ಸಿದ್ದು ಸೋಲಿಸಲು ಕೋಲಾರದ ದಲಿತರು ಕಾಯ್ತಿದ್ದಾರೆ: ಕೆ.ಎ​ಸ್‌.ಈಶ್ವರಪ್ಪ

Published : Mar 02, 2023, 03:40 AM IST
ಸಿದ್ದು ಸೋಲಿಸಲು ಕೋಲಾರದ ದಲಿತರು ಕಾಯ್ತಿದ್ದಾರೆ: ಕೆ.ಎ​ಸ್‌.ಈಶ್ವರಪ್ಪ

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಕೋಲಾರದಲ್ಲಿ 60ಸಾವಿರ ಸಂಖ್ಯೆಯ ದಲಿತ ಸಮಾಜದ ಮುಖಂಡರು ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು. 

ಕೊಳ್ಳೇಗಾಲ (ಮಾ.02): ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಕೋಲಾರದಲ್ಲಿ 60ಸಾವಿರ ಸಂಖ್ಯೆಯ ದಲಿತ ಸಮಾಜದ ಮುಖಂಡರು ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು. ಬಿಜೆಪಿಯವರು ಕ್ಷೇತ್ರ ಹುಡಕಿ ಹೋಗಲ್ಲ, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ್ರು, ಕ್ಷೇತ್ರ ಹುಡುಕಿ ಬಾದಾಮಿಗೆ ಹೋದ್ರು, ಈಗ ಅಲ್ಲಿ ಸೋಲುವ ಬೀತಿಯಿಂದ ಕೋಲಾರಕ್ಕೆ ಹೋಗಿದ್ದಾರೆ, ಕೋಲಾರದಲ್ಲಿ ಸೋಲಿಸಲು ಪರಮೇಶ್ವರ್‌, ಮುನಿಯಪ್ಪ, ಖರ್ಗೆ ಸೇರಿ ಹಲವರು ನಿಮ್ಮ ಸೋಲಿಸಲು ಕಾಯುತ್ತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು. 

ದಲಿತ ನಾಯಕ ಪರಮೇಶ್ವರ್‌ ಸೋಲಿಸಿದ್ದು ಸಿದ್ದರಾಮಯ್ಯ, ಕೆ ಎಚ್‌ ಮುನಿಯಪ್ಪರನ್ನು ಸೋಲಿಸಿದ್ದು, ಅವರ ಶಿಷ್ಯರು, ಇನ್ನು 60ಸಾವಿರ ದಲಿತರಿಗೆ ಕೋಲಾರದಲ್ಲಿ ಸಿಟ್ಟು ಬರದೆ ಇರುತ್ತಾ? ಹಾಗಾಗಿ, ಅಲ್ಲಿ ಸಿದ್ದರಾಮಯ್ಯಅವರಿಗೆ ದಲಿತರೆ ಪಾಠ ಕಲಿಸುತ್ತಾರೆ, ಇನ್ನು ಕುರುಬರ ಮತ ನಂಬಿ ಹೋಗಿದ್ದಾರೆ, ಕುರುಬರ ಹುಲಿ ವರ್ತೂರ್‌ ಪ್ರಕಾಶ್‌ ಇದ್ದಾರೆ, ಹಾಗಾಗಿ, ಈ ಬಾರಿ ಕುರುಬರು ಸಹಾ ವರ್ತೂರು ಬೆಂಬಲಕ್ಕಿದ್ದಾರೆ, ನಿಮಗೊಂದು ಪಾಠ ಕಲಿಸಲಿದ್ದಾರೆ, ಕನಕದಾಸ ಜಯಂತಿಗೆ ರಜಾ ಘೋಷಿಸಿದ್ದು ಯಡಿಯೂರಪ್ಪ, 8ಬಾರಿ ಬಜೆಟ್‌ ಮಂಡಿಸಿದ್ದರೂ ಕನಕದಾಸರು, ರಾಯಣ್ಣ ಹೆಸರಿರಲಿಲ್ಲ, ಕನಕದಾಸರ ಹುಟ್ಟಿದ ಸ್ಥಳ ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ ಎಂದರು.

ಪಕ್ಷ ಸೇರ್ಪಡೆ, ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯ ಕೇಳುವೆ: ಸುಮಲತಾ ಅಂಬರೀಶ್

ಈ ಕಾರ್ಯಕ್ರಮ ನೋಡಿದ್ರೆ, ಇಲ್ಲಿನ ಜನರನ್ನು ಕಣ್ಣಾರೆ ಕಂಡರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಎದೆ ಒಡೆದುಕೊಂಡು ಹೋಗುತ್ತಾರೆ, ವಿಜಯಸಂಕಲ್ಪ ಯಾತ್ರೆಯ ಉದ್ದೇಶವೇ ಬಿಜೆಪಿ 150ಸೀಟ್‌ ಗೆಲ್ಲುವ ಏಕೈಕ ಉದ್ದೇಶಕ್ಕಾಗಿ ಬಿಜೆಪಿಯಲ್ಲಿ ನಾಯಕತ್ವಕ್ಕೆ ಮಣೆ, ಕಾಂಗ್ರೆಸ್‌ ನಲ್ಲಿ ಬರಿ ಬಡಿದಾಟವೇ ಆಗಿದೆ ಎಂದು ವ್ಯಂಗ್ಯವಾಡಿದರು. ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯಿಂದಲೇ ಹೆಚ್ಚು ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಸೋನಿಯಾ, ರಾಹುಲ್‌ ನೋಡಿ ಮತ ನೀಡಲ್ಲ, ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಇನ್ನಿತರರ ನೋಡಿ ಮತ ನೀಡುತ್ತಾರೆ ಎಂದರು ಮೋದಿ ನರಹಂಕತ ಅನ್ನುವ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು, ಪ್ರಪಂಚ ಅವರನ್ನು ವಿಶ್ವನಾಯಕ ಎನ್ನುತ್ತಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಿ ಎಂದರು

ಸ್ವಪಕ್ಷೀಯರೇ ಸಿದ್ದು ಸೋಲಿಸ್ತಾರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲ. ಹಾಗೊಂದು ವೇಳೆ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟುಸೋಲುತ್ತಾರೆ. ಇವರನ್ನು ಸೋಲಿಸಲು ಅವರ ಪಕ್ಷದವರೇ ಸಿದ್ಧತೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಪಾದಿಸಿದರು.

ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ ಸಿ​ದ್ದು ವಿರುದ್ಧ ಡಾ.ಜಿ.ಪರಮೇಶ್ವರ್‌ ಕತ್ತಿ ಮಸೆಯುತ್ತಿದ್ದಾರೆ. ಕೋಲಾರದಲ್ಲಿ ಸೋತ ಕೆ.ಎಚ್‌.ಮುನಿಯಪ್ಪ ಕೋಪಗೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಸೋಲಿಗೂ ಸಿದ್ದು ಕಾರಣವಾಗಿದ್ದು, ಒಂದೆಡೆ ವಿ.ಶ್ರೀನಿವಾಸ್‌ ಪ್ರಸಾದ್‌ ಕೂಡ ಅಸಮಾಧಾನಗೊಂಡಿದ್ದಾರೆ. ಈ ನಾಲ್ಕು ಮಂದಿಯೂ ಕೋಲಾರದಲ್ಲಿ ಇರುವ ದೊಡ್ಡ ಸಂಖ್ಯೆಯ ದಲಿತರ ಮತ ಸಿದ್ದರಾಮಯ್ಯಗೆ ಹೋಗದಂತೆ ನೋಡಿಕೊಳ್ಳುತ್ತಾರೆ. ಇನ್ನು ಕೋಲಾರ ಕುರುಬರ ಸಂಘವು ಬಹಿರಂಗವಾಗಿ ಬಿಜೆಪಿಯ ವರ್ತೂರು ಪ್ರಕಾಶ್‌ಗೆ ಬೆಂಬಲ ಸೂಚಿಸಿದೆ. ಇನ್ನು ಸಿದ್ದರಾಮಯ್ಯನವರಿಗೆ ಉಳಿದಿರೋದು ಮುಸ್ಲಿಂ ಮತಗಳು ಮಾತ್ರ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ