ಬಿಜೆಪಿ ಸರ್ಕಾರದ ತಮ್ಮ ಅವಧಿಯ ಅಭಿವೃದ್ಧಿ ಕಾಮಗಾರಿಗಳನ್ನು ನಾನು ಮಾಡಿದ್ದು ಎಂದು ಮತದಾರರ ಬಳಿ ಬಿಂಬಿಸುವ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ದಾಖಲೆಗಳನ್ನು ಹಿಡಿದು ತಾಕತ್ತು ಇದ್ದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ ಸವಾಲು ಹಾಕಿದ್ದಾರೆ.
ಹೂವಿನಹಡಗಲಿ (ನ.04): ಬಿಜೆಪಿ ಸರ್ಕಾರದ ತಮ್ಮ ಅವಧಿಯ ಅಭಿವೃದ್ಧಿ ಕಾಮಗಾರಿಗಳನ್ನು ನಾನು ಮಾಡಿದ್ದು ಎಂದು ಮತದಾರರ ಬಳಿ ಬಿಂಬಿಸುವ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ದಾಖಲೆಗಳನ್ನು ಹಿಡಿದು ತಾಕತ್ತು ಇದ್ದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಬಿ.ಚಂದ್ರನಾಯ್ಕ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆ, ಪಟ್ಟಣಕ್ಕೆ 22 ಕೋಟಿಗಳ 2ನೇ ಹಂತದ ಕುಡಿವ ನೀರಿನ ಯೋಜನೆ, 100 ಹಾಸಿಗೆ ಆಸ್ಪತ್ರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಪಾಲಿಟ್ನಿಕ್ ಕಾಲೇಜು, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಡವರಿಗೆ 10 ಸಾವಿರ ಬಸವ ವಸತಿ ಯೋಜನೆ ಮನೆಗಳು, 500 ಕೋಟಿ ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಿದ್ದೇವೆ.ಆದರೆ ಈ ಶಾಸಕರು ಈ ಎಲ್ಲ ಕಾಮಗಾರಿಗಳನ್ನು ನಾನು ಮಾಡಿದ್ದು ಎಂದು ಸುಳ್ಳು ಹೇಳಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
undefined
ಬಳ್ಳಾರಿಯಲ್ಲಿ ಕುಕ್ಕರ್ ಪಾಲಿಟಿಕ್ಸ್ ಆರಂಭ: ಪ್ರತಿ ಮನೆಗೊಂದು ಕುಕ್ಕರ್ ಉಡುಗೊರೆ
ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ತಮ್ಮ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಗಳ ದಾಖಲೆಯೊಂದು ಬಹಿರಂಗ ಚರ್ಚೆಗೆ ಬರಲಿ. ನಮ್ಮ ಪಕ್ಷ ಇದಕ್ಕೆ ಸಿದ್ಧವಾಗಿದೆ. ಅನೇಕ ಕಡೆಗಳಲ್ಲಿ ಒಂದೇ ಕಾಮಗಾರಿಯ 2 ಬಿಲ್ ಡ್ರಾ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಎಂ.ಪಿ.ಪ್ರಕಾಶರೇ ಈ ಕ್ಷೇತ್ರದಲ್ಲಿ 2 ಬಾರಿ ಗೆದ್ದಿಲ್ಲ,ನಾನು ಗೆದ್ದು ತೋರಿಸಿದ್ದೇನೆಂದು ಅಹಂಕಾರ ಇದೆ. ನಮ್ಮ ಪಕ್ಷದಲ್ಲಿನ ಕೆಲ ಕಾರಣಗಳಿಂದ ಅವರು ಗೆದ್ದಿದ್ದಾರೆ. ಇವರೊಬ್ಬ ಲಾಟರಿ ಶಾಸಕರಾಗಿ ಆಯ್ಕೆಯಾಗಿದ್ದಾರೆಂದು ಟೀಕಿಸಿದರು.
ಈ ಭಂಡ ಶಾಸಕರನ್ನು ಮರಳಿ ಗೂಡಿಗೆ ಕಳಿಸಲು ಕ್ಷೇತ್ರದ ಮತದಾರರು ಸಿದ್ಧರಾಗಿದ್ದಾರೆ. ಶಾಸಕರ ಭ್ರಷ್ಟಾಚಾರ ಹಾಗೂ ಅವ್ಯವಹಾರ ಕುರಿತು ಪ್ರತಿಯೊಂದು ಹಳ್ಳಿಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಲು ಜನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ. ನ.7ರಂದು ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದವರೆಗೂ ಜಾಥಾ ನಡೆಯಲಿದೆ ಎಂದರು. ಮಂಡಲ ಅಧ್ಯಕ್ಷ ಎಸ್. ಸಂಜೀವರೆಡ್ಡಿ ಮಾತನಾಡಿ,ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಭ್ರಷ್ಟಾಚಾರ, ಅವ್ಯವಹಾರ ಇಂದು ಹಳ್ಳಿ ಮತ್ತು ಗಲ್ಲಿ ಗಲ್ಲಿಗಳಲ್ಲಿ ಚರ್ಚೆಯಾಗುತ್ತಿದೆ, ಸ್ವಪಕ್ಷದವರೇ ಅವರ ಮೇಲೆ ಗಂಭೀರ ಆರೋಪ ಮಾಡಿದ್ದು,ಭ್ರಷ್ಟಾಚಾರಕ್ಕೆ ದಾಖಲೆಗಳ ನೀಡುವ ಅಗತ್ಯವಿಲ್ಲ, ಕಪ್ಪು ಕೋಣೆಯಲ್ಲಿ ನಡೆಯುವ ವ್ಯವಹಾರವಾಗಿದೆ ಎಂದರು.
ಈ ಹಿಂದೆ ಹಗರಿಬೊಮ್ಮನಹಳ್ಳಿಯ ಸ್ವಪಕ್ಷದ ಶಾಸಕ ಭೀಮಾನಾಯ್ಕ ಶಾಸಕರ ಪಿಟಿಪಿ ಮೇಲೆ ಆರೋಪ ಮಾಡಿದ್ದರು. ಆದರೆ ಈವರೆಗೂ ಅವರು ಅದಕ್ಕೆ ಉತ್ತರ ಕೊಟ್ಟಿಲ್ಲ, ಕಾರ್ಯಕರ್ತರನ್ನು ಬೆಳೆಸದೇ ಹರಪನಹಳ್ಳಿಯ ತಮ್ಮ ರಕ್ತ ಸಂಬಂಧಿಗಳನ್ನು ಕರೆ ತಂದು ಗುತ್ತಿಗೆ ಕೆಲಸ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆಂದು ದೂರಿದರು. ಈ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಶಾಸಕರನ್ನು ಪ್ರಶ್ನಿಸುವಂತಹ ಧೈರ್ಯ ಕಳೆದುಕೊಂಡಿದ್ದಾರೆ.ಇಲ್ಲಿನ ಅವರು ಆಡಿದ್ದೇ ಆಟ ಅವರ ವರ್ತನೆಗೆ ಜನ ರೋಸಿ ಹೋಗಿದ್ದಾರೆ,ಒಬ್ಬ ಡಿವೈಎಸ್ಪಿ ಮಹಿಳೆಯ ವೃತ್ತಿ ಜೀವನ ಕೊನೆ ಮಾಡಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಬಳ್ಳಾರಿ: ಕಾಲುವೆ ಬಳಿ ಶ್ರೀರಾಮುಲು ವಾಸ್ತವ್ಯ ಮುಂದುವರಿಕೆ
ಸ್ವ ಪಕ್ಷದವರೇ ಹೇಳುವ ಹಾಗೆ ಶಾಸಕ ಪಿ.ಟಿ.ಪಿ ದುರ್ಯೋಧನ ಪಾತ್ರ ಮಾಡುತ್ತಿದ್ದಾರೆ. ಅವರ ತೊಡೆಯನ್ನು ಮುರಿದು ಹಾಕಲು ಮತದಾರರು ಸಜ್ಜಾಗಿದ್ದಾರೆ. ಅವರಿಗೆ ಕಾಲವೇ ಉತ್ತರ ನೀಡಲಿದೆ, ತಳಕಲ್ಲು ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಕೀಳ ಮಟ್ಟದ ರಾಜಕಾರಣ ಮಾಡಿದ ಇವರನ್ನು ಜನ ಕ್ಷಮಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಈಟಿ ಲಿಂಗರಾಜ, ಜೆ.ಪರಶುರಾಮ, ಎಲ್. ಮಧುನಾಯ್ಕ, ದೂದಾ ನಾಯ್ಕ, ರವಿಕುಮಾರ ನಾಯ್ಕ, ಕೊಟ್ರೇಶ ನಾಯ್ಕ, ರಾಮಾನಾಯ್ಕ, ಶಿವಪುರ ಸುರೇಶ, ಕೆ.ಬಿ.ವೀರಭದ್ರಪ್ಪ ಸೇರಿದಂತೆ ಇತರರಿದ್ದರು.