ನಿಮಗೆ ತಾಕತ್ತಿದ್ರೆ ವಿಜಯೇಂದ್ರರನ್ನು ಕೆಳಗಿಳಿಸಿ: ಯತ್ನಾಳ್‌, ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ಸವಾಲ್!

By Girish Goudar  |  First Published Nov 3, 2024, 4:39 PM IST

ಯಡಿಯೂರಪ್ಪ ಬಿಜೆಪಿ ಕಟ್ಟಿ, ಹೋರಾಟ ಮಾಡಿ ಪಾರ್ಟಿ ಕಟ್ಟದೆ ಇದ್ರೆ ನೀವು ಇವತ್ತು ಶಾಸಕರಾಗಿ ಇರ್ತಾ ಇರ್ಲಿಲ್ಲ. ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿಗೆ ಬಂದಿದ್ದು. ನೀವು ಒಬ್ಬರು ಹೇಳಿದ್ರೆ ರಾಜೀನಾಮೆ ಕೋಡಬೇಕಾ. ನಿಮ್ಮನ ಸ್ಟಾರ್ ಮಾಡಿದ್ದೆ ಯಡಿಯೂರಪ್ಪ ಅದನ್ನು ಮರೆತುಬಿಟ್ಟಿರಾ?. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತ ಈ ರೀತಿ ಮಾತ್ನಾಡ್ತಾರೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ 


ದಾವಣಗೆರೆ(ನ.03):  ನಿಮಗೆ ತಾಕತ್ ಇದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಕೆಳಗಿಳಿಸಿ ನೋಡಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ರೇಣುಕಾಚಾರ್ಯ ಅವರು, ಬಿ.ವೈ ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದ್ದು ಕೇಂದ್ರದ ನಾಯಕರು. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಮೇಲೆ ಬಿಜೆಪಿಗೆ ಹೊಸ ರೂಪ ಬಂದಿದೆ. ವಾಲ್ಮೀಕಿ ಹಗರಣ ಬಯಲಿಗೆ ಎಳಿದಿದ್ದೇ ವಿಜಯೇಂದ್ರ ಸಾರಥ್ಯದಲ್ಲಿ. ಮುಡಾ ಬಗ್ಗೆ ಹೋರಾಟ ಮಾಡಿದ್ರು, ವಕ್ಫ್ ಬಗ್ಗೆ ಹೋರಾಟ ಕ್ಕೆ ಕರೆ ಕೊಟ್ಟಿದ್ದಾರೆ. ಬಿಜೆಪಿ ಸಂಘಟನೆ ಆಗಿಲ್ವಾ? ಎಂದು ಪ್ರಶ್ನಿಸಿದ್ದಾರೆ. 
ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಆಗಿ JDS ಗೆ ಹೋಗಿದ್ರಿ. ಅಲ್ಲಿ ಟೀಪು ಸುಲ್ತಾನ್ ಡ್ರೆಸ್ ಹಾಕಿ, ಖಡ್ಗ ಹಿಡಿದಿದ್ದು ಮರ್ತಿದಿರಾ?. ಹಿಂದೂ ಹುಲಿ ಅಂತ ಇವರೆ ಲೇಬಲ್ ಹಾಕಿಕೊಂಡಿದ್ದಾರೆ ಅಂತ ಯತ್ನಾಳ್‌ರನ್ನ ರೇಣುಕಾಚಾರ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

Latest Videos

undefined

ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ ಕಿಡಿ

ಯಡಿಯೂರಪ್ಪ ಬಿಜೆಪಿ ಕಟ್ಟಿ, ಹೋರಾಟ ಮಾಡಿ ಪಾರ್ಟಿ ಕಟ್ಟದೆ ಇದ್ರೆ ನೀವು ಇವತ್ತು ಶಾಸಕರಾಗಿ ಇರ್ತಾ ಇರ್ಲಿಲ್ಲ. ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿಗೆ ಬಂದಿದ್ದು. ನೀವು ಒಬ್ಬರು ಹೇಳಿದ್ರೆ ರಾಜೀನಾಮೆ ಕೋಡಬೇಕಾ. ನಿಮ್ಮನ ಸ್ಟಾರ್ ಮಾಡಿದ್ದೆ ಯಡಿಯೂರಪ್ಪ ಅದನ್ನು ಮರೆತುಬಿಟ್ಟಿರಾ?. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತ ಈ ರೀತಿ ಮಾತ್ನಾಡ್ತಾರೆ. ಬಿಜೆಪಿ ಗೆದ್ದರೆ ವಿಜಯೇಂದ್ರಗೆ ಹೆಸರು ಬರುತ್ತೆ ಅಂತ ಹೇಳಿ ಕಾಂಗ್ರೆಸ್ ಜತೆ ಶಾಮಿಲಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಯಾವುದೇ ಪಕ್ಷ ನಿಷ್ಠೆ ಇಲ್ಲದವರು ನೀವು, ನೀವು ಐದಾರೂ ಜನ ಸೇರಿ ಸಭೆ ಮಾಡ್ತೀರಿ, ನಾವು ಉಪಚುನಾವಣೆ ಮುಗಿದ ಬಳಿಕ ಮಾಜಿ, ಹಾಲಿ, ಶಾಸಕರು ಸೇರಿ ಸಭೆ ಮಾಡ್ತಿವಿ. ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಸಭೆ ಮಾಡ್ತಿವಿ ಕೇಂದ್ರ ನಾಯಕರ ಭೇಟಿ ಮಾಡ್ತಿವಿ. ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತ್ನಾಡಿದ್ರೆ ನಾವು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಿವಿ ಎಂದ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ. 

click me!