ಆರೋಗ್ಯ ಸಚಿವ ಶ್ರೀರಾಮುಲು ಅವರರು ಕೊರೋನಾ ಸೋಂಕಿನಿಂದ ಗುಣಮುಖರಾದ ಬೆನ್ನಲೇ ಇದೀಗ ಅವರ ಸ್ನೇಹಿತ ಜನಾರ್ದನ ರೆಡ್ಡಿ ಅವರವಿಗೂ ಕೊರೋನಾ ವಕ್ಕರಿಸಿದೆ.
ಬೆಂಗಳೂರು, (ಆ.29) : ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ಕೊರೋನಾ ಸೋಂಕು ತಗುಲಿರುವುದು ಧೃಡವಾಗಿದೆ.
ಈ ಬಗ್ಗೆ ಜನಾರ್ಧನ ರೆಡ್ಡಿ ಅವರೇ ಈ ವಿಷಯವನ್ನು ಸಾಮಾಜಿ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದು, ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀರಾಮುಲುಗೆ ಕೊರೋನಾ: ಕುಚುಕು ಗೆಳೆಯನಿಗೆ ರೆಡ್ಡಿ ಹಾರೈಸಿದ್ದು ಹೀಗೆ
'ಇಂದು ಸಂಜೆ ನನಗೆ ಕೊರೊನ ಸೋಂಕು ಧೃಡವಾದ ಹಿನ್ನೆಲೆಯಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ, ಆದ್ದರಿಂದ ನಾನು ಬಳ್ಳಾರಿಗೆ ಭೇಟಿ ನೀಡಲು ಆಗುತಿಲ್ಲ, ಸಚಿವ ಶ್ರೀರಾಮುಲು ಅವರ ತಾಯಿಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ, ನನಗೆ ಯಾವುದೇ ರೋಗದ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್ ಧೃಡವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇಂದು ಸಂಜೆ ನನಗೆ ಕೊರೋನಾ ಸೊಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ನಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ...
Posted by Gali Janardhan Reddy on Saturday, August 29, 2020
ರೆಡ್ಡಿ ಆಸೆ ನಿರಾಸೆಗೊಳಿಸದ ಕೊರೋನಾ
ಹೌದು...ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಜಾಮೀನು ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಆರೋಗ್ಯ ಸಚಿವ ಶ್ರೀರಾಮುಲು ತಾಯಿಯ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಎರಡು ದಿನ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದುಕೊಂಡಿದ್ದರು.
ಆದ್ರೆ, ಕುಚುಕು ಗೆಳೆಯನ ತಾಯಿಯ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳಲು ಕೊರೋನಾ ಅಡ್ಡಿಯಾಗಿದೆ. ಇದರಿಂದ ರೆಡ್ಡಿ ಭಾರೀ ನಿರಾಸೆಯಾಗಿದೆ.
ಮೊನ್ನೇ ಆರೋಗ್ಯ ಸಚಿವ ಶ್ರೀರಾಮುಲು ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದಾಗ ಇದೇ ಜನಾರ್ದನ ರೆಡ್ಡಿ ಅವರು ರೆಡ್ಡಿ ಅವರ ಸ್ನೇಹಿತ ಬೇಗ ಗುಣಮುಖರಾಗಿ ಬರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥಿಸಿದ್ದರು.