ಘಟನೆ ಬಳಿಕ ಶಾಸಕರ ಬಳಿಗೆ ವೈದ್ಯರು ಬೇರೆ ಹೋಗಿ ಕೂದಲು ಸುಟ್ಟು ಹೋಗಿದೆ ಎನ್ನುತ್ತಾರೆ. ಆದರೆ ಶಾಸಕರನ್ನು ಸಿ.ಟಿ.ರವಿ ಭೇಟಿ ಮಾಡಲು ಬಂದಾಗ ಶಾಸಕರ ಕೂದಲು ಹಾಗೇ ಇದೆ. ಹಾಗಾದರೆ ಅವರು ವಿಗ್ ಹಾಕಿಕೊಂಡು ಹೊರಗೆ ಬಂದರೇ ಎಂದು ಪ್ರಶ್ನಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್
ಬೆಂಗಳೂರು(ಡಿ.29): ‘ಆ್ಯಸಿಡ್ ದಾಳಿ ಎಂದು ಕೆಲವರು ಕೂಗಿದ ಕೂಡಲೇ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಬೀಳುತ್ತದೆ. ಹೀಗಾಗಿ ಇದರ ಕತೆ, ಚಿತ್ರಕತೆ, ನಿರ್ದೇಶನ ಎಲ್ಲವೂ ಸಿನಿಮಾ ಕ್ಷೇತ್ರದಲ್ಲಿರುವ ಈ ಶಾಸಕರದ್ದೇ ಎಂಬುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಹಾಗೂ ವಿಧಾನಸೌಧದಲ್ಲಿ ನಡೆದ ಅತ್ಯಾಚಾರದ ಬಗ್ಗೆಯೂ ಸಿಬಿಐ ತನಿಖೆಗೆ ನಾನು ಆಗ್ರಹಿಸುತ್ತೇನೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಘಟನೆ ಬಳಿಕ ಶಾಸಕರ ಬಳಿಗೆ ವೈದ್ಯರು ಬೇರೆ ಹೋಗಿ ಕೂದಲು ಸುಟ್ಟು ಹೋಗಿದೆ ಎನ್ನುತ್ತಾರೆ. ಆದರೆ ಶಾಸಕರನ್ನು ಸಿ.ಟಿ.ರವಿ ಭೇಟಿ ಮಾಡಲು ಬಂದಾಗ ಶಾಸಕರ ಕೂದಲು ಹಾಗೇ ಇದೆ. ಹಾಗಾದರೆ ಅವರು ವಿಗ್ ಹಾಕಿಕೊಂಡು ಹೊರಗೆ ಬಂದರೇ ಎಂದು ಪ್ರಶ್ನಿಸಿದರು.
undefined
ಮುನಿರತ್ನ ರೇಪ್, ಏಡ್ಸ್‌ಟ್ರ್ಯಾಪ್ ನಿಜ: ಎಸ್‌ಐಟಿ ಚಾರ್ಜ್‌ಶೀಟ್
ಶಾಸಕ ಮುನಿರತ್ನ ನನ್ನ ಮೇಲೆ, ಡಿ.ಕೆ.ಶಿವಕುಮಾರ್, ಕುಸುಮಾ ಹಾಗೂ ಹನುಮಂತರಾಯಪ್ಪ ಮೇಲೆ ಆ್ಯಸಿಡ್ ಮೊಟ್ಟೆ ದಾಳಿ ಆರೋಪ ಮಾಡಿದ್ದಾರೆ. ನಾನು ಆ ವೀಡಿಯೋ ಪೂರ್ತಿ ನೋಡಿದ್ದೇನೆ. ಅವರು ಆ್ಯಸಿಡ್ ದಾಳಿ ಎಂದ ಕೂಡಲೇ ಮೊಟ್ಟೆ ಬೀಳುತ್ತದೆ.
ಇವರು ಮೊದಲೇ ನಿರ್ಮಾಪಕ. ಕತೆ, ಚಿತ್ರಕತೆ ಕೂಡ ಬರೆಯುತ್ತೇನೆ ಎಂದು ಹಿಂದೆ ಹೇಳಿದ್ದರು. ಇದೀಗ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ತಾನೇ ಒಳ್ಳೆಯ ನಟನೆ ಮಾಡಿದ್ದಾರೆ. ವೈದ್ಯರೊಬ್ಬರು ಬೇರೆ ಅಲ್ಲಿಗೆ ಹೋಗಿ ಕೂದಲು ಸುಟ್ಟಿದೆ ಎಂದು ಹೇಳುತ್ತಾರೆ. ಸಿಟಿ ಸ್ಕ್ಯಾನ್‌ಗೆ ಸಲಹೆ ನೀಡುತ್ತಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಪರೋಕ್ಷವಾಗಿ ಡಾ.ಸಿ.ಎನ್.ಮಂಜುನಾಥ್ ವಿರುದ್ಧವೂ ಕಿಡಿ ಕಾರಿದರು.
ಅತ್ಯಾಚಾರ ಬಗ್ಗೆಯೂ ತನಿಖೆಯಾಗಲಿ: ಸದನದಲ್ಲಿ ಮಹಿಳಾ ಸಚಿವೆಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿದ ವ್ಯಕ್ತಿ ಸಿ.ಟಿ.ರವಿ. ಅವರು ಮುನಿರತ್ನ ಬಳಿಗೆ ಹೋಗಿ ಸಂತೈಸುತ್ತಾರೆ. ಒಬ್ಬರು ಸದನದಲ್ಲಿ ನಿಂದಿಸಿದವರು, ಮತ್ತೊಬ್ಬರು ವಿಧಾನಸೌಧದಲ್ಲೇ ಅತ್ಯಾಚಾರ ಮಾಡುತ್ತಾರೆ ಎಂದರು.
ಶಾಸಕ ಮುನಿರತ್ನ ನೆತ್ತಿಗೆ ತತ್ತಿ: ಮೂವರು ಕಾಂಗ್ರೆಸ್ಸಿಗರ ಬಂಧನ
ಸಿ.ಟಿ.ರವಿ ಅವರಿಗೆ ತಾಯಿ ನೆನಪಾಗಿಲ್ಲ ಅಂತ ಕಾಣಿಸುತ್ತದೆ. ಮುನಿರತ್ನ ಒಕ್ಕಲಿಗ ತಾಯಂದಿರನ್ನು ಯಾವರೀತಿ ಕರೆದಿದ್ದಾರೆ. ದಲಿತ ಹೆಣ್ಣುಮಕ್ಕಳನ್ನು ಮಂಚಕ್ಕೆ ಯಾವರೀತಿ ಕರೆದಿದ್ದಾರೆ ಎಂಬುದನ್ನು ಸಿ.ಟಿ. ರವಿ ಮರೆತಿದ್ದಾರೆ. ಇದೆಲ್ಲವನ್ನೂ ಮಾಧ್ಯಮದವರು ತೋರಿಸಬೇಕು ಎಂದರು.
ನಾನು ಕೊರಂಗು ಮುನಿರತ್ನ ನಿಮ್ಮ ತಮ್ಮ ಎಂದಿಲ್ಲ. ನಾನು ಮಾತಾಡಬಾರದು ಎಂದಿದ್ದೆ ಶಾಸಕರು ಮಾತನಾಡುವಂತೆ ಉತ್ತೇಜನ ಕೊಟ್ಟಿದ್ದಾರೆ. ನಿಮ್ಮ ಯೋಗ್ಯತೆ ಏನು ಎಂಬುದು ಲೋಕಾಯುಕ್ತದಲ್ಲಿದೆ. ಇನ್ನೂ ಏನಾದರೂ ಮಾತನಾಡಬೇಕು ಅಂದರೆ ಮಾತನಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.