ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪೂರ್ವ ಯೋಜಿತ ಕೃತ್ಯ. ತಲ್ವಾರ್ ಹಿಡಿದು ಭಯ ಹುಟ್ಟಿಸುತ್ತಿದ್ದಾರೆ. ಆದರೆ ತಲ್ವಾರ್‌ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗ (ಅ.03): ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪೂರ್ವ ಯೋಜಿತ ಕೃತ್ಯ. ತಲ್ವಾರ್ ಹಿಡಿದು ಭಯ ಹುಟ್ಟಿಸುತ್ತಿದ್ದಾರೆ. ಆದರೆ ತಲ್ವಾರ್‌ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೂ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತ ಚತುರ್ದಶಿ ದಿನ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಮಾಡಲಾಯಿತು. ಮಕ್ಕಳು, ಮಹಿಳೆಯರು ಎಲ್ಲರೂ ಸೇರಿ ಎರಡು ಲಕ್ಷಕ್ಕೂ ಅಧಿಕ ಜನ ಸೇರಿ ಹಬ್ಬ ಮಾಡಿದರು. ಯಾವುದೇ ಗಲಾಟೆಯಾಗಲಿಲ್ಲ. ಹಿಂದುಗಳು ಲಕ್ಷಾಂತರ ಜನ ಸೇರಿ ಹಲವು ಕಾರ್ಯಕ್ರಮ ಮಾಡಿದರೂ ಗಲಾಟೆಯಾಗಲ್ಲ.
ಆದರೆ, ಭಾನುವಾರ ಮುಸಲ್ಮಾನರ ಮೆರವಣಿಗೆಯಲ್ಲಿ ಗಲಭೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಹರಿಹಾಯ್ದರು. ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ ಎಂದರೆ ಇದು ಹಿಂದೂ ಸಮಾಜಕ್ಕೆ ಎಚ್ಚರಿಕೆನಾ? ಇವರು ಯಾರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು. ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಪೊಲೀಸ್‌ನವರು ಇಲ್ಲಿ ದೊಡ್ಡ ಖಡ್ಗ ಹಾಕಲು ಯಾಕೆ ಬಿಟ್ಟರು? ಎಂದು ಪ್ರಶ್ನಿಸಿದರು.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಮುಸ್ಲಿಂ ಗುಲಾಮರಂತಾದ ಕಾಂಗ್ರೆಸ್ ಸರ್ಕಾರ: ಪೊಲೀಸನವರು ಸರ್ಕಾರಕ್ಕೆ ಹೆದರಿದ್ದಾರೆ. ಇದು ಮುಖ್ಯಮಂತ್ರಿ, ಗೃಹ ಮಂತ್ರಿ ಹಾಗೂ ಮುಸ್ಲಿಂರಿಗೆ ಎಚ್ಚರಿಕೆ. ಇಲ್ಲಿನ ಪೊಲೀಸರು ತಲ್ವಾರ್ ಹಿಡಿದು ಟ್ರ್ಯಾಕ್ಟರ್‌ನಲ್ಲಿ ಹೋದರೂ ಅರೆಸ್ಟ್ ಮಾಡಲ್ಲ ಎಂದರೆ ಇವರು ಪೊಲೀಸರು ಆಗಲು ಅನ್‌ಫಿಟ್. ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಗುಲಾಮರ ರೀತಿಯಾಗಿದೆ ಎಂದು ಗುಡುಗಿದರು. ಮುಸ್ಲಿಂ ಸಮಾಜ ಹಬ್ಬವನ್ನು ಮಾಡಿಲ್ಲ, ಅವರು ಹಿಂದೂ ಸಮಾಜಕ್ಕೆ ಎಚ್ಚರಿಕೆ ನೀಡುವ ರೀತಿ ವರ್ತಿಸಿದ್ದಾರೆ. ಇದೆಲ್ಲಾ ಸರ್ಕಾರಕ್ಕೆ ಗೊತ್ತಿಲ್ಲವೇ? ದುಷ್ಕರ್ಮಿಗಳು ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ.
ಹಿಂದೂ ಮನೆಗಳಿಗೆ ಮಾತ್ರ ಕಲ್ಲು ಹೊಡೆದು, ಒಳ ನುಗ್ಗಿ ದ್ದಾರೆ. ಮುಸ್ಲಿಂ ಮನೆಗಳಿಗೆ ಯಾವುದೇ ಕಲ್ಲು ಬಿದ್ದಿಲ್ಲ. ಕರ್ತವ್ಯದಲ್ಲಿದ್ದ ಹಲವು ಪೊಲೀಸರಿಗೂ ಕಲ್ಲು ಬಿದ್ದಿದೆ ಎಂದು ಕಿಡಿ ಕಾರಿದರು ಪೊಲೀಸರು ಮೆರವಣಿಗೆಗೆ ಅನುಮತಿ ಕೊಟ್ಟ ರೂಟ್ ಬೇರೆ, ಅವರು ಹೋಗಿದ್ದೇ ಬೇರೆ. ಸಂಜೆ 6 ಗಂಟೆಗೆ ಮೆರವಣಿಗೆ ಮುಗಿಸಲು ಹೇಳಿದರೂ 7.30 ವರೆಗೂ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ? ಸರ್ಕಾರ ಬದುಕಿದೆಯಾ? ಅನ್ನಿಸುತ್ತದೆ. ಇದೊಂದು ಸಣ್ಣಪುಟ್ಟ ಗಲಾಟೆ, ಮೆರವಣಿಗೆಯಲ್ಲಿ ಯಾರೂ ತಲ್ವಾರ್ ಹಿಡಿದಿಲ್ಲ ಎನ್ನುವ ಗೃಹಮಂತ್ರಿಗಳು ಇಲ್ಲಿ ಬಂದು ಏರಿಯಾದ ಮನೆಗಳಿಗೆ ಹೋಗಿ ನೋಡಲಿ. ಇವರು ಗೃಹ ಸಚಿವರಾಗಲು ಯೋಗ್ಯರಲ್ಲ ಎಂದು ಕುಟುಕಿದರು.
ತಪ್ಪು ಮಾಡಿದವರಿಗೆ ರಕ್ಷಣೆ: ಶಿವಮೊಗ್ಗದಲ್ಲಿ ಹಿಂದೂ ಸಮಾಜ ಎದ್ದು ನಿಂತರೇ, ಮುಸಲ್ಮಾನ ಸಮಾಜ ಉಳಿಯುತ್ತಾ? ಹಿಂದೂ ಸಮಾಜದ ಯಾರು ಕೂಡ ಕಲ್ಲು ಹೊಡೆದಿಲ್ಲ. ಕಲ್ಲಿನಿಂದ ಹೊಡೆತ ತಿಂದು ಆಸ್ಪತ್ರೆಗೆ ಹೋದರೆ ತಕ್ಷಣವೇ ಡಿಸ್ಚಾರ್ಜ್ ಮಾಡಿಸಿದ್ದಾರೆ. ಹೊಡೆತ ತಿಂದವರನ್ನು ಎಬ್ಬಿಸಿ, ಮನೆಗೆ ಕಳುಹಿಸಿದ್ದಾರೆ ಎಂದ ಈಶ್ವರಪ್ಪ ಸಾವಿರಾರು ಜನ ಗುಂಡಾಗಿರಿ ಮಾಡಿದ್ದಾರೆ. ಆದರೆ ಕೇವಲ 30- 40 ಜನರನ್ನು ಮಾತ್ರ ಅರೆಸ್ಟ್ ಮಾಡಿದ್ದಾರೆ. ಇದು ಸಾಕಾ? ತಪ್ಪು ಮಾಡಿದ ಮುಸ್ಲಿಂರಿಗೆ ನೀವು ರಕ್ಷಣೆ ಮಾಡಿದರೆ ಮತ್ತೆ ಇದನ್ನೇ ಮುಂದುವರೆಸುತ್ತಾರೆ ಎಂದರು.
ಹಾರಂಗಿ ಜಲಾಶಯಕ್ಕೆ ಮತ್ತೆ ಜೀವಕಳೆ: ಕೊಡಗಿನಲ್ಲಿ 3 ದಿನಗಳ ಮಳೆಗೆ ಮೈದುಂಬಿದ ಕಾವೇರಿ
ಇಡೀ ಶಿವಮೊಗ್ಗ ನಗರಕ್ಕೆ ಯಾಕೆ 144 ಸೆಕ್ಷನ್ ಹಾಕಿದ್ದಾರೆ. ವ್ಯಾಪಾರಸ್ಥರು ಏನು ಮಾಡಬೇಕು? ಎಲ್ಲಾ ಕಡೆ ಶಾಂತವಾಗಿದೆ. ಹಿಂದೂ ಸಮಾಜ ಶಾಂತವಾಗಿದೆ. ಎಲ್ಲಿ ಗಲಾಟೆ ನಡೆಯಿತೋ ಆ ಸ್ಥಳದಲ್ಲಿ ನಿಷೇಧಾಜ್ಞೆ ಮಾಡಿ. ಬೇರೆ ಕಡೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಿ. ಶಿವಮೊಗ್ಗ ಶಾಂತಿ ಕಾಪಾಡಲು ಬಿಜೆಪಿ, ಹಿಂದೂ ಸಮಾಜ ಸಹಕಾರ ನೀಡುತ್ತದೆ ಎಂದರು.