2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ

Published : Feb 13, 2023, 03:58 AM IST
2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ

ಸಾರಾಂಶ

ಶ್ರೀರಾಮುಲು ಅವರನ್ನು ಮನೆಯ ಮಗನಂತೆ ಬೆಳೆಸಿ 1999ರಲ್ಲಿ ಮುನಿಸಿಪಾಲಿಟಿ ಸದಸ್ಯರನ್ನಾಗಿ ಮಾಡಿದೆ. 2008ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ಹೆಮ್ಮೆ ನನಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.   

ಗಂಗಾವತಿ (ಫೆ.13): ಶ್ರೀರಾಮುಲು ಅವರನ್ನು ಮನೆಯ ಮಗನಂತೆ ಬೆಳೆಸಿ 1999ರಲ್ಲಿ ಮುನಿಸಿಪಾಲಿಟಿ ಸದಸ್ಯರನ್ನಾಗಿ ಮಾಡಿದೆ. 2008ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ಹೆಮ್ಮೆ ನನಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಭಾನುವಾರ ನಗರದ ಕನಕಗಿರಿ ರಸ್ತೆಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಳ್ಳಾರಿ ನಗರ ವಿಧಾನಸಭೆಗೆ ಸಂಬಂಧಿಸಿದಂತೆ ಎಲ್ಲ 35 ವಾರ್ಡ್‌ಗಳ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನ್ನನ್ನು ಬಂಧಿಸುವ ಮೊದಲು ಕಾಂಗ್ರೆಸ್‌ ವರಿಷ್ಠರು ಬಿಜೆಪಿ ಬಿಟ್ಟು ಬರಲು ಆಮಿಷ ಒಡ್ಡಿದ್ದರು. 

ಅದರೆ ನಾನು ಸುಷ್ಮಾ ಸ್ವರಾಜ್‌ ಅವರಿಗೆ ಕೊಟ್ಟಮಾತು ತಪ್ಪಲಿಲ್ಲ. ಬಿಜೆಪಿ ಬಿಟ್ಟು ಹೋಗಲಿಲ್ಲ. ಆನಂತರ ನನ್ನ ಬಂಧನವಾಯಿತು ಎಂದರು. ಕೆಲವು ದಿನಗಳಲ್ಲಿ ನನ್ನ ಮೇಲಿರುವ ಎಲ್ಲ ಕೇಸುಗಳು ಮುಗಿಯಲಿದ್ದು, ಮತ್ತೆ ನಾನು ಬಳ್ಳಾರಿಗೆ ಹೋಗುವೆ, ಅದರಲ್ಲಿ ಸಂಶಯವಿಲ್ಲ. ನನ್ನ ಜೀವನದಲ್ಲಿ ಬಹಳಷ್ಟುಜನರು ಯಾವುದೋ ಕಾರಣದಿಂದ ಬಂದು ಹೋಗಿದ್ದಾರೆ. ಹೋದವರು ಹೊರಗಿನವರು. ಇದ್ದವರು ಮಾತ್ರ ನನ್ನ ನಿಜವಾದ ಸಂಬಂಧಿಗಳು. ನಾನು ಚುನಾವಣಾ ಎಂಬ ಯುದ್ಧದಲ್ಲಿ ಇಳಿದಿದ್ದೇನೆ. ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು. ಹಿಂಜರಿಕೆ ಮಾತೇ ಇಲ್ಲ. 

ರಾಜ್ಯದ ಎಲ್ಲ ಗೋಶಾಲೆಯಲ್ಲಿ ಚೆಕ್‌ಡ್ಯಾಂ: ಸಚಿವ ಪ್ರಭು ಚವ್ಹಾಣ್‌

ಲಕ್ಷ್ಮೇಅರುಣಾ ಅವರನ್ನು ಎಲ್ಲರೂ ಸೇರಿ ಹೆಚ್ಚಿನ ಬಹುಮತದಿಂದ ಗೆದ್ದು ಬರುವಂತೆ ಆಶೀರ್ವದಿಸಿ ಎಂದರು. ನನಗೆ ಜನ್ಮ ಕೊಟ್ಟತಾಯಿ ನನ್ನಮ್ಮನಾದರೆ ಭಗವಂತ ಕೊಟ್ಟವರ ನನ್ನ ಅರ್ಧಾಂಗಿ ಲಕ್ಷ್ಮೇ ಅರುಣಾ ಎಂದು ಗರ್ವದಿಂದ ಹೇಳುವೆ. ಲಕ್ಷ್ಮೇ ಅರುಣಾ ನಿಮ್ಮ ಮನೆಯ ಝಾನ್ಸಿ ರಾಣಿ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಎಂದು ತಿಳಿದು ಸಂಪೂರ್ಣ ಸಹಕಾರ ನೀಡಿ ಎಂದು ಮನವಿ ಮಾಡಿದರು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೇ ಅರುಣಾ ಮಾತನಾಡಿ, ಈ ಕಾರ್ಯಕ್ರಮ ಬಳ್ಳಾರಿ ನಗರ ವಿಧಾನಸಭೆಯ ಎಲ್ಲ 35 ವಾರ್ಡ್‌ಗಳ ಬೂತ್‌ ಮಟ್ಟದ ಕಾರ್ಯಕರ್ತರದ್ದು. ನಿಮ್ಮ ಸೇವೆ-ಸಹಕಾರ ನಮ್ಮ ಗೆಲುವಿಗೆ ಬುನಾದಿ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಮಹಿಳಾ ಶಾಸಕಿ ಸ್ಥಾನ ಬಯಸಿ ನಿಮ್ಮ ಮನೆಗೆ ಬಂದಿರುವೆ ಎಂದರು. ಪಕ್ಷದ ಗೆಲುವಿಗೆ ಪ್ರಾಮಾಣಿಕ ಕಾರ್ಯಕರ್ತರೇ ಕಾರಣ ಮತ್ತು ಪಕ್ಷಕ್ಕೆ ಜೀವಾಳ. 

ಜನರ ಋುಣ ತೀರಿ​ಸಲು ಪ್ರಾಮಾ​ಣಿಕ ಸೇವೆ: ಯಡಿ​ಯೂ​ರ​ಪ್ಪ

ಗಾಲಿ ಜನಾರ್ದನ ರೆಡ್ಡಿ ಅವರು ಇದುವರೆಗೂ ಸಾಧಿಸಿದ್ದು ಸಾಕಷ್ಟಿದೆ. ಇನ್ನೂ ಸಾಧಿಸುವುದು ಬಹಳಷ್ಟಿದೆ. ನಮ್ಮ ದೇಶವನ್ನು ಕಾಯಲು ಸೈನಿಕರು ಇದ್ದರೆ, ಕಾರ್ಯಕರ್ತರು ಪಕ್ಷವನ್ನು ಕಾಪಾಡುವ ಸೈನಿಕರು. ಮುಂದಿನ ದಿನಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಅಧಿಕಾರ ಸಿಗಬೇಕು. ಅದಕ್ಕಾಗಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕು ಎಂದರು. ಗಾಲಿ ಜನಾರ್ದನ ರೆಡ್ಡಿ ಅವರ ಅಪ್ತ ಮೆಹಬೂಬ್‌ ಅಲಿಖಾನ್‌, ಮುಖಂಡರಾದ ದಮ್ಮೂರ ಶೇಖರ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ರಾಜಶೇಖರ ಗೌಡ, ಮಹಿಳಾ ಅಧ್ಯಕ್ಷ ಆದ ಹಂಪಿರಮಣ, ಅಲ್ಪಸಂಖ್ಯಾತ ಘಟಕದ ಖುತಬ್‌ ಸಾಬ್, ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಬಳ್ಳಾರಿ ನಗರ ಅಧ್ಯಕ್ಷ ನವೀನ್‌, ಉಮರ ರಾಜ್‌, ಶ್ರೀನಿವಾಸ್‌ ಹಾಗೂ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ