ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ: ವಿ ಸೋಮಣ್ಣ!

By Gowthami KFirst Published May 7, 2023, 6:50 PM IST
Highlights

ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ. ವಸತಿ ಖಾತೆ ಏನೋ ಮಂತ್ರಿ ಕೊಡಬೇಕು ಅಂತ ಮಾಡಿಕೊಂಡಿರುವ ವ್ಯವಸ್ಥೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮೈಸೂರು (ಮೇ.7): ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ. ವಸತಿ ಖಾತೆ ಏನೋ ಮಂತ್ರಿ ಕೊಡಬೇಕು ಅಂತ ಮಾಡಿಕೊಂಡಿರುವ ವ್ಯವಸ್ಥೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಆದರೂ ಸಿದ್ದರಾಮಯ್ಯ ನನ್ನ ಮೇಲೆ ದೂರುತ್ತಾರೆ. ಒಂದೇ ಒಂದು ಮನೆ ಕೊಟ್ಟಿಲ್ಲ ಅಂತಾರೆ. ಈ ಮೂರೂವರೆ ವರ್ಷದಲ್ಲಿ ವರುಣಕ್ಕೆ 4045 ಮನೆ ಕೊಟ್ಟಿದ್ದೇನೆ. ಹೊಸಕೋಟೆ ಸಮೀಪದ ಗ್ರಾಮದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾರ್ಯಕ್ರಮ ಆಗಿತ್ತು. ಆಗ 8000 ಮನೆಗಳನ್ನು ಹಂಚಿಕೆ ಮಾಡಿದ್ದೆವು‌. ಆಗ ಇದೇ ಸಿದ್ದರಾಮಯ್ಯ ನನ್ನನ್ನು ಹೊಗಳಿದ್ದಾರೆ. ನಿಮಗೆ ಜಾಣ ಕುರುಡುತನವೇ ಅಥವಾ ಬೇರೆಯವರ ಕೆಲಸ ಹೊಗಳಬೇಕು ಅಂತ ಬೇರೆ ಥರ ಮಾತನಾಡುತ್ತಿದ್ದೀರಾ? ವರುಣದಲ್ಲಿ ಶಾಲೆ, ಆಸ್ಪತ್ರೆ, ಕಾಲೇಜು, ರಸ್ತೆ ಏನೂ ಇಲ್ಲ. ನಾಲ್ಕು ಜನದ ಪಟಾಲಮ್ಮು ಬಿಟ್ಟು ಹೊರಬನ್ನಿ. ನಾನು, ನೀವು ಎಲ್ಲರೂ ಒಂದು ಕಡೆ ಇದ್ದು ಬಿಡೋಣ. 8, 9ರಂದು ಎರಡು ರಾತ್ರಿ ಸುಮ್ಮನೆ ಇದ್ದು ಬಿಡೋಣ. ಯಾರೂ ಹೋಗೋದು ಬೇಡ. ಚುನಾವಣೆ ಜನರಿಗೆ ಬಿಡೋಣ. ಯಾರು ಗೆಲ್ಲುತ್ತಾರೆ ಅಂತ ನೋಡೋಣ ಎಂದು ಮೈಸೂರಿನಲ್ಲಿ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಸೋಮಣ್ಣ ಮನೆ ಕೊಟ್ಟಿಲ್ಲ ಸಿದ್ದರಾಮಯ್ಯ ಆರೋಪ‌ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅದೃಷ್ಟದ ರಾಜಕಾರಣಿ ಎಂದು ಸಂವಾದದಲ್ಲಿ ವಿ ಸೋಮಣ್ಣ ಹೇಳಿ ನೀಡಿದ್ದಾರೆ. ಅದೃಷ್ಟ ಇದೆ ಅಂತಾ ಬಂಡೆಗೆ ತಲೆ‌ ಚಚ್ಚಿಕೊಳ್ಳುತ್ತಿದ್ದೀರಾ. ಈಗ ನಿಮಗೆ ಕಾಲ‌ ಬಂದಿದೆ. ತಾವು ಕೊಟ್ಟಿರುವ ಮನೆಗಳ ವಿವರ ನೀಡಿದ ವಿ ಸೋಮಣ್ಣ‌. ಹಿಂದೆ ನನ್ನನ್ನು ಸಿದ್ದರಾಮಯ್ಯ ಅವರೇ ಹೊಗಳಿದ್ದರು. ಈಗ ಏನು ಮರೆವಾ ? ಅಥವಾ ಗಿಲ್ಟಾ ? ಬೇರೆಯವರನ್ನು ಹೊಗಳಬಾರದು ಅನ್ನೋದಾ ? ಸಿದ್ದರಾಮಯ್ಯಗೆ ವಿ ಸೋಮಣ್ಣ ಪ್ರಶ್ನೆ ಕೇಳಿದ್ದಾರೆ.

Latest Videos

ಇನ್ನೊಬ್ಬರ ಕೆಲಸವನ್ನು ಗೌರವಿಸಿ. ಅದು ಕಾಮನಸೆನ್ಸ್, ನಾಯಕತ್ವದ ಗುಣ ಲಕ್ಷಣ. ಭ್ರಷ್ಟಾಚಾರದ ಆರೋಪ ವಿಚಾರ. ನಾನು ಸಿದ್ದರಾಮಯ್ಯ ಜೊತೆ ಕುಳಿತು ಚರ್ಚೆ ಮಾಡಲು ಸಿದ್ದ. ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಕಡೆಗಣಿಸಿದ್ದಾರೆ. ಸಿದ್ದರಾಮಯ್ಯ ಗೋವಿಂದರಾಜನಗರಕ್ಕೆ ಹೋಗಿ ನೋಡಿಕೊಂಡು ಬರಲಿ. ರಾಜಕಾರಣ ಯಾರು ಬೇಕಾದರೂ ಮಾಡಬಹುದು‌. ಮತದಾರರಿಗೆ ಜಾತಿ ಬೇಧ ಬೇರೆ ಏನು ಬೇಡ ಅಭಿವೃದ್ಧಿ ಬೇಕು‌‌. ವರುಣ ಕ್ಷೇತ್ರದ ರಸ್ತೆಗಳನ್ನು ನೋಡಿದರೆ ದಿಗಿಲಾಗುತ್ತದೆ. ನಮ್ಮ ನಾಯಕರು ನನ್ನನ್ನು ಕಳುಹಿಸಿದ್ದಾರೆ. ಗೋವಿಂದರಾಜನಗರದಂತೆ ವರುಣ ಮಾಡಲು ಕಳುಹಿಸಿದ್ದಾರೆ‌. ಕ್ಷೇತ್ರದ ಜನರ ಜೊತೆ ಕುಳಿತು ಮಾತನಾಡಿದ್ದೀರಾ ? ನಿಮ್ಮದೇ ಆದ ಪಾಳೇಗಾರಿಕೆ, ನಿಮ್ಮದೆ ಆದ ಗುತ್ತಿಗೆದಾರರು. ನಾನು ನಿಮ್ಮ ಸ್ನೇಹಿತನೇ. ಆದರೆ ನಾನು ಹೇಡಿ ಅಲ್ಲ ನಾನು ಕಿಲಾಡಿ ಎಂದಿದ್ದಾರೆ.

ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿ.ಸೋಮಣ್ಣ  ಟಾಂಗ್ ಕೊಟ್ಟಿದ್ದಾರೆ. ವರುಣವನ್ನು ತಾಲೂಕು ಮಾಡಿಲ್ಲ. ಒಂದು ಪಟ್ಟಣ ಪಂಚಾಯಿತಿ ಮಾಡಿಲ್ಲ.  ಆದರೂ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, 14 ಬಜೆಟ್ ಮಾಡಿದ್ದೀರಿ. ನೀವು ಏನೂ ಮಾಡಿಲ್ಲ. ಆದರೂ ಇಷ್ಟೆಲ್ಲ ಸಿಕ್ಕಿದೆ. ದೇವರ ಕೈಯಲ್ಲಿ ಬರೆಸಿಕೊಂಡು ಬಂದವರು ಯಾರೂ ಇಲ್ಲ. ನಿಮ್ಮಷ್ಟು ಅದೃಷ್ಟವಂತ ಯಾರೂ ಇಲ್ಲ‌. ನಿಮ್ಮ ಕಾರ್ಯವೈಖರಿ ನಿಮಗೆ ತೃಪ್ತಿಯಾಗಿದೆಯೇ ಹೇಳಿ? ನಿಮಗೆ ಚಾಲೆಂಜ್ ಮಾಡಲ್ಲ, ಮನವಿ ಮಾಡುತ್ತೇನೆ. ವರುಣ ಕ್ಷೇತ್ರಕ್ಕೆ ಹೋಗೋಣ ಬನ್ನಿ. ಏನಾಗಬೇಕಿತ್ತು ನೋಡೋಣ ಬನ್ನಿ. ರಾತ್ರಿ 1 ಗಂಟೆಗೆ ಮಲಗುತ್ತೇನೆ, ಬೆಳಗ್ಗೆ 4.30ಕ್ಕೆ ಏಳುತ್ತೇನೆ. ನನ್ನಷ್ಟು ಜನರ ಹತ್ತಿರಕ್ಕೆ ಹೋಗುವ ರಾಜಕಾರಣಿ ಯಾರೂ ಇಲ್ಲ. ಇದನ್ನು ನಾನು ಅಹಂಕಾರದಿಂದ ಹೇಳಿಕೊಳ್ಳುತ್ತೇನೆ ಅಂದುಕೋಬೇಡಿ ಎಂದಿದ್ದಾರೆ.

ಮೀಸಲಾತಿ ಕಿತ್ತು ಹಾಕುವ ವಿಚಾರ‌ಕ್ಕೆ ಮಾತನಾಡಿ, ಏಕೆ ಕಿತ್ತು ಹಾಕುತ್ತೀರಾ ? ಲಿಂಗಾಯತರು ಒಕ್ಕಲಿಗರನ್ನು ಮುಟ್ಟಲು ಆಗುತ್ತಾ ? ಎಸ್ ಸಿ ಎಸ್ ಟಿಯನ್ನು ಮುಟ್ಟಲು ಆಗುತ್ತಾ ? ಉಡಾಫೆಯಿಂದ ಎಲ್ಲೋ‌ ಇದ್ದು ಬಿಟ್ಟು ಎಂದಿದ್ದಾರೆ. ಕ್ಷಮೆ ಕೋರಿದ ಬಗ್ಗೆಯೂ ಸೋಮಣ್ಣ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಕೊಟ್ಟಿರುವ ತೊಂದರೆ ಜನ ನೋಡುತ್ತಾರೆ‌. ನಾನೊಬ್ಬ ಕಾರ್ಯಕರ್ತ ಅಷ್ಟೇ‌ ಎಂದರು. ಸಿದ್ದರಾಮಯ್ಯ ಪ್ರಚಾರದಲ್ಲಿ ಬಸವಣ್ಣನವರ ಬಾವುಟ ವಿಚಾರ. ಇದು ಯಾವಾಗಿನಿಂದಾ ಶುರುವಾಯಿತು? ಇದು ಯಾವ ಚುನಾವಣಾ ತಂತ್ರ? ಕಾಂಗ್ರೆಸ್ ಸಭೆಯಲ್ಲಿ ಯಾವತ್ತು ಬಸವಣ್ಣನವರ ಬಾವುಟ ಇರುತಿತ್ತು‌ ಎಂದು ಹೇಳಿದ್ದಾರೆ.

ಮೋದಿಯವರು ಪೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯ್ತು: ಪ್ರಿಯಾಂಕ್ ಖರ್ಗೆ

ಶಿವರಾಜ್ ಕುಮಾರ್ ರಾಜ್ ಕುಟುಂಬದ ಬಗ್ಗೆ ಗೌರವ ಇದೆ‌‌. ಆದರೆ ದುನಿಯಾ ವಿಜಿ, ಲೂಸ್ ಮಾದ, ರಮ್ಯಮ್ಮ ಇವರೆಲ್ಲಾ ಏಕೆ? ಪ್ರಚಾರಕ್ಕೆ ಬರುವುದಿಲ್ಲ ಅಂದಿರಿ? ನಿಮಗೆ ಸೋಲಿನ ಭಯ ಕಾಡುತ್ತಿದೆ ಅನ್ನುವುದಕ್ಕಿಂತ ನೀವು ವರುಣ ಜನರಿಗೆ ಏನು ಮಾಡಿಲ್ಲ‌. ಅದಕ್ಕಾಗಿ‌ ಎಲ್ಲರನ್ನೂ ಕರೆದು ತರುತ್ತಿದ್ದೀರಾ? ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನನಗೆ ಅವಕಾಶ ಕೊಡಿ ಎಂದು ಸಂವಾದದಲ್ಲಿ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಅಮಿತ್ ಶಾ ಮನೆಗೆ ಬಂದಿದ್ದರು, ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟ ವಿ.ಸೋಮಣ್ಣ

 ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟ ವಿ.ಸೋಮಣ್ಣ 
ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವರುಣ ಸ್ಪರ್ಧೆಯ ಗುಟ್ಟು ಬಿಚ್ಚಿಟ್ಟಿದ್ದಾರೆ.  ಅಮಿತ್ ಶಾ ಮನೆಗೆ ಬಂದು ಟಾಸ್ಕ್ ನೀಡಿದ್ದರು. ಶಾ ಮನೆಗೆ ಬರುವುದಾಗಿ ಹೇಳಿದ್ದರು. ಬಿ.ಎಲ್.ಸಂತೋಷ್ ಅವರಿಗೆ ಕರೆ ಮಾಡಿ ಬೇಡ, ನಾನೇ ಬರುತ್ತೇನೆ ಅಂದೆ. ಆದಿಚುಂಚನಗಿರಿ ಮಠಕ್ಕೆ ಬರುತ್ತಾರೆ. ಅಲ್ಲಿಂದ ನಿಮ್ಮ ಮನೆಗೆ ಬಂದು ಟೀ ಕುಡಿದು ಹೋಗುತ್ತಾರೆ ಅಂದರು. ಅಮಿತ್ ಶಾ ನನ್ನ ಮನೆಗೆ ಬಂದರು. ಚೀಟಿ ತೆಗೆದು ನಾಲ್ಕೈದು ಪ್ರಶ್ನೆ ಕೇಳಿದ್ದರು. ಅದಾದ 8-12 ನಿಮಿಷದಲ್ಲಿ ದೆಹಲಿಗೆ ಬುಲಾವ್ ಬಂತು. ಅಲ್ಲಿ ದೊಡ್ಡವರನ್ನು ಭೇಟಿ ಮಾಡಿಸಿದರು. ಮಗನಿಗೆ ಟಿಕೆಟ್ ಕೊಟ್ಟು ಬಿಡಿ ಅಂತ ಕೇಳಿಕೊಂಡೆ. ನೀನು ಹೋಗಿ ನಿಲ್ಲಬೇಕು ಅಂತ ಸೂಚನೆ ನೀಡಿದರು. ಇದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ. ಬಿನ್ನಿಪೇಟೆ, ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ವರುಣ, ಚಾಮರಾಜನಗರದ ಹಳ್ಳಿಹಳ್ಳಿ ಸುತ್ತಿದ್ದೇನೆ. ಎಂದು ಮೈಸೂರಿನಲ್ಲಿ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

click me!