆ ಹೋಗಿ ನೋಡಿಕೊಂಡು ಬರಲಿ. ರಾಜಕಾರಣ ಯಾರು ಬೇಕಾದರೂ ಮಾಡಬಹುದು‌. ಮತದಾರರಿಗೆ ಜಾತಿ ಬೇಧ ಬೇರೆ ಏನು ಬೇಡ ಅಭಿವೃದ್ಧಿ ಬೇಕು‌‌. ವರುಣ ಕ್ಷೇತ್ರದ ರಸ್ತೆಗಳನ್ನು ನೋಡಿದರೆ ದಿಗಿಲಾಗುತ್ತದೆ. ನಮ್ಮ ನಾಯಕರು ನನ್ನನ್ನು ಕಳುಹಿಸಿದ್ದಾರೆ. ಗೋವಿಂದರಾಜನಗರದಂತೆ ವರುಣ ಮಾಡಲು ಕಳುಹಿಸಿದ್ದಾರೆ‌. ಕ್ಷೇತ್ರದ ಜನರ ಜೊತೆ ಕುಳಿತು ಮಾತನಾಡಿದ್ದೀರಾ ? ನಿಮ್ಮದೇ ಆದ ಪಾಳೇಗಾರಿಕೆ, ನಿಮ್ಮದೆ ಆದ ಗುತ್ತಿಗೆದಾರರು. ನಾನು ನಿಮ್ಮ ಸ್ನೇಹಿತನೇ. ಆದರೆ ನಾನು ಹೇಡಿ ಅಲ್ಲ ನಾನು ಕಿಲಾಡಿ ಎಂದಿದ್ದಾರೆ.

ಚುನಾವಣೆ ಸಂದರ್ಭದಲ್ಲೇ ಮಾಜಿ‌ ಶಾಸಕನ ಮನೆ ಭರ್ಜರಿ ದರೋಡೆ, ಬಂದೂಕು ಮಚ್ಚು ಹಿಡಿದು

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!