ಜೆಡಿಎಸ್‌, ಬಿಜೆಪಿ 123 ಸ್ಥಾನ ಗೆದ್ದಿರುವ ಇತಿಹಾಸವಿಲ್ಲ: ಎಚ್‌ಡಿಕೆಗೆ ಚಲುವರಾಯಸ್ವಾಮಿ ತಿರುಗೇಟು

By Govindaraj SFirst Published Dec 29, 2022, 11:07 PM IST
Highlights

ರಾಜ್ಯದಲ್ಲಿ ಜೆಡಿಎಸ್‌ ಅಥವಾ ಬಿಜೆಪಿ 123 ಸ್ಥಾನಗಳನ್ನು ಗೆದ್ದಿರುವ ಇತಿಹಾಸವಿಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ನಾಗಮಂಗಲ (ಡಿ.29): ರಾಜ್ಯದಲ್ಲಿ ಜೆಡಿಎಸ್‌ ಅಥವಾ ಬಿಜೆಪಿ 123 ಸ್ಥಾನಗಳನ್ನು ಗೆದ್ದಿರುವ ಇತಿಹಾಸವಿಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದರು. ತಾಲೂಕಿನ ತಟ್ಟಹಳ್ಳಿಯಲ್ಲಿ ಆಯೋಜಿಸಿದ್ದ ಕರಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಮತ್ತು 2023ರ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿ, ಈ ಹಿಂದೆ ನನ್ನನ್ನು ಸ್ನೇಹಿತ ಎಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ವೇಳೆ ವೈರಿ ಎಂದಿದ್ದಾರೆ.

ಈ ಎರಡು ಬಗೆಯ ಹೇಳಿಕೆಗಳನ್ನು ಜನರೇ ತುಲನೆ ಮಾಡಬೇಕು ಎಂದರು. ಮಾಜಿ ಸಿಎಂ ಎಚ್‌ಡಿಕೆ ಜನರನ್ನು ನಂಬಿಸಲು ಸುಳ್ಳು ಭರವಸೆ ಕೊಡುತ್ತಾರೋ ಅಥವಾ ನಿಜವಾದ ಕಾಳಜಿಯಿಂದ ಭರವಸೆ ಕೊಡುತ್ತಾರೋ ಎಂಬುದನ್ನು ಜನರೇ ಅರ್ಥೈಸಿಕೊಳ್ಳಬೇಕು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಅದನ್ನು 5 ಕೆಜಿಗೆ ಇಳಿಸಿದವರು ಇದೇ ಕುಮಾರಸ್ವಾಮಿ ಸರ್ಕಾರ ಎಂದು ದೂರಿದರು. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ತಲಾ

ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ

10 ಕೆ.ಜಿ. ಅಕ್ಕಿ ಸೇರಿದಂತೆ ಕಳೆದ ನಾಲ್ಕೂವರೆ ವರ್ಷದಲ್ಲಿ ಸ್ಥಗಿತಗೊಂಡಿರುವ ವಸತಿ, ಕೃಷಿಹೊಂಡ, 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಸೇರಿದಂತೆ ಹಲವಾರು ಯೋಜನೆಗಳು ಮತ್ತೆ ಜಾರಿಗೊಳ್ಳಲಿವೆ ಎಂದು ಹೇಳಿದರು. ನಂತರ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಭೆ ನಡೆಸಿದರು. ಜೆಡಿಎಸ್‌ನ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಈ ವೇಳೆ ಚಲುವರಾಯಸ್ವಾಮಿ ಅವರಿಗೆ ತಟ್ಟಹಳ್ಳಿ, ಹರಳಕೆರೆ, ದೊಡ್ಡಯಗಟಿ, ಚಿಕ್ಕಯಗಟಿ, ಹುಳ್ಳೇನಹಳ್ಳಿ, ಕರಡಹಳ್ಳಿ, ದಂಡಿಗನಹಳ್ಳಿ ಹಾಗೂ ಬೀರೇಶ್ವರಪುರ ಗ್ರಾಮಗಳಲ್ಲಿ ಹೆಣ್ಣುಮಕ್ಕಳು ಪೂರ್ಣಕುಂಭ ಸ್ವಾಗತ ಮತ್ತು ಬೆಲ್ಲದ ಆರತಿ ಬೆಳಗಿ ಬರಮಾಡಿಕೊಂಡರು.

Ramanagara: ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಆಯ್ಕೆ ಕುರಿತು ಚುನಾ​ವಣಾ ಸಮಿತಿ ಸಭೆ

ಅಲ್ಲದೇ ಕಾರ್ಯಕರ್ತರು ಕ್ರೇನ್‌ ಹಾಗೂ ಜೆಸಿಬಿ ಯಂತ್ರಗಳ ಮೂಲಕ ಬೃಹತ್‌ ಗಾತ್ರದ ಸೇಬು, ಕೊಬ್ಬರಿ ಮತ್ತು ಗುಲಾಬಿ ಹೂವಿನ ಹಾರದೊಂದಿಗೆ ಹೂಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ಚಲುವರಾಯಸ್ವಾಮಿ ಪುತ್ರ ಸಚ್ಚಿನ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌, ಮಾಜಿ ಅಧ್ಯಕ್ಷ ಎಂ.ಪ್ರಸನ್ನ, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಮನ್ಮುಲ್ ಮಾಜಿ ನಿರ್ದೇಶಕರಾದ ತಟ್ಟಹಳ್ಳಿ ನರಸಿಂಹಮೂರ್ತಿ, ಡಿ.ಟಿ. ಕೃಷ್ಣೇಗೌಡ, ಕರಡಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಶಿವಣ್ಣ, ಮುಖಂಡರಾದ ಉದಯಕಿರಣ್‌, ಬಾಲಾಜಿ, ಗೋವಿಂದೇಗೌಡ, ಕೆ.ಎಂ.ರಾಮು, ರವಿ, ಪ್ರಕಾಶ್‌, ರಮೇಶ್‌ ಸೇರಿದಂತೆ ಹಲವರು ಇದ್ದರು.

click me!