ಯತ್ನಾಳ್‌ ಭವಿಷ್ಯ ಅಂತ್ಯ ಕಾಲ: ರೇಣುಕಾಚಾರ್ಯ ಕಿಡಿ

By Girish Goudar  |  First Published Dec 28, 2023, 8:50 AM IST

ಕೋವಿಡ್‌ನಲ್ಲಿ 8 ಲಕ್ಷ ಖರ್ಚು ಆಗಿದೆ ಎಂದು ಹೇಳುತ್ತೀರಿ. ನೀವು ಐಶಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಹೋಗಿರಬಹುದು. ನೀವೇನು ಯಡಿಯೂರಪ್ಪನವರಿಗೆ 8 ಲಕ್ಷ ನೀಡಿದ್ರಾ?. ನಮಗೂ ಕೋವಿಡ್ ಬಂತು ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆವು: ಎಂ.ಪಿ. ರೇಣುಕಾಚಾರ್ಯ


ದಾವಣಗೆರೆ(ಡಿ.28): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಬೆಳಗಾವಿ ಅಧಿವೇಶನದ ಸಮಯವನ್ನು ತಿಂದು ಹಾಕಿದರು. ಬರದ ವಿಚಾರ ಚರ್ಚೆ ಮಾಡದೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದು ಯತ್ನಾಳ್‌ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ಕೋವಿಡ್‌ನಲ್ಲಿ 8 ಲಕ್ಷ ಖರ್ಚು ಆಗಿದೆ ಎಂದು ಹೇಳುತ್ತೀರಿ. ನೀವು ಐಶಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಹೋಗಿರಬಹುದು. ನೀವೇನು ಯಡಿಯೂರಪ್ಪನವರಿಗೆ 8 ಲಕ್ಷ ನೀಡಿದ್ರಾ?. ನಮಗೂ ಕೋವಿಡ್ ಬಂತು ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆವು ಎಂದು ಹೇಳಿದ್ದಾರೆ. 

Tap to resize

Latest Videos

ರಾಜ್ಯದಲ್ಲಿ ಟಿಪ್ಪು ನೇತೃತ್ವದ ತುಘಲಕ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ನೀವು ಕೊಟ್ಟ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡ್ತಾರೆ ಎಂದರೆ ಹೊಂದಾಣಿಕೆ ಇದರಲ್ಲೇ ಗೊತ್ತಾಗುತ್ತೆ.. ಭ್ರಷ್ಟಾಚಾರ ಮಾಡಿದ್ದಾರೆ ‌ಎಂದು ದಾಖಲೆ ಕೊಡುತ್ತೇನೆ ಎಂದು ಹೇಳುತ್ತಾರೆ. ಬಹಿರಂಗ ಚರ್ಚೆ ಬನ್ನಿ ಎಂದು ಯತ್ನಾಳ್ ಅವರಿಗೆ ರೇಣುಕಾಚಾರ್ಯ ಆಹ್ವಾನ ನೀಡಿದ್ದಾರೆ. 

ದೀಪ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಹಾಗೇ ಅವರ ಅಂತ್ಯ ಕಾಲ ಬಂದಾಗ ಹೀಗೆ ಮಾತನಾಡುತ್ತಾರೆ ಎಂದು ಯತ್ನಾಳ್‌ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. 

ಧಾರ್ಮಿಕ ಕ್ಷೇತ್ರದ ಮೇಲೆ ಕೇಸರಿ ಧ್ವಜ ಹಾಕಬೇಡಿ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳ್ತಾರೆ, ಅಲ್ಪಸಂಖ್ಯಾತರ ಮನೆಯಲ್ಲಿ ಸಂಬಂಧ ಬೆಳೆಸಿದ್ದಕ್ಕೆ ಇಡೀ ಸರ್ಕಾರವನ್ನು ಮುಸ್ಲಿಮರನ್ನಾಗಿ ಮಾಡ್ತಿರಾ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದನ್ನು ಬಿಡಿ ಎಂದು ತಿಳಿಸಿದ್ದಾರೆ. 

click me!