ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಮಂಜುನಾಥ್ ವಿಧಿವಶ

By Suvarna NewsFirst Published Feb 3, 2020, 5:41 PM IST
Highlights

2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ, ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಮಂಜುನಾಥ್(92) ವಿಧಿವಶರಾಗಿದ್ದಾರೆ.

ಬೆಂಗಳೂರು/ಚಿತ್ರದುರ್ಗ, (ಫೆ.03): ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಮಂಜುನಾಥ್ (92) ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುನಾಥ್ ಇಂದು (ಸೋಮವಾರ) ಮಧ್ಯಾಹ್ನ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಸೋತವರಿಗೆ ಮಂತ್ರಿಗಿರಿ, ಟೀಂ ಇಂಡಿಯಾದಲ್ಲಿ ರಾಹುಲ್ ಸವಾರಿ; ಫೆ.03ರ ಟಾಪ್ 10 ಸುದ್ದಿ!

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾ. ಜಾಜೂರು ಗ್ರಾಮದವರಾಗಿರುವ ಮಂಜುನಾಥ್ , ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಸರಳ ಸಜ್ಜನಿಕೆಯ ರಾಜಕೀಯಕ್ಕೆ ಗುರುತಾಗಿರುವ, ಧಕ್ಷಿಣ ಭಾರತ ಕಂಡ ಅಪ್ರತಿಮ ದಲಿತ ನಾಯಕ ಮಂಜುನಾಥ್ ಎರಡು ಬಾರಿ ಶಿಕ್ಷಣಮಂತ್ರಿ ಆಗಿದ್ದಲ್ಲದೆ, ಅರಣ್ಯ ಸಚಿವ, ಕಾರ್ಮಿಕ ಮಂತ್ರಿ, ಯೋಜನಾ ಮತ್ತು ಸಾಂಖಿಕ ಹಣಕಾಸುಮಂತ್ರಿ ಹಾಗೂ ವಿಧಾನ ಪರಿಷತ್  ಉಪಸಭಾಪತಿಗಳಾಗಿದ್ದರು.

ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ಅಷ್ಟೇ ಅಲ್ಲದೇ ವಿಧಾನ ಪರಿಷತ್ ಸದಸ್ಯರಾಗಿದ್ದ ಮಂಜುನಾಥ್, ಒಂದು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು. 

ಬಳಿಕ 2012ರಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ತದನಂತದ ಆನಾರೋಗ್ಯದ ಕಾರಣದಿಂದ  ಅವರು ರಾಜಕೀಯದಿಂದ ದೂರ ಉಳಿದಿದ್ದರು. 

click me!